24.7 C
Karnataka
April 3, 2025
ಪ್ರಕಟಣೆ

ಆಮ್ಮೀ ರಂಗಕರ್ಮಿ, ಮುಂಬೈ ತಂಡದ- ಅ. 15, 17 ಮತ್ತು 18  ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೊಂಕಣಿ ನಾಟಕ ಪ್ರದರ್ಶನ.



ಮುಂಬಯಿ ಅ9.   ಆಮ್ಮೀ ರಂಗಕರ್ಮಿ, ಮುಂಬೈ ತಂಡದ ಕೊಂಕಣಿ ನಾಟಕ ಪ್ರದರ್ಶನ ಬೆಂಗಳೂರು ಹಾಗೂ ಮೈಸೂರಿನಲ್ಲಿ – 15, 17 ಮತ್ತು 18 ಆಗೋಸ್ತು, 2024 ರಂದು.

ಶ್ರೇಷ್ಠ  ಕೊಂಕಣಿ ನಾಟಕಗಳ ಲೇಖಕ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡಿನ ಬಾಲಕೃಷ್ಣ ಪುರಾಣಿಕ.ಇವರು ರಚಿಸಿದ ಹಾಗೂ ಪುನರ್ ಲೇಖಕರಾದ ನಾಟಕಕಾರ A G Kamath ರ ಲಿಮ್ಕಾ ಖ್ಯಾತಿ ಡಾ. ಚಂದ್ರಶೇಖರ್ ಶೆಣೈ ನಿರ್ದೇಶಿಸಿದ ಈಗಾಗಲೇ ಕೊಂಕಣಿ ರಂಗಭೂಮಿ ಇತಿಹಾಸದಲ್ಲೇ ಮನೆಮಾತಾಗಿ ಜಯಭೇರಿ ಗಳಿಸಿದ ಲಗ್ನಾ ಪಿಶ್ಶೆ ‘ ಕೊಂಕಣಿ ಹಾಸ್ಯ ಪ್ರಧಾನ ಅಂತೆಯೇ ಸಂಗೀತಮಯ ನಾಟಕದ 3 ಪ್ರದರ್ಶನಗಳು ಇದೇ ಬರುವ 15, ಆಗೋಸ್ತು. ರಿಂದ 18 ರ ಪರ್ಯಂತ ( 16.08.2024 ಹೊರತು ಪಡಿಸಿ ) ಬೆಂಗಳೂರು ಮತ್ತು ಮೈಸೂರು ಇಲ್ಲಿ ಪ್ರದರ್ಶನಗೊಳ್ಳಲಿವೆ.

ಈ ನಾಟಕದ ಪ್ರಸ್ತುತ ಕರ್ನಾಟಕದ ಪ್ರವಾಸದ ಪ್ರಥಮ ಪ್ರಯೋಗವು ಜಿ ಎಸ್ ಬಿ ಜನಸಮುದಾಯದ ಆದೀ ಪೀಠಕ್ಕೆ ಸೇರಿದ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಚಾತುರ್ಮಾಸ್ಯ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳ ಪ್ರಯುಕ್ತ ಗುರುವಾರ,ತಾರೀಖು 15.08.2024, ಸ್ವಾತಂತ್ರೋತ್ಸವ ದಿನದಂದು ಮಧ್ಯಾಹ್ನ 3 ಘಂಟೆಗೆ ಸ್ಥಳೀಯ ಚಾತುರ್ಮಾಸ ಸಮಿತಿ ಪ್ರಾಯೋಜಿಸಿದೆ.

ನಾಟಕ ನಿರ್ಮಾಪಕರಾದ ಎನ್ ಎಸ್ ಕಾಮತ್, ಟಿ ವಿ ಶೆಣೈ ಹಾಗೂ ಸುಧಾಕರ್ ಭಟ್ ರ ನೇತೃತ್ವದಲ್ಲಿ , aammi ರಂಗಕರ್ಮಿ, ಮುಂಬೈ gurukrupa kala ranga, Dahisar ಇವರ ಸಹಯೋಗದಲ್ಲಿ  ‘.ಲಗ್ನಾ ಪಿಶ್ಶೆ ‘ ಕೊಂಕಣಿ ನಾಟಕವನ್ನು ಪ್ರದರ್ಶಿಸಲಾಗುವುದು.

ಸಹನಿರ್ದೇಶಕ ತೋನ್ಸೆ ವೆಂಕಟೇಶ್ ಶೆಣೈ,.ಸಂಗೀತ ನಿರ್ದೇಶಕ ಕೃಷ್ಣ ಚಂದಾವರ್, ಇವರು ಸಹಕರಿಸಲಿರುವರು.

ರಂಗವಿನ್ಯಾಸ, ದೀಪ ಸಂಯೋಜನೆ, ದ್ವನಿ ನಿಯಂತ್ರಣ ಹಾಗೂ ಪಾರ್ಶ್ವ ಸಂಗೀತ.ಜವಾಬ್ದಾರಿ ಸುಧಾಕರ್ ಭಟ್ ಇವರದ್ದು.

ನೇಪಥ್ಯದಲ್ಲಿ ಚೇತನ್ ಶೆಣೈ, ವಸುಧಾ ಪ್ರಭು ಹಾಗೂ ಆನಂದರಾಯ್ ಪ್ರಭು ಇವರು ಸಹಕರಿಸಲಿರುವರು.

ಪಾತ್ರವರ್ಗದಲ್ಲಿ ಸಾರಸ್ವತ ಸಮಾಜ, ಮುಂಬೈ ವಿನೋದಿ ಕಲಾವಿದ ಹರೀಶ್ ಚಂದಾವರ್, ಮುಂಬಯಿಯ ಹಿರಿಯ ಯಕ್ಷಗಾನ ಹಾಗೂ ನಾಟಕ ಕಲಾವಿದರಾದ ವೆಂಕಟೇಶ್ ಶೆಣೈ, ಪ್ರಬುದ್ಧ ನಾಟಕ ಹಾಗೂ ಯಕ್ಷಗಾನ ಕಲಾವಿದೆ ಅಕ್ಷತಾ ಕಾಮತ್,ಯುವ ಪ್ರತಿಭೆ ಪ್ರಮೋದ್ ಮಲ್ಯ, ಹಿರಿಯ ಕಲಾವಿದ ಸುರೇಶ್ ಕಿಣಿ, ಹಾಗೂ ಮುಂಬಯಿ ಮಹಾನಗರದ ಖ್ಯಾತ ಮತ್ತು ಪ್ರಬುದ್ಧ ಕೊಂಕಣಿ -.ಕನ್ನಡ ಹಾಸ್ಯ ರಂಗ ನಟ, ಕನ್ನಡಿಗ.ಕಲಾವಿದರ ಪರಿಷತ್ತು,ಮಹಾರಾಷ್ಟ್ರ.ಸಂಸ್ಥೆಯ ಉಪಾಧ್ಯಕ್ಷ ಕಮಲಾಕ್ಷ ಸರಾಫ್ ರು ಅಭಿನಯಿಸಲಿದ್ದಾರೆ.

ಈ ಸುಂದರ ಮನೋಹರ, ನಾಟಕದ.ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನಾಟಕವನ್ನು ವೀಕ್ಷಿಸಲು ಅಂತೆಯೇ ದೇವ ಗುರು ದರ್ಶನ ಮತ್ತು ಅನುಗ್ರಾಹಗಳನ್ನು ಪಡೆಯಲು ಬೆಂಗಳೂರಿನ ಕೊಂಕಣಿ ರಸಿಕ ಪ್ರೇಕ್ಷಕ ಸಮಾಜ ಬಾಂಧವರಿಗೆ ಆಮಂತ್ರಿಸಲಾಗಿದೆ.Aammi ರಂಗಕರ್ಮಿ ( ರಿ ) ಮುಂಬಯಿ, ಕೊಂಕಣಿ ನಾಟಕದ ತಂಡದವರು ತಮ್ಮ ನಾಟಕದ 14 ನೇಯ ಪ್ರಯೋಗವನ್ನು ಜಿ ಎಸ್ ಬಿ ಸಭಾ, ಮೈಸೂರು ಅಧ್ಯಕ್ಷ ಶ್ರೀ ಜಗನ್ನಾಥ್ ಶೆಣೈ ಯವರ ಸೌಜನ್ಯದಿಂದ ಸ್ಥಳೀಯ ಗೋವಿಂದರಾಯ ಮೆಮೋರಿಯಲ್ ಹಾಲ್, ನಲ್ಲಿ ತಾರೀಖು 17.08.2024 , ಶನಿವಾರದಂದು ಸಾಯಂಕಾಲ 5.30ಕ್ಕೆ ಸರಿಯಾಗಿ ಪ್ರದರ್ಶಿಸಲಿರುವರು. ಅಂತೆಯೇ ತಾರೀಖು, 18.08.2024 ರಂದು ಸಾಯಂಕಾಲ 5.30 ಘಂಟೆಗೆ ಬೆಂಗಳೂರಿನ ವೆಂಕಟರಮಣ ದೇವಸ್ಥಾನ, ಅನಂತ್ ನಗರ ಸಮಿತಿಯ ಸೌಜನ್ಯದಿಂದ ಪ್ರದರ್ಶಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.

Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮುತ್ತುಟ್ ಫೈನಾನ್ಸ್ ಲಿಮಿಟೆಡ್ ನ ಜಂಟಿ ಆಶ್ರಯದಲ್ಲಿ ಅ. 10ಕ್ಕೆ ಸ್ಥನ್ಯ ಪಾನ ಸಪ್ತಾಹ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ :ನಾಳೆ (ನ. 30) ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ಶ್ರೀ ಮಹಾ ವಿಷ್ಣು ಮಂದಿರ – ಡೊಂಬಿವಲಿ, ತಾ.25 ಮತ್ತು 26 ನವೆಂಬರ್ ರಂದು ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ.

Mumbai News Desk

ಕುಲಾಲ ಪ್ರತಿಷ್ಠಾನದ ಆಶ್ರಯದಲ್ಲಿ ನ.23 ರಂದು ವಿಜಯ ಕಲಾವಿದರು ಕಿನ್ನಿಗೋಳಿ ಇದರ ಮುಂಬೈ ಪ್ರವಾಸದ ಉದ್ಘಾಟನೆ

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿಯ ವತಿಯಿಂದ ಆ 15 ರಂದು ಹದಿನೆಂಟನೆಯ ವರ್ಷದ ಸಾಮೂಹಿಕ ಸತ್ಯನಾರಾಯಣ ಮಹಾ ಪೂಜೆ

Mumbai News Desk

ಡಿ.24 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ, ಅನ್ನ ಸಂತರ್ಪಣೆ.

Mumbai News Desk