July 23, 2026
Mumbai News Kannada
ಪ್ರಕಟಣೆ

ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ ಪರೆಂಕಿಲ, ಶಿಮಂತೂರು : ಫೆ. 4ರಿಂದ 6, ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ







ಮುಲ್ಕಿ ಸಮೀಪದ ಶಿಮಂತೂರು ಪರೆಂಕಿಲ ದಲ್ಲಿ ನೂತನವಾಗಿ ನಿರ್ಮಿಸಲಾದ ‘ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ’ದಲ್ಲಿ ನೂತನ ಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವು ಫೆಬ್ರವರಿ 4 ರಿಂದ ಫೆಬ್ರವರಿ 6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಶ್ರೀಯುತ ಕೊರೆಕ್ಕಾನ ತಂತ್ರಿ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಫೆಬ್ರವರಿ 6, 2026ರ ಶುಕ್ರವಾರ ಪೂರ್ವಾಹ್ನ ಗಂಟೆ 9:37ಕ್ಕೆ ಒದಗುವ ಶುಭ ಮೀನ ಲಗ್ನ ಸುಮೂಹೂರ್ತದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಲಿದೆ.
ಫೆಬ್ರವರಿ 4ರ ಬುಧವಾರದಿಂದಲೇ ವಿವಿಧ ಸತ್ಕರ್ಮಗಳು ಆರಂಭವಾಗಲಿದ್ದು, ಮೂರು ದಿನಗಳ ಕಾಲ ನಡೆಯುವ ಈ ಪುಣ್ಯ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ ಟ್ರಸ್ಟ್ ಹಾಗೂ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯನಿರ್ವಹಣಾ ಟ್ರಸ್ಟಿಗಳಾದ ಶ್ರೀಮತಿ ಮತ್ತು ಶ್ರೀ ಸದಾನಂದ ಶೆಟ್ಟಿ ಶಿಮಂತೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮಗಳು :
04- 02-2026, ಬುಧವಾರ

  • ಪ್ರಾತಃಕಾಲ 7:00 ರಿಂದ: ದೇವತಾ ಪ್ರಾರ್ಥನೆ, ಶಿಲ್ಪಿಗಳಿಂದ ಗೇಹ ಪ್ರತಿಗ್ರಹ, ಪಂಚಗವ್ಯ ಪುಣ್ಯಾಹ, ಆಚಾರ್ಯವರಣ, ಪ್ರಾಸಾದ ಶುದ್ಧಿ, ಸಪ್ತಶುದ್ಧಿ, ಗೋನಿವಾಸ, ಮಂಟಪ ಶುದ್ಧಿ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅದ್ಯ ಗಣಯಾಗ, ಬಿಂಬಶುದ್ಧಿ ಹಾಗೂ ಬಿಂಬ ಜಲಾಧಿವಾಸ.
  • ಸಂಜೆ 5:00 ರಿಂದ: ರಕ್ಷೋಘ್ನ ಹವನ, ವಾಸ್ತು ಹವನ, ಬಲಿ, ದಿಕ್ಪಾಲಕ ಪೂಜೆ, ಅಸ್ತ್ರ ಕಲಶ, ಬಿಂಬ ಶುದ್ಧಿ ಕಲಶ, ಶಯ್ಯ ಕಲ್ಪನೆ, ಕುಂಭೇಶ ಕರ್ಕರೀ ಪೂಜೆ, ಸಿದ್ಧಾ ಕಲಶ ಸ್ಥಾಪನೆ ಮತ್ತು ದುರ್ಗಾಪೂಜೆ.
    ದಿನಾಂಕ: 05-02-2026, ಗುರುವಾರ
  • ಪ್ರಾತಃಕಾಲ 7:00 ರಿಂದ: ಗಣಪತಿ ಹವನ, ನವಗ್ರಹ ಹವನ, ಬಿಂಬ ಜಲೋದ್ಧಾರ, ಬಿಂಬ ಅಧಿವಾಸ ಹವನ, ಪ್ರೋಕ್ತ ಶಾಂತಿ ಹವನ, ಬಿಂಬ ಶಯ್ಯಾಧಿವಾಸ, ವಿದ್ಯೇಶ ಕಲಶ ಮತ್ತು ಅಷ್ಟಮಂಗಲ ಸ್ಥಾಪನೆ.
  • ಸಂಜೆ 5:00 ರಿಂದ: ಏಕೋತ್ತರ ಪಂಚಾಶತ್ ಕಲಶ ಪೂಜನ ಪೂರ್ವಕ ಬ್ರಹ್ಮಕಲಶ ಪೂಜೆ, ದುರ್ಗಾಪೂಜೆ, ಕಲಶ ಅಧಿವಾಸ ಹವನ, ಶಕ್ತಿಹವನ, ಅಷ್ಟಬಂಧ ಶುದ್ಧಿ, ಪೀಠ ಪ್ರತಿಷ್ಠೆ ಮತ್ತು ರತ್ನನ್ಯಾಸ ರಕ್ಷೆ.

ದಿನಾಂಕ: 06-02-2026, ಶುಕ್ರವಾರ (ಮುಖ್ಯ ಕಾರ್ಯಕ್ರಮ)

ಪ್ರಾತಃಕಾಲ 7:00 ರಿಂದ ಗಣಪತಿ ಹವನ, ವಿದ್ಯೇಶ ಕಲಶ ಅಭಿಷೇಕ , ಪ್ರಾಯಶ್ಚಿತ್ತ ದಾನಾದಿಗಳು
ಪೂರ್ವಹ್ನ ಗಂಟೆ 9.37ರ ಮೀನಾ ಲಗ್ನದಲ್ಲಿ : ನೂತನ ಬಿಂಬ ಪ್ರತಿಷ್ಠೆ -ಅಷ್ಟ ಬಂಧ ಲೇಪನ, ಕಲಶ ಅಭಿಷೇಕ, ಪಂಚಾಮೃತ ಅಭಿಷೇಕ ಸಹಿತ ಬ್ರಹ್ಮಕುಂಭಾಭಿಷೇಕ, ಅಲಂಕಾರ ಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ

ಸಮಯ: ಮಧ್ಯಾಹ್ನ 3.00 ರಿಂದ ಸಂಜೆ 6.00 ರ ವರೆಗೆ
ಕಥಾ ಕೀರ್ತನ

  • ಕಲಾವಿದರು: ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್
  • ವಿಷಯ: ಪರಬ್ರಹ್ಮ ಶ್ರೀ ಗುರು ನಿತ್ಯಾನಂದ ಚರಿತೆ

ಭಜನಾ ಸಂಕೀರ್ತನೆ :
ಸಮಯ: ಸಂಜೆ ಗಂಟೆ 6.00 ರಿಂದ
ಭಾಗವಹಿಸುವ ಭಜನಾ ಮಂಡಳಿಗಳು:

  • ಶ್ರೀ ಆದಿಜನಾರ್ದನ ಸೇವಾ ಯುವಕ ಮಂಡಲ ಮತ್ತು ಮಹಿಳಾ ಮಂಡಳಿ, ಶಿಮಂತೂರು.
  • ಶ್ರೀ ಕುಂಜಾರಗಿರಿ ಶಾಸ್ತವು ಮಹಾಲಿಂಗೇಶ್ವರ ಭಜನಾ ಮಂಡಳಿ, ಅತಿಕಾರಿಬೆಟ್ಟು.
  • ಶ್ರೀ ವಿಠೋಬಾ ರುಕುಮಾಯಿ ಭಜನಾ ಮಂಡಳಿ, ಪಂಜಿನಡ್ಕ.
  • ಶ್ರೀ ಜಾರಂದಾಯ ಸೇವಾ ಭಜನಾ ಮಂಡಳಿ, ಕುಬೆವೂರು.
  • ಶ್ರೀ ಅಂಬಾ ಭವಾನಿ ಭಜನಾ ಮಂಡಳಿ, ಕವತ್ತಾರು.
  • ಶ್ರೀ ರಾಮ ಮಂದಿರ ಭಜನಾ ಮಂಡಳಿ, ಅಂಗರಗುಡ್ಡೆ.



Related posts

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ, ಸತ್ಸಂಗ.

Mumbai News Desk

ಜೂನ್ 8ರಂದು “ಕನ್ನಡ ವೆಲ್ಫೇರ್ ಸಂಘ” ಜೆರಿಮರಿ, ಕುರ್ಲಾ ಪಶ್ಚಿಮ – ನೂತನ ಸಂಘದ ಉದ್ಘಾಟನೆ.

Mumbai News Desk

ನ. 24 ರಂದು ಶ್ರೀ ಮಹಾದೇವಿ ಮಂತ್ರದೇವತೆ ಸನ್ನಿಧಿ (ರಿ.) ಮುಲುಂಡ್ ಪಶ್ಚಿಮ – 2ನೇ ವರ್ಷದ ಗಗ್ಗರ ಸೇವೆ

Mumbai News Desk

ಚಿತ್ರಕಲಾವಿದ ಜಯ್ ಸಾಲಿಯನ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗೌರವ

Mumbai News Desk

ನ.29 ರಂದು ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯಲ್ಲಿ ‘ಶನಿ ಮಹಾಪೂಜೆ’

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk