
ಊರಿನ ಸಂಪ್ರದಾಯವನ್ನು ಅಪಹಾಸ್ಯ ಮಾಡಿಲ್ಲ. ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನ :ಪ್ರವೀಣ್ ಬೋಜ ಶೆಟ್ಟಿ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ, ಆ9.ಬಂಟರ ಸಂಘ ಮುಂಬಯಿಯ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ “ಆಟಿಡೊಂಜಿ – ಬಂಟ ಕೂಟ” ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ. ಕಾರ್ಯಕ್ರಮವು ಆಗಸ್ಟ್ 4, ರವಿವಾರ ಹೋಟೆಲ್ ಸನ್ ಶೈನ್ ಇನ್ ಮೀರಾ ರೋಡ್ (ಪೂ) ಇಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಹಾಗೂ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಶೆಟ್ಟಿ ಉಪಸ್ಥಿತಿಯಲ್ಲಿ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ವಸಂತಿ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು .
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಎಲ್ಲರಿಗೂ ವಿದ್ಯೆ ಮತ್ತು ವೈದ್ಯಕೀಯ ನೆರವು ಸಿಗುವಂತಹ ಸೇವೆಯ ಹೊಸ ಯೋಚನೆ ಮತ್ತು ಯೋಜನೆಯಾದ ಸಂಜೀವಿನಿ ಎನ್ನು ಚಾಲನೆಗೊಳಿಸಿ ಮಾತನಾಡುತ್ತಾ. ತುಳುನಾಡಿನ ಸಂಸ್ಕೃತಿಯನ್ನು ಈ ನಗರದಲ್ಲಿ ಜೀವಂತವಾಗಿಸುವಲ್ಲಿ ಬಂಟರ ಸಂಘ ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ. ತುಳುನಾಡಿನ ಸಂಪ್ರದಾಯ ಸಂಸ್ಕೃತಿಯನ್ನು ಎಂದು ಅಪಹಾಸ್ಯ ಮಾಡಿಲ್ಲ. ಊರಿನ ಜನ ಮುಂಬೈಯಲ್ಲಿ ಆಟಿದ ಕೂಟ ದ ಮೂಲಕ ನಮ್ಮ ಸಂಪ್ರದಾಯಕ್ಕೆ ಅಪಹಾಸ್ಯ ಮಾಡುತ್ತಾರೆ ಎನ್ನುವ ಮಾತು ಹೇಳುತ್ತಿದ್ದಾರೆ ಆದರೆ ಮುಂಬೈಯ ಸರ್ವ ತುಳುವರು ಯು ವ ಜನಾಂಗಕ್ಕೆ ತಿಳಿಸುವುದಕ್ಕಾಗಿ ಈ ನಗರದಲ್ಲಿ ಜೀವಂತವಾಗಿರಿಸಿದೆ . ಬಂಟರ ಸಂಘ ಸಮಾಜದ ಬಂಧುಗಳಿಗಾಗಿ ವರ್ಷಪೂರ್ತಿ ಕೋಟ್ಯಾಂತರ ರೂಪಾಯಿಯನ್ನು ನೀಡಿ ಅವರ ಶ್ರೀ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯಿಂದ ವರ್ಷಕ್ಕೆ ಸುಮಾರು 25 ಕೋಟಿ ರೂಪಾಯಿ ಸಮಾಜ ಬಂಧುಗಳಿಗೆ ನೀಡುತ್ತಿದೆ. ಮುಂದಿನ ಮೂರು ವರ್ಷದಲ್ಲಿ ಸಂಘಕ್ಕೆ ನೂರು ವರ್ಷ ಪೂರ್ತಿಗೊಳಲಿದೆ ಇದಕ್ಕಾಗಿ ಬಂದು ಸಕ್ರಿಯವಾಗಿ ಸಂಘದ ಕಾರ್ಯವನ್ನು ನಿರ್ವಹಿಸಬೇಕಾಗುವ ಸಂದರ್ಭ ಇದೆ . ಈ ಪರಿಸರದ ಯುವ ನಾಯಕ ಗಿರೀಶ್ ಶೆಟ್ಟಿ ತೆಳ್ಳಾರ್, ಅವರು ತುಳುನಾಡಿನ ಆಚಾರ ವಿಚಾರಗಳನ್ನು ಒಳಗೊಂಡ ಮಾತುಗಳು ಎಲ್ಲರಿಗೂ ಸ್ಪೂರ್ತಿ ತುಂಬಿದೆ. ಬಂಟರ ಸಂಘ ಎನ್ನುವುದಕ್ಕೆ ಅನವರತ ಹೆಸರಿದೆ ಬಡವರಿಗೆ ಸಹಾಯ ಮಾಡುವ ಸಂಘ ಎನ್ನುವ ಶಬ್ದ ಅದರಲ್ಲಿ ಒಳಗೊಂಡಿದೆ. ಬಂಟ ಸಮಾಜದ ಮಕ್ಕಳು ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದಿಂದ ಉನ್ನತ ಶಿಕ್ಷಣದ ವರೆಗೆ ಸುಮಾರು23 ವರ್ಷಗಳ ಕಾಲ ವಿದ್ಯಪಡೆಯಬಹುದು ಅದಕ್ಕೆ 15 ಲಕ್ಷ ರೂಪಾಯಿ ರಿಯಾಯಿತಿ ಇದೆ ಎಂದು ತಿಳಿಸಿದ ಅವರು ಡಾ ಆರ್ ಕೆ ಶೆಟ್ಟಿಯವರು ಯೋಜನೆಯ ಮೂಲಕ ಬಂಟ ಸಮಾಜ ಇನ್ನಷ್ಟು ಬಲಿಷ್ಠ ಗೊಳ್ಳಲಿದೆ. ಯಾವುದೇ ಯೋಜನೆ ಸಂಘದ ಮೂಲಕ ನಡೆದಾಗ ಅದು ಸೂರ್ಯ ಚಂದ್ರರು ಇರುವ ತನಕ ಶಾಶ್ವತವಾಗಿ ಉಳಿಯುತ್ತದೆ ಎಂದು ನುಡಿದರು.





ಸಂಘದ ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಲಯದ ಸಮನ್ವಯಕರಾದ ಖಾಂದೇಶ್ ಭಾಸ್ಕರ್ ಶೆಟ್ಟಿ ಮಾತನಾಡುತ್ತಾ ಈ ಪರಿಸರದಲ್ಲಿ ಇನ್ನಷ್ಟು ದಾನಿಗಳು ಬೆಳೆಯಲಿ ಆ ಮೂಲಕ ಇಲ್ಲಿಯ ಬಡತನದ ಕುಟುಂಬಗಳಿಗೆ ಆಶಯವಾಗು ಕೆಲಸ ಹೆಚ್ಚು ನಡೆಯಲಿ. ಇಂದಿನ ಈ ಕಾರ್ಯಕ್ರಮ ತುಳುನಾಡಿನ ಸಂಸ್ಕೃತಿಯನ್ನು ವೈಭವಕರಿಸಿದೆ ಉತ್ತಮವಾಗಿ ಮೂಡಿಬಂದಿದೆ. ನಾವೆಲ್ಲರೂ ಬಹಳಷ್ಟುಆಟಿದ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ ನಮ್ಮ ತೂಕಗಳು ಹೆಚ್ಚಾಗಿದೆ ಕಾರಣ ಆಟಿಯ ಊಟಗಳು. ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚಲನಚಿತ್ರ ನಟ ಮಹೇಶ್ ಶೆಟ್ಟಿ ಮಾತನಾಡುತ್ತಾ ಬಂಟರ ಸಂಘ ಬಹಳ ಉತ್ತಮ ಸೇವಾಕಾರಿಗಳನ್ನು ಸಮಾಜಕ್ಕೆ ಮಾಡುತ್ತಿದೆ ಅದನ್ನು ನಾನು ಕೇಳುತ್ತಿದ್ದೇನೆ. ಬಂಟ ಸಮಾಜ ಅಭಿವೃದ್ಧಿಯ ಪಥದತ್ತ ಸಾಗಲು ನಾವೆಲ್ಲರೂ ಪ್ರಯತ್ನಿಸುವ ಎಂದು ನುಡಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ ಶೆಟ್ಟಿ, ಜತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ, ಸಮನ್ವಯಕರಾದ ಖಾಂದೇಶ್ ಭಾಸ್ಕರ್ ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ,
ಪ್ರಾದೇಶಿಕ ಸಮಿತಿಯ ಕಾರ್ಯ ಅಧ್ಯಕ್ಷ ಗುತ್ತಿನರು ರವೀಂದ್ರ ಶೆಟ್ಟಿ. ಸಂಚಾಲಕ ಶಿವಪ್ರಸಾದ್ ಶೆಟ್ಟಿ ಮಾಣಿಗುತ್ತು , ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು , ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ, ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್ ಎಸ್ ಶೆಟ್ಟಿ . ಉಪ ಕಾರ್ಯಧ್ಯಕ್ಷೆ ಸುಜಾತ ಪಿ. ಶೆಟ್ಟಿ ,ಕಾರ್ಯದರ್ಶಿ : ಸುಮಂಗಳ ಕಣಂಜಾರ್ , ಕೋಶಾಧಿಕಾರಿ ವಂದನ ಶೆಟ್ಟಿ , ಜೊತೆ ಕಾರ್ಯದರ್ಶಿ ಶಿಲ್ಪ ಶೆಟ್ಟಿ, ಜೊತೆ ಕೋಶಾಧಿಕಾರಿ ಅಶ್ವಿನಿ ಶೆಟ್ಟಿ . ಯುವ ವಿಭಾಗದ ಋಷಭ್ ಕರುಣಾಕರ್ ಶೆಟ್ಟಿ ಕುಕ್ಕುಂದೂರು ಉಪಸ್ಥರಿದ್ದರು.
ಈ ಸಂದರ್ಭದಲ್ಲಿ ಡಾಕ್ಟರ್ ಆರ್ ಕೆ ಶೆಟ್ಟಿ ಮತ್ತು ಗುತ್ತಿನ ರವೀಂದ್ರ ಶೆಟ್ಟಿ ಅವರನ್ನು ಮಹಿಳಾ ವಿಭಾಗದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಿಶೋರ್ ಕುಮಾರ್ ಕುತ್ಯಾರ್. ಡಾಕ್ಟರ್ ಭಾಸ್ಕರ್ ಶೆಟ್ಟಿ ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ವಸಂತಿ ಶೆಟ್ಟಿ ಸ್ವಾಗತಿಸಿದರು .ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಅಶ್ವಿನಿ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.
ಸಭಾ ಕಾರ್ಯಕ್ರಮವನ್ನು ಸಮಿತಿಯ ಗೌರವ ಕಾರ್ಯದರ್ಶಿ ಸಂಘಟಕ ನಿರ್ದೇಶಕ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿ ವಂದಿಸಿದರು. ಜಯಶ್ರೀ ಶೆಟ್ಟಿ ಮತ್ತು ರೇಖಾ ಶೆಟ್ಟಿ ಪ್ರಾರಂಭದಲ್ಲಿ ಪ್ರಾರ್ಥನೆ ಮಾಡಿದರೆ. ವಿಜಯ್ ಶೆಟ್ಟಿ ಮೂಡುಬೆಳ್ಳೆ ಯವರು ಸಭಾ ಕಾರ್ಯಕ್ರಮದಲ್ಲಿ ಪ್ರಾರ್ಥನೆ ನಡೆಸಿದರು.
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿಯವರ ಮೇಲ್ವಿಚಾರಣೆಯಲ್ಲಿ ಊರಿನ ಬಗೆ ಬಗೆಯ ತಿಂಡಿಗಳನ್ನು ಮಹಿಳೆಯರು
ತಯಾರಿಸಿ ತಂದಿದ್ದರು ಅವರ ಹೆಸರುಗಳನ್ನು ಅಶ್ವಿನಿ ಶೆಟ್ಟಿ ತಿಳಿಸಿದರು.
ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಿಕೊಂಡಿದ್ದರು. ವೇದಿಕೆಯ ಮುಂಭಾಗದಲ್ಲಿ ನಮ್ಮೂರಿನ ದವಸ ಧಾನ್ಯಗಳು ಆಕರ್ಷಿಷವಾಗಿತ್ತು.
——–
ಬಂಟ ಸಮಾಜದ ಬಡತನ ನಿರ್ಮೂಲನ ಮುಖ್ಯ ಉದ್ದೇಶ: ಡಾ ಆರ್ ಕೆ ಶೆಟ್ಟಿ
ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ, ಸಂಜೀವಿನಿ ಯೋಜನೆಯ ಮುಖ್ಯ ರೂವಾರಿ ಡಾ| ಆರ್.ಕೆ ಶೆಟ್ಟಿಯವರು ಮಾತನಾಡುತ್ತಾ ಬಂಟ ಸಮಾಜದ ಕಡು ಬಡತನದ ಬಂಧುಗಳನ್ನು ಅಂದೇರಿ -ಬಾಂಧ್ರಾ ಪ್ರಾದೇಶಿಕ ಸಮಿತಿಯ ಕಾರ್ಯ ಧ್ಯಕ್ಷ ಯದ ಸಂದರ್ಭದಲ್ಲಿ ನೋಡಿದ್ದೇನೆ ಅವರಿಗೆ ಬಂಟರ ಸಂಘ ಮತ್ತು ಸಮಾಜದ ಬಂಧುಗಳು ವೈಯಕ್ತಿಕವಾಗಿ ಹಲವಾರು ರೀತಿಯಲ್ಲಿ ಸಹಕಾರವನ್ನು ನೀಡಿದ್ದಾರೆ. ಆದರೆ ನಮ್ಮ ಸಂಘದಲ್ಲಿ ಈಗ ಸುಮಾರು 180 ಕೋಟಿ ರೂಪಾಯಿಯ ಶಾಲೆ ನಿರ್ಮಾಣವಾಗು ದರಿಂದ ಬಡತನದ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಕಷ್ಟವಾಗುವುದು. ನನ್ನದೇ ಸಂಜೀವಿನಿ ಎಂಬ ಸಂಸ್ಥೆ ಮೂಲಕ ಎಲ್ಲರಿಗೂ ವಿದ್ಯೆ ಮತ್ತು ವೈದ್ಯಕೀಯ ನೆರವು ಸಿಗುವಂತಹ ಸೇವೆಯ ಹೊಸ ಯೋಚನೆ ಸಂಜೀವಿನಿ ಪ್ರಾರಂಭಿಸಿದ್ದೇನೆ. ಈ ಯೋಜನೆ ರೂಪುಗೊಳ್ಳುವುದಕ್ಕೆ ಗಿರೀಶ್ ಶೆಟ್ಟಿ ಮತ್ತು ಶಶಿಧರ್ ಶೆಟ್ಟಿ ಮಾತುಗಳು ಮುಖ್ಯ ಕಾರಣವಾಗಿದೆ . ಬಂಟರ ಸಂಘದ ಎಲ್ಲಾ ಒಂಬತ್ತು ಪ್ರಾದೇಶಿಕ ಸಮಿತಿಯ ಸದಸ್ಯರಿಗಾಗಿ ಈ ಯೋಜನೆಯನ್ನು ಬೆಳಕಿಗೆ ತರಲಾಗುತ್ತಿದೆ. ಬಂಟ ಜಾತಿ ಬಾಂಧವರ ಮಕ್ಕಳು ಯಾವುದೇ ಕಾರಣಕ್ಕೂ ವಿದ್ಯೆಯಿಂದ ವಂಚಿತರಾಗಬಾರದು ಎಂಬ ಬಲವಾದ ಅಭಿಲಾಷೆ ಈ ಸಂಜೀವಿನಿಯ ಲೋಕಾರ್ಪಣೆಯ ಉದ್ದೇಶ. ಐದು ಸಾವಿರದಿಂದ ಪ್ರಾರಂಭಿಸಿ ಐದು ಲಕ್ಷ ರೂಪಾಯಿವರೆಗಿನ ಔಷದಾದಿ ಆರೋಗ್ಯ ವೆಚ್ಚದ ಸಂಪೂರ್ಣ ಜವಾಬ್ದಾರಿ ಈ ಮೂಲಕ ವಹಿಸಿಕೊಳ್ಳಲಾಗುತ್ತದೆ ಎಂದು ಸಮಗ್ರವಾಗಿ ಮಾಹಿತಿ ನೀಡಿ.ಬಂಟ ಸಮಾಜದ ಬಡತನ ನಿರ್ಮೂಲನ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.
——-
ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯಲ್ಲಿ ಸಿಸ್ತುಬದ್ಧ ಕಾರ್ಯಕ್ರಮ:ಗಿರೀಶ್ ಶೆಟ್ಟಿ ತೆಳ್ಳಾರ್,
ಬಂಟರ ಸಂಘದ ಜೊತೆ ಕಾರ್ಯದರ್ಶಿ ಮೀರಾ – ಭಯಂದರ್ ನ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ತುಳು ಭಾಷೆಯಲ್ಲಿ ನಿರರ್ಗಳವಾಗಿ ದೈವ ದೇವರುಗಳನ್ನು ಸಾಂಸ್ಕೃತಿಕ ವಿಚಾರಗಳನ್ನು ನೆನಪಿಸುವ ಮೂಲಕ ಮಾತುಗಳನ್ನು ಪ್ರಾರಂಭಿಸಿ ಆಟಿದ ಕೂಟ ಕಾರ್ಯಕ್ರಮ ಪ್ರಥಮ ಬಾರಿ ನಡೆದಿದೆ ಕಾರಣ ಈ ಪರಿಸರದಲ್ಲಿ ವ್ಯವಸ್ಥಿತವಾದ ಸಭಾಂಗಣ ಇರದಿರುವುದು. ಮಳೆಗಾಲದ ಸಂದರ್ಭ ವಾಗಿದ್ದರಿಂದ ನಮ್ಮ ಬಂಧುಗಳು ಯಾವುದೇ ಕಾರ್ಯಕ್ರಮ ನಡೆಸಿದರೆ ಸಾವಿರ ಸಂಖ್ಯೆಯಲ್ಲಿ ಸೇರುತ್ತಾರೆ ಅದನ್ನು ನೆನಪಿಸಿಕೊಂಡು ಮಳೆಗಾಲದ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಕಷ್ಟವಾಗಿದೆ. ಈ ಬಾರಿ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ವಸಂತಿ ಶೆಟ್ಟಿ ಅವರು ಪ್ರಯತ್ನ ಹಾಗೂ ಕಾರ್ಯಾಧ್ಯಕ್ಷರಾಗಿರುವ ರವೀಂದ್ರ ಶೆಟ್ಟಿ ಅವರ ಸಹಕಾರದಿಂದ ಈ ಕಾರ್ಯಕ್ರಮ ಇಲ್ಲಿ ನಡೆದಿದೆ. ಈ ಪರಿಸರದಲ್ಲಿ ಪ್ರಾದೇಶಿಕ ಸಮಿತಿಯ ಯಾವುದೇ ಕಾರ್ಯಕ್ರಮ ನಡೆಸುವುದಾದರೆ ನಮ್ಮ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ಒಗ್ಗಟ್ಟಾಗುತ್ತಾರೆ. ಪ್ರಾದೇಶಿಕ ಸಮಿತಿಯ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯುತ್ತದೆ ಮತ್ತು ಒಗ್ಗಟ್ಟಿನ ಸಂಕೇತ ಕೂಡ ಆಗಿದೆ. ಡಾ. ಆರ್ ಕೆ ಶೆಟ್ಟಿಯವರ ಯೋಜನೆ ಈ ಪರಿಸರದ ಬಹಳಷ್ಟು ಬಂಧುಗಳಿಗೆ ಉಪಯೋಗವಾಗುವಲ್ಲಿ ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದು ನುಡಿದರು