30.9 C
Mumbai
June 8, 2026
Mumbai News Kannada
ಮುಂಬಯಿ

ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 137 ನೇ ವಾರ್ಷಿಕ ಮಹಾಸಭೆ





ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 137 ನೇ ವಾರ್ಷಿಕ ಮಹಾಸಭೆಯು ದಿನಾಂಕ 20.07.2025 ರಂದು ಅಂಧೇರಿ ಪಶ್ಚಿಮದ ಎಮ್. ವಿ . ಎಮ್ ಶಾಲೆಯ ಸಭಾಭವನದಲ್ಲಿ ನೆರವೇರಿತು
ಮುಂಬೈ ಸಭೆಯ ಅಧ್ಯಕ್ಷರಾದ ಮಾಧವ್ ಟಿ ಪುತ್ರನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ದೇವತಾ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು.ನಂತರ ಎಲ್ಲಾ ಸದಸ್ಯರನ್ನು ಸ್ವಾಗತಿಸಿ ಗತ ವರ್ಷದಲ್ಲಿ ನಿಧನರಾದ ಊರಿನ ಮತ್ತು ಮುಂಬೈ ಸಭೆಯ ಸದಸ್ಯರಿಗೆ 2 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಗೌರವ ಕಾರ್ಯದರ್ಶಿ ನಾಗೇಶ್. ಕೆ ಪುತ್ರನ್ ಗತವರ್ಷದ ವರದಿ ಮತ್ತು ಗೌರವ ಕೋಶಾಧಿಕಾರಿ ಶೇಖರ್ ಎಸ್ ಕೋಟ್ಯಾನ್ ಆಯವ್ಯಯ ಪಟ್ಟಿಯನ್ನು ಸಭೆಗೆ ಮಂಡಿಸಿದರು. ಹಾಗೂ ಸಭೆಯಲ್ಲಿ ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ಕಳೆದ ವರ್ಷದ S.S.C. H.S.C, M.B.A. ಇಂಜಿನಿಯರಿಂಗ್ ಹಾಗು ಇನ್ನಿತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಅದೇ ರೀತಿ ದಿ. ಕಿಟ್ಟು ಕೋಟ್ಯಾನ್ ಕಾರ್ ಸ್ಮಾರಕಾರ್ಥ ಅವರ ಮೊಮ್ಮಗ ದಿ. ಕುಶಾಲ್ ದಾಸ್ ಎಸ್ ಕೋಟ್ಯಾನ್‌ ಅವರ ವತಿಯಿಂದ ಕೊಡುವ ಉತ್ತಮ ಕಾರ್ಯಕರ್ತ ಪ್ರಶಸ್ತಿಯನ್ನು ಶ್ರೀ ತೇಜಪಾಲ್ ಪಿ ಪುತ್ರನ್ ರಿಗೆ ನೀಡಿದರೆ ದಿ. ಚನ್ನಪ್ಪ ಬಂಗೇರ ಪಡುಬಿದ್ರಿ ನಡಿಪಟ್ಟ ಸ್ಮಾರಕಾರ್ಥ ಅವರ ಮಗ ದೇವಪ್ಪ ಸಿ ಸಾಲಿಯಾನ್ ಅವರ ವತಿಯಿಂದ ಕೊಡುವ ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಹರ್ಷಿತ್ ಪುಮೋದ್ ಮೆಂಡನ್ ಇವರಿಗೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಘದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮಾಧವ್ ಟಿ ಪುತ್ರನ್, ಜನಾರ್ಧನ್.ಜಿ. ಮೆಂಡನ್, ನಾಗೇಶ್ ಕೆ ಪುತ್ರನ್, ದೇವಪ್ಪ ಸಿ ಸಾಲಿಯಾನ್, ಶೇಖರ್ ಎಸ್ ಕೊಟ್ಯಾನ್ ಮತ್ತು ಉಮೇಶ್ ಆರ್ ಕೋಟ್ಯಾನ್ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದಿದ ಸದಸ್ಯರಾದ ನಾರಾಯಣ ಆರ್ ಕೋಟ್ಯಾನ್, ಕುಮಾರ್ ಆರ್ ಕಾಂಚನ್, ನಾರಾಯಣ ಆರ್ ಕಾಂಚನ್, ಭರತ್‌ ಸುವರ್ಣ, ಶ್ರೀಮತಿ ಚಂದ್ರಾವತಿ ಮೆಂಡನ್, ಮತ್ತು ಶ್ರೀಮತಿ ಸಾವಿತ್ರಿ ರೋಹಿದಾಸ್ ಇವರುಗಳನ್ನು ಗೌರವಿಸಲಾಯಿತು. ಸಭೆಗೆ ಸಹಕರಿಸುತ್ತಿರುವ ಶ್ರೀಮತಿ ಶಾರದ ಕೆ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು. ಮುಂದಿನ 2 ವರ್ಷಗಳ ಅವಧಿಗೆ ಈಗಿರುವ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸಲಾಯಿತು. ಮಹಿಳಾ ವಿಭಾಗಕ್ಕೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಹಿರಿಯ ಸದಸ್ಯರಾದ ನ್ಯಾಯವಾದಿ ಕೃಷ್ಣರಾಜ ಕೋಟ್ಯಾನ್, ಶಂಕರ್ ಪುತ್ರನ್, ಜನಾರ್ಧನ್.ಜಿ. ಮೆಂಡನ್, ನಾರಾಯಣ ಆರ್ ಕೋಟ್ಯಾನ್ ಅವರು ಯೋಗ್ಯ ಸಲಹೆ ಸೂಚನೆ ಇತ್ತರು. ಅಧ್ಯಕ್ಷರಾದ ಶ್ರೀ ಎಂ .ಟಿ. ಪುತ್ರನ್ ಮಾತನಾಡಿ ಸಭೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ ಎಂದರು.
ಕೊನೆಯಲ್ಲಿ ಕಾರ್ಯದರ್ಶಿ ನಾಗೇಶ್.ಪುತ್ರನ್ ವಂದನಾರ್ಪಣೆ ಮಾಡಿದರು.



Related posts

ಭಾರತ್ ಬ್ಯಾಂಕ್‌ನ ಬಾಂದ್ರ ಪೂರ್ವ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮದ ಆಚರಣೆ

Mumbai News Desk

ಮುಂಬಯಿ : ಫೆ. 1ರಿಂದ ಆಟೋರಿಕ್ಷಾ, ಟ್ಯಾಕ್ಸಿ ದರ 3ರೂ. ಏರಿಕೆ.

Mumbai News Desk

ಮೀರಾ-ಭಾಯಂದರ್ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಭಾರತ ಭವನವನ್ನು ವೀಕ್ಷಿಸಿದ ಶಾಸಕ ಪ್ರತಾಪ್ ಸರ್ನಾಯಕ್

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk

ಸಾಲಿಯಾನ್ ಮೂಲಸ್ಥಾನ ಸಭಾ (ಎರ್ಮಾಳು ಬಡಾ) ಮುಂಬೈ ಶಾಖೆಯ ವಾರ್ಷಿಕ ಮಹಾಸಭೆ

Mumbai News Desk

ಮಲಾಡ್ ಕುರಾರ್ ಮಹಾತೋಬಾರ ಶ್ರೀ ಶನಿ ಮಂದಿರದ ನೂತನ ಕಾರ್ಯಾಧ್ಯಕ್ಷರಾಗಿ  ಸೂರ್ಯಕಾಂತ ಜಯ ಸುವರ್ಣ ಆಯ್ಕೆ.

Mumbai News Desk