
ಕಾಪು – ಪೊಲಿಪು : ಕಾಂಚನ್ ಮೂಲಸ್ಥಾನದ ವಾರ್ಷಿಕ ಮಹಾಸಭೆಯು ನಾಗರ ಪಂಚಮಿಯ ಶುಭ ದಿನದಂದು ದಿನಾಂಕ 09.08.24ರಂದು ಕಾಂಚನ್ ಮೂಲಸ್ಥಾನದ ಸಮುದಾಯ ಭವನದಲ್ಲಿ ಅಧ್ಯಕ್ಷರಾದ ಗಣೇಶ್ ಕಾಂಚನ್
ಅವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಿಕೆಯಲ್ಲಿದ್ದ ಅತಿಥಿ ಗಣ್ಯರಾದ ಉಡುಪಿಯ ಡಿ ಎಸ್ ಪಿ ಜೈ ಶಂಕರ್, ಉಡುಪಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ರಮೇಶ್ ಕಾಂಚನ್, ಸಿ ಎ. ಗಣೇಶ್ ಕಾಂಚನ್ ಉಡುಪಿ ಇವರನ್ನು ಗೌರವಿಸಲಾಯಿತು.
ಗೌರವ ಕಾರ್ಯದರ್ಶಿ ಶ್ರೀಧರ್ ಕಾಂಚನ್ ಪೊಲಿಪು,ಗತ ವರ್ಷದ ವರದಿ ವಾಚಿಸಿದರು.
ರಾಜೇಶ್ ಕಾಂಚನ್ ವಾರ್ಷಿಕ ಆಯಾ -ವ್ಯಯ ಪಟ್ಟಿಯನ್ನು ಸಭೆಯ ಮುಂದಿಟ್ಟರು.
ಇದೇ ಸಂಧರ್ಭ 18ನೆ ವರ್ಷದ ಪ್ರತಿಭಾ ಪುರಸ್ಕಾರದಲ್ಲಿ ಸುಮಾರು 38 ಮಕ್ಕಳಿಗೆ ಸುಮಾರು 55 ಸಾವಿರ ರೂಪಾಯಿ ನಗದು ನೀಡಿ ಅಭಿನಂದಿಸಲಾಯಿತು.





ಇದೇ ವೇಳೆ ಕಾಂಚನ್ ಮೂಲಸ್ಥಾನದಲ್ಲಿ ಸುಮಾರು 35 ವರ್ಷಗಳಿಂದ ಸಮಿತಿ ಸದಸ್ಯರಾಗಿ, 20 ವರ್ಷ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪದ್ಮಾವತಿ ಎಂ ಪುತ್ರನ್, ಹಾಗೂ ಸಮಿತಿಯ ಸದಸ್ಯರಾಗಿ 20 ವರ್ಷ ಸೇವೆ ಮಾಡಿದ ಗಿರೀಶ್ ಎಂ ಕಾಂಚನ್, ಇವರನ್ನು ವೇದಿಕೆಯ ಗಣ್ಯರು ಶಾಲು, ಫಲ ಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮಧುಕರ್ ಕಾಂಚನ್ ತಣ್ಣೀರುಭಾವಿ, ಗೌರವ ಅಧ್ಯಕ್ಷ ಭಾಸ್ಕರ ಕಾಂಚನ್ ತಣ್ಣೀರುಭಾವಿ, ಮುಂಬೈ ಸಮಿತಿಯ ಪ್ರತಿನಿಧಿ ಪ್ರಭಾಕರ್ ಕಾಂಚನ್, ಸುಂದರ ಕಾಂಚನ್, ಗಣೇಶ್ ಕಾಂಚನ್ ಹಿರಿಯಡ್ಕ, ಸತೀಶ್ ಕಾಂಚನ್ ಪೊಲಿಪು, ದಿನೇಶ್ ಕಾಂಚನ್ ಉಡುಪಿ ಉಪಸ್ಥಿತರಿದ್ದರು.
ಶ್ರೀಧರ್ ಕಾಂಚನ್ ಕಾರ್ಯಕ್ರಮ ನಿರೂಪಿಸಿದರೆ, ಮಧುಕರ್ ಕಾಂಚನ್ ವಂದಿಸಿದರು.
ಮಾಧವ ಉಪಾದ್ಯಾಯರ ಪಾರೋಹಿತ್ಯದಲ್ಲಿ ನಾಗರ ಪಂಚಮಿಯ ವಿಶೇಷ ಮಹಾಪೂಜೆ ನಡೆದು, ಕೊನೆಗೆ ಸೇರಿದ್ದ ಎಲ್ಲರೂ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಾಗಿಯಾದರು.