32.1 C
Mumbai
June 7, 2026
Mumbai News Kannada
ತುಳುನಾಡು

ಮೂಲ್ಕಿ ಪುನರೂರು ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ






ಮೂಲ್ಕಿ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಜೂ. 13 ಶುಕ್ರವಾರ, ಬೆಳಿಗ್ಗೆ 10.40ಕ್ಕೆ ಶ್ರೀ ದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭವು ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯ ಹಸ್ತದಲ್ಲಿ, ಹಾಗೂ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕಳತ್ತೂರು ಕರುಣಾಕರ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು.


ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ, ವಾಸ್ತು ಪೂಜೆ, ಭೂವರಹ ಹೋಮ, ಶಿಲಾಪೂಜೆ ಬಳಿಕ ಶಿಲಾನ್ಯಾಸ ನಡೆಯಿತು.


ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ “ಉತ್ತರದ ಕಾಶಿಯಿಂದ ನೆಲೆಯಾಗಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಪುನರೂರು ಶ್ರೀ ವಿಶ್ವನಾಥ ದೇವರ ಶಿಲಾನ್ಯಾಸದ ಶುಭ ಮಹೂರ್ತದಲ್ಲಿ ಗಂಗಾಮಾತೆ ಹರಿದು ಬಂದದ್ದು ಶುಭವಾಗಲಿದೆ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ ಕೂಡ ಸಾಧ್ಯ” ಎಂದರು.


ಈ ಸಂದರ್ಭದಲ್ಲಿ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಕ್ಷೇತ್ರದ ಅರ್ಚಕ ಶಶಾಂತ್ ಮುಂಚಿತಾಯ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ವಾಸ್ತು ತಜ್ಞ ಗುಂಡಿಬೈಲು ಸುಬ್ರಮಣ್ಯ ಭಟ್, ಕ್ರಷ್ಣಮೂರ್ತಿ ಆಚಾರ್ಯ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಪೃಥ್ವಿರಾಜ ಆಚಾರ್ಯ ಕಿನ್ನಿಗೋಳಿ, ಪಟೇಲ್ ರಾಮಮೂರ್ತಿ ರಾವ್, ಕ್ಷೇತ್ರದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಜಗನ್ನಾಥ್ ರಾವ್, ಪಡುಬಿದ್ರಿ ಕಸ್ತೂರಿ ಪಂಜ, ಗುರುರಾಜ್ ಎಸ್ ಪೂಜಾರಿ ತೋಕೂರು, ಜೀರ್ಣೋದ್ಧಾರ ಸಮಿತಿಯ ಭುವನಾಭಿರಾಮ ಉಡುಪ, ಸುಧಾಕರ್ ರಾವ್, ದೇವಪ್ರಸಾದ್ ಪುನರೂರು, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ ರಾವ್, ಪುರಂದರ ಶೆಟ್ಟಿಗಾರ್, ನವೀನ್ ಶೆಟ್ಟಿ ಪುನರೂರುಗುತ್ತು, ರವಿ ಶೆಟ್ಟಿ, ಧನಂಜಯ್ ಶೆಟ್ಟಿಗಾರ್, ಪಕ್ಷಿಕೆರೆ ಸುರೇಶ್ ರಾವ್, ನೀರಳಿಕೆ ರಮೇಶ ರಾವ್ ಮೂಡುಮನೆ, ಚಂದ್ರಶೇಖರ್ ರಾವ್, ಎಸ್ಕೊಡಿ ಮತ್ತಿತರರು ಉಪಸ್ಥಿತರಿದ್ದರು.



Related posts

ಅಕ್ಷತಾ ಪೂಜಾರಿ ಮನೆಗೆ ನುಗ್ಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

Mumbai News Desk

ಹಿರಿಯ ಸಮಾಜ ಬಂಧುಗಳ ನಿಸ್ವಾರ್ಥ ಸೇವೆಯೇ ಸಂಘದ ಬೆಳವಣಿಗೆಗೆ ಅಡಿಪಾಯ – ಮೋಹನ್ ದಾಸ್ ಹೆಜ್ಮಾಡಿ

Mumbai News Desk

ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕರ

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೆತ್ತವರು ಮತ್ತು ಮಕ್ಕಳಿಗೆ ಉಪಯುಕ್ತ ಮಾಹಿತಿ ಇರುವ ಕೈ ಪಿಡಿ ಬಿಡುಗಡೆ

Mumbai News Desk

ಉಡುಪಿ : ಪರ್ಯಾಯ ಆಚರಣೆಯ ಅಂಗವಾಗಿ ನಡೆದ ಧಾನ್ಯ ಮುಹೂರ್ತ

Mumbai News Desk

ನಾಗೇಶ ಎಲ್. ಕುಲಾಲ್ ಕುಳಾಯಿ ಅವರು ಸ್ವರ್ಣ ಕುಂಭ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ

Mumbai News Desk