
ದಿನಾಂಕ 08/08/2024 ರಂದು ಗುರುವಾರ ಉಡುಪಿ ರಾಜಂಗಣದಲ್ಲಿ ಜರುಗಿದ ಕುಣಿತ ಭಜನಾ ಸ್ಪರ್ಧೆಯಲ್ಲಿ ಉಡುಪಿ ಪರಿಸರದ ವಿವಿಧ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.
ಉತ್ಸವ ಪ್ರಿಯ ಶ್ರೀ ಕೃಷ್ಣನ ಕಲಾಕ್ಷೇತ್ರ ರಾಜಂಗಣ ದಲ್ಲಿ ನಡೆದ ಭಜನಾ ಸ್ಪರ್ಧೆಯಲ್ಲಿ ಲಕ್ಷೀ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ಹಕ್ಲಾಡಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇವರ ಭಜನಾ ಸೇವೆ ಕಂಡು ಖುಷಿ ಪಟ್ಟ ಶ್ರೀ. ಶ್ರೀ. ಶ್ರೀ. ಡಾ.ಸುಗುಣೀಂದ್ರ ತೀರ್ಥ ಶ್ರೀಪಾದರು ತಮ್ಮ ಗೀತ ಮಂದಿರಕ್ಕೆ ಕರೆಸಿ ಅವರ ಸಮ್ಮುಖದಲ್ಲಿ ಭಜನಾ ಸೇವೆ ಕಣ್ತುಂಬಿಕೊಂಡು ಮಾಣಿಕೊಳಲು ಭಜನಾ ಮಂಡಳಿಯ ಎಲ್ಲಾ ಪುಟಾಣಿ ಮಕ್ಕಳನ್ನು ಗೌರವಿಸಿ, ಮಂತ್ರಾಕ್ಷತೆ ನೀಡಿ, ಕೋಟಿಗೀತಾ ಲೇಖನ ಯಜ್ಞ ಪುಸ್ತಕ ವನ್ನು ನೀಡಿ ಆಶೀರ್ವದಿಸಿದರು.