30.9 C
Mumbai
June 8, 2026
Mumbai News Kannada
ತುಳುನಾಡು

ವಿಶ್ವ ಗಾಣಿಗರ ಚಾವಡಿ ಮಂಗಳೂರು – ಉಚಿತ ವೈದ್ಯಕೀಯ ಶಿಬಿರ






ಬದುಕನ್ನು ಅರ್ಥವತ್ತಾಗಿ ಕಟ್ಟುವ ಹಾಗು ಜೀವನದ ಮೌಲ್ಯವನ್ನು ನಿರೂಪಿಸುವ ಶಿಕ್ಷಣ ಅಗತ್ಯ” – ಶ್ರೀನಿವಾಸ ಸಾಪಲ್ಯ

ಮಂಗಳೂರು :
ವಿಶ್ವ ಗಾಣಿಗರ ಚಾವಡಿ ಮಂಗಳೂರು ಇವರು ಬಂಟ್ವಾಳದ ಸುಮಂಗಲ ಸಭಾಗೃಹದಲ್ಲಿ ಆಯೋಜಿಸಿದ್ದ ಗೆನಾದ ತುಡರ್ ವಿತರಣೆ ಹಾಗೂ ಉಚಿತ ವೈದ್ಯಕೀಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅವರು ತಮ್ಮ ಭಾಷಣದಲ್ಲಿ – “ಬದುಕನ್ನು ಅರ್ಥಪೂರ್ಣವಾಗಿ ಕಟ್ಟಲು ಮತ್ತು ಜೀವನದ ಮೌಲ್ಯವನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸುವ ಶಿಕ್ಷಣ ಅಗತ್ಯ. ಅದು ಮುಂದಿನ ಸಮಾಜದ ಏಳಿಗೆಗೆ ಕಾರಣೀಭೂತವಾಗಬಹುದು. ಕಷ್ಟದಲ್ಲಿರುವವರನ್ನು ಕಂಡು ನಮ್ಮ ಮನಸು ಮರುಗಿದರೆ, ನಮ್ಮ ಹೆತ್ತವರು ‘ಜನ್ಮ ಸಾರ್ಥಕವಾಯಿತು’ ಎನ್ನುತ್ತಾರೆ. ಕಷ್ಟದಲ್ಲಿರುವವರನ್ನು ಗುರುತಿಸಿ ಸಹಾಯ ಮಾಡಿದಾಗ ಭಗವಂತನು ‘ನನ್ನ ಸೃಷ್ಟಿ ಸಾರ್ಥಕವಾಯಿತು’ ಎಂದು ಹೇಳುತ್ತಾನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಹಲವು ವರ್ಷಗಳಿಂದ ಮುಂಬೈ ಹಾಗೂ ಊರಿನ ಬಡಬಗ್ಗ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುತ್ತಿರುವ ಅವರು, ಈ ಕಾರ್ಯಕ್ರಮದಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ (ಪ್ರತಿ ವಿದ್ಯಾರ್ಥಿಗೆ ಒಂದು “ಈ ಗಾಣಿಗ ಸಂಸ್ಥೆ”) ವಿದ್ಯಾಭ್ಯಾಸಕ್ಕಾಗಿ ತನ್ನ ಶ್ರೀನಿವಾಸ್ ಫೌಂಡೇಶನ್ ಮುಖೇನ ಸಹಾಯಹಸ್ತ ನೀಡಿದರು. ಇದರಿಂದ ಮಕ್ಕಳ ಬೆಳವಣಿಗೆಗೆ ಹಾಗು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಒದಗಿಸಿದರು.

ವಿಶ್ವ ಗಾಣಿಗರ ಚಾವಡಿ ಮಂಗಳೂರು ಮಾಡುತ್ತಿರುವ ವಿವಿಧ ಸಮಾಜಪರ ಕಾರ್ಯಗಳು ಪ್ರಶಂಸನೀಯ ಹಾಗು ಮನ್ನಣೀಯ ಎಂದು ತಿಳಿಸಿದ ಶ್ರೀ ಸಾಪಲ್ಯ, ಬಡಬಗ್ಗ ಜನರಿಗೆ 3 ತಿಂಗಳು ಅಥವಾ 6 ತಿಂಗಳಿಗೊಮ್ಮೆ ಮನೆಗೆ ಅಗತ್ಯ ಆಹಾರ ಸಾಮಗ್ರಿ ವಿತರಿಸುವ “ಅನ್ನ ಭಾಗ್ಯ ಯೋಜನೆ”ಯನ್ನು ಸಂಸ್ಥೆಯ ಮುಖೇನ ಪ್ರಾರಂಭಿಸಲು ಪ್ರೇರೇಪಿಸಿದರು. ಇದಕ್ಕಾಗಿ ತಮ್ಮ ಸಂಪೂರ್ಣ ಸಹಕಾರವನ್ನು ಶ್ರೀನಿವಾಸ್ ಫೌಂಡೇಶನ್ ಮುಖೇನ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಂಬೈ ಸಾಫಲ್ಯ ಸಂಘದ ಕಾರ್ಯದರ್ಶಿ ಭಾಸ್ಕರ್ ಸಾಪಳಿಗ, ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಸಪಳಿಗ, ಕೋಶಾಧಿಕಾರಿ ಹೇಮಂತ್ ಸಪಳಿಗ, ರತಿಕ ಸಪಳಿಗ, ಸುಮಂಗಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕಲಡ್ಕ, ಉಪಾಧ್ಯಕ್ಷ ಸಚಿನ್ ಮೆಲ್ಕಾರ್, ಬಂಟ್ವಾಳ ಗಾಣಿಗರ ಸಂಘದ ಉಪಾಧ್ಯಕ್ಷ ಭಾವನೇಶ್ ಸಪಳಿಗ, ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ, ವಿಶ್ವ ಗಾಣಿಗರ ಚಾವಡಿ ಮಂಗಳೂರು ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ, ನಿವೃತ್ತ ಪೊಲೀಸ್ ಅಧಿಕಾರಿ ಮೋಹನ್ ಸಪಳಿಗ, ಸುಂದರ್ ಮೆಂಡನ್, ಗಣೇಶ್ ಕೊಲ್ಲೂರು ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಧನ್ಯವಾದಗಳನ್ನು ಸಲ್ಲಿಸುತ್ತಾ ಬೆಳಿಗ್ಗೆಯಿಂದ ನಡೆದ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ, ಕ್ಯಾನ್ಸರ್ ತಪಾಸಣೆ ಹಾಗು ಇತರ ವೈದ್ಯಕೀಯ ಸೇವೆಗಳನ್ನು ಒದಗಿಸಿದ ಚಿರವಿ ಆಪ್ಟಿಕಲ್ಸ್ ಪಾಣೆಮಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರಕಾರಿ ಆಸ್ಪತ್ರೆ ಲೇಡಿಕೋಶನ್, ಫಾದರ್ ಮುಲ್ಲರ್ ಆಸ್ಪತ್ರೆ ತಂಡಕ್ಕೆ ಹಾಗೂ ಅತಿಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಶ್ರೀನಿವಾಸ ಸಾಪಲ್ಯರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಮಾರಿ ಪಂಚಮಿ ನಳ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಲಿಯುತ್ತಿರುವ ವಿದ್ಯಾರ್ಥಿನಿ, ಪೆನ್ಸಿಲ್ ಬಳಸಿ ರಚಿಸಿದ್ದ ಶ್ರೀನಿವಾಸ ಸಾಪಲ್ಯರ ಭಾವಚಿತ್ರವನ್ನು ಅವರಿಗೆ ಅರ್ಪಿಸಿದಳು. ಅಲ್ಲದೆ ಕುಮಾರಿ ದೀಕ್ಷಿತ, ಶ್ರೀನಿವಾಸ ಸಪಲ್ಯರ ಸಮಾಜಪರ ಕಾರ್ಯ ಮತ್ತು ಅವರಿಗೆ ದೊರೆತ ಗೌರವ-ಸನ್ಮಾನಗಳ ವಿವರವನ್ನು ಸಭೆಯಲ್ಲಿ ಹಂಚಿಕೊಂಡಳು.



Related posts

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Mumbai News Desk

ಉಡುಪಿ : ಜ. 9ರಂದು ಶೀರೂರು ಮಠದ ಶ್ರೀಗಳ ಉಡುಪಿ ‘ಪುರ ಪ್ರವೇಶ’.

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ – ವಿಜೃಂಭಣೆಯಿಂದ ಜರಗಿದ ಗುರುಪೂರ್ಣಿಮ ಮಹೋತ್ಸವ.

Mumbai News Desk

“ಉಡುಪಿ ಆಂಥೆಮ್” ಉಡುಪಿ ಬಗ್ಗೆ ಸುಂದರ ಗೀತೆಯ ವಿಡಿಯೋ ಬಿಡುಗಡೆ

Mumbai News Desk

ಕನ್ನಡ ಕಿರುತೆರೆ ನಟಿ, ‘ಬಿಗ್ ಬಾಸ್’ ಖ್ಯಾತಿಯ ಕಾವ್ಯ ಶಾಸ್ತ್ರೀ ಅವರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಿಗೆ ವಿಶೇಷ ಪೂಜೆ: ನವದುರ್ಗಾ ಲೇಖನ ಸಮರ್ಪಣೆ

Mumbai News Desk

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಬಲಿ ಉತ್ಸವ ಸಂಪನ್ನ

Mumbai News Desk