
ಸಾಮೂಹಿಕ ಪ್ರಾರ್ಥನೆಯಿಂದ ಅಪಾರ ದೈವ ಶಕ್ತಿ – ಲಕ್ಷ್ಮಿ ನಾರಾಯಣ ಆಸ್ರಣ್ಣ .
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ : ಜಗತ್ತಿಗೆ ಶಾಂತಿಯನ್ನು ನೀಡುವುದೇ ಹಿಂದೂ ಧರ್ಮ, ಸಮಾಜದಲ್ಲಿ ಉತ್ತಮ ಕಾರ್ಯ ಮಾಡಿದಲ್ಲಿ ದೇವರು ರಕ್ಷಿಸುತ್ತಾರೆ ಹಾಗೂ ಹಿರಿಯರೂ ಆಶೀರ್ವದಿಸುತ್ತಾರೆ. ಸತ್ಕಾರ್ಯದಿಂದ ದೇವರ ಅನುಗ್ರಹವನ್ನು ಪಡೆಯಬಹುದು. ಇಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯುತ್ತಿದ್ದು ಸಾಮೂಹಿಕ ಪ್ರಾರ್ಥನೆಯಿಂದ ಅಪಾರ ದೈವ ಶಕ್ತಿ ಪ್ರಾಪ್ತಿಯಾಗುವುದು ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಲಕ್ಷ್ಮಿ ನಾರಾಯಣ ಆಸ್ರಣ್ಣ ತಿಳಿಸಿದರು.
ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಇದರ 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.11ರಂದು ಗೋಮಂತಕ್ ಸೇವಾ ಸಂಘ, ಗೋಮಂತಕ್ ಚೌಕ್, ಮಾಲವೀಯ ರಸ್ತೆ, ವಿಲೆ ಪಾರ್ಲೆ ಪೂರ್ವ, ಇಲ್ಲಿ ನಾನಿಲ್ತಾರ್ ಅಭಿಮಾನಿ ಬಳಗ, ಮುಂಬಯಿ ಇದರ ಹರೀಶ್ ಡಿ. ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ಮಾಡುತ್ತಾ ಲಕ್ಷ್ಮಿ ನಾರಾಯಣ ಆಸ್ರಣ್ಣ ಅವರು ಸಾಮೂಹಿಕವಾಗಿ ಎಲ್ಲರೂ ಒಂದೆಡೆ ಸೇರಿ ಒಳ್ಳೆಯ ಒಂದೇ ಮನಸ್ಸಿನಿಂದ ಪ್ರಾರ್ಥನೆ ಮಾಡಿದಲ್ಲಿ ಉತ್ತಮ ಆರೋಗ್ಯ ಸಂಪತ್ತು ದೊರೆಯುವುದು ಮಾತ್ರವಲ್ಲದೆ ಜೀವನದಲ್ಲಿ ಸುಖ ಶಾಂತಿ ದೊರೆಯುವುದು ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರ ದೊರೆಯುವುದು. ಶ್ರೀ ವರಮಹಾಲಕ್ಷ್ಮೀ ಯು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹರೀಶ್ ಡಿ. ಮೂಲ್ಯ ಅವರು ಎಲ್ಲರ ಸಹಕಾರದಿಂದ 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಇಂದು ಭಜನೆ ಮಾಡಿದ ಎರಡು ತಂಡಗಳಿಂದ ಉತ್ತಮ ಭಜನೆ ನಡೆದಿದೆ. ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲರಿಗೆ ಅಭಿನಂದನೆಗಳು. ಯಾವುದೇ ಕೆಲಸ ಯಶಸ್ವಿಯಾಗಲು ತಾಳ್ಮೆ ಅಗತ್ಯ. ಮಹಿಳೆಯರು ಸೇವೆ ನಮ್ಮ ಎಲ್ಲಾ ಕಾರ್ಯಕರ್ತರು ತಾಳ್ಮೆಯಿಂದ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇದೇ ರೀತಿ ನಿಮ್ಮ್ಮೆಲ್ಲರ ಸಹಕಾರ ಪ್ರೋತ್ಸಾಹ ನಮಗಿರಲಿ ಎಂದು ಎಲ್ಲರಿಗು ಕೃತಜ್ಞತೆ ಸಲ್ಲಿಸಿದರು.

ಕುಲಾಲ ಸಂಘ ಮುಂಬಯಿಯ ಗೌರವ ಅಧ್ಯಕ್ಷರಾದ ಪಿ ದೇವದಾಸ್ ಎಲ್ ಕುಲಾಲ್, ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ವಿಜ್ರಂಭಣೆಯಿಂದ ನಡೆದ ಇಂದಿನ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ದೇವರಿಗೆ ಅರ್ಪಣೆಯಾಗಿದೆ. ಕಟೀಲಿನ ಶ್ರೀ ಲಕ್ಷ್ಮಿ ನಾರಾಯಣ ಆಸ್ರಣ್ಣ ಆಶೀರ್ವಾದದೊಂದಿಗೆ ಇಂದಿನ ಧಾರ್ಮಿಕ ಕಾರ್ಯಗಳು ನಡೆದಿದೆ. ನಾನಿಲ್ತಾರ್ ಅಭಿಮಾನಿ ಬಳಗದ ಎಲ್ಲಾ ಕಾರ್ಯಕರ್ತರು ಒಳ್ಳೆಯವರು ಎಂದು ಅಭಿನಂದನೆಯ ನುಡಿಗಳನ್ನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಕಾರ್ಕಳ ತಾಲೂಕು ಪಂಚಾಯತಿನ ಮಾಜಿ ಉಪಾಧ್ಯಕ್ಷ ಗೋಪಾಲ್ ಮೂಲ್ಯ ಅವರು ಮಾತನಾಡುತ್ತಾ ನನಗೆ ಜೀವನ ನೀಡಿದವರು ನಾನಿಲ್ತಾರಿನವರು. ನನ್ನ ಜೀವನದಲ್ಲಿ ಅವರ ಕೊಡುಗೆ ಅಪಾರ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂತೋಷ್ ಭಟ್ ಚಾರ್ಕೋಪ್, ನಲಾಸೋಪಾರ ಸಾಯಿಕೃಪಾ ಹೋಟೆಲಿನ ಅಶೋಕ್ ಶೆಟ್ಟಿ, ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಗಮ ನಿಯಮಿತ ಇದರ ಕಿರಿಯ ಅಭಿಯಂತಕ ರವಿ ಕುಲಾಲ್ ಮತ್ತು ಸಮಾಜ ಸೇವಕಿ ತುಳಸಿ ಬಂಗೇರ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ ಮೂಲ್ಯ ಪಾದೆಬೆಟ್ಟು ಮತ್ತು ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಇದರ ಹಿರಿಯ ಸದಸ್ಯೆ ಕಲ್ಯಾಣಿ ಮಹಾಬಲ ಬಂಗೇರ ಖಾರ್ ಧಾಂಡ ಇವರನ್ನು ಸನ್ಮಾನಿಸಲಾಯಿತು. ಜ್ಯೋತಿ ಬಂಜನ್ ಮತ್ತು ಸರೋಜಾ ಮೂಲ್ಯ ಸನ್ಮಾನಿತರನ್ನು ಪರಿಚಯಿಸಿದರು.
ಸಮಿತಿಯ ಸಂಚಾಲ ಕೃಷ್ಣ ಮೂಲ್ಯ ಅತಿಥಿಗಳನ್ನು ಪರಿಚಯಿಸಿ. ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಬೆಳಿಗ್ಗೆ ಶ್ರೀ ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಹಕಾರವಾಡಿ ಗೊರೆಗಾಂವ್ ಪೂರ್ವ ಮತ್ತು ಗುರುವಂದನಾ ಭಜನಾ ಮಂಡಳಿ, ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿ , ಕುಲಾಲ ಸಂಘ ಮುಂಬಯಿ ಇವರಿಂದ ಭಜನಾ ಸಂಕೀರ್ತನೆ, ಪೂಜಾ ನೃತ್ಯ, ನಡೆಯಿತು. ಸಭಾ ಕಾರ್ಯಕ್ರಮದ ನಂತರ
ಸಂತೋಷ್ ಭಟ್ ಚಾರ್ಕೋಪ್, ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಸುಮಂಗಲೆಯರು ನೂರಾರು ಸಂಖ್ಯೆಯಲ್ಲಿ ಭಗವಹಿಸಿದ್ದರು. ಸಚಿನ್ ಕುಲಾಲ್ ಮತ್ತು ಜ್ಯೋತಿ ದಂಪತಿ ಹಾಗೂ ಅಶೋಕ್ ಸಾಲ್ಯಾನ್ ಮತ್ತು ಕಸ್ತೂರಿ ದಂಪತಿ ಪೂಜಾ ವಿಧಿಯಲ್ಲಿ ಬಾಗವಹಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.
ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ನೃತ್ಯ, ಪರಿಸರದ ವಿವಿಧ ಪ್ರತಿಭೆಗಳಿಂದ, ಬಳಗದ ಮಹಿಳೆಯರಿಂದ ಹಾಗೂ ಸದಸ್ಯರಿಂದ ನಡೆಯಿತು.
ಕಾರ್ಯಕ್ರಮದ ಯಶಸ್ಸಿಗೆ ಬಳಗದ ಉಪಾಧ್ಯಕ್ಷ ದಿನೇಶ್‌ಮೂಲ್ಯ, ಅಂಧೇರಿ, ಕಾರ್ಯದರ್ಶಿ ದಿನೇಶ್‌ಬಂಗೇರ, ಖಾರ್‌ದಾಂಡ , ಕೋಶಾಧಿಕಾರಿ ರೋಹಿದಾಸ್ ಕೆ, ಬಂಜನ್, ನಾಲಾಸೋಪಾರ, ಜೊತೆ ಕಾರ್ಯದರ್ಶಿ ಲೋಕೇಶ್ ಮೂಲ್ಯ, ಗೊರೆಗಾಂವ್, ಜೊತೆ ಕೋಶಾಧಿಕಾರಿ ವಿಶ್ವನಾಥ ಕುಂದರ್, ಅಂಧೇರಿ ಸಲಹಾ ಸಮಿತಿ ಸದಸ್ಯರುಗಳಾದ ಹರೀಶ್ ಕುಲಾಲ್ ಮೀರಾ ರೋಡ್, ಸುರೇಶ್ ವಿ ಬಂಗೇರ ಶೇರ್ ಪಂಜಾಬ್, ಕೇಶವ ಬಂಜನ್, ಜೋಗೇಶ್ವರಿ, ನಾರಾಯಣ ಅರ್ಕ್ಯಾನ್, ಅಂಧೇರಿ, ವಿಠ್ಠಲ್ ಮೂಲ್ಯ ಅಂದೇರಿ, ವಾಮನ್ ಡಿ ಮೂಲ್ಯ ಆಧ್ಯಪಾಡಿ, ಯಶೋದರ ಬಂಗೇರ ಮೀರಾ ರೋಡ್ , ಸರೋಜಾ ಎಚ್ ಮೂಲ್ಯ ಅಂದೇರಿ, ಅರ್ಚನಾ ಎಸ್ ಮೂಲ್ಯ ವಸಯಿ, ಸೌಮ್ಯ ಡಿ ಬಂಗೇರ ಖಾರ್, ನಳಿನಿ ಎನ್. ಬಂಜನ್, ವಿರಾರ್, ವಿಜಯಲಕ್ಷ್ಮಿ ಬಂಜನ್ ನಾಲಾಸೋಪಾರ, ಕವಿತಾ ಸಾಲ್ಯಾನ್, ಮೀರಾ ರೋಡ್, ರೇವತಿ ಮೂಲ್ಯ, ಅಂಧೇರಿ, ಬೇಬಿ ಮೂಲ್ಯ ಜೋಗೇಶ್ವರಿ, ಸುನಿತಾ ಎಸ್. ಮೂಲ್ಯ, ವಿರಾರ್, ದಿವ್ಯಾ ಮೂಲ್ಯ, ಗೋರೆಗಾಂವ್, ದೀಪಾ ಬಂಜನ್, ವಿರಾರ್, ಜ್ಯೋತಿ ಬಂಜನ್ ಡೋಂಬಿವಲಿ, ಸವಿತ ದೇವಾಡಿಗ, ಸುಕೇಶ್ ಮೂಲ್ಯ ವಿರಾರ್, ಶಶಿಕಾಂತ್ ಮೂಲ್ಯ ವಿರಾರ್, ಸದಾಶಿವ ಮೂಲ್ಯ ವಿರಾರ್, ನಿತಿನ್ ಸಿ ಬಂಜನ್ ವಿರಾರ್, ರಮೇಶ್ ಮೂಲ್ಯ ಖಾರ್ಗರ್, ಶಂಕರ್ ಮೂಲ್ಯ ವಸಯಿ, ನಾಗಪ್ಪ ಸಿ ಮೂಲ್ಯ ವಿರಾರ್, ಪ್ರಕಾಶ್ ಮೂಲ್ಯ ಸಾಕಿನಾಕ, ಸಚಿನ್ ಬಂಜನ್ ಡೊಂಬಿವಲಿ, ಸುರೇಶ್ ನಾಯಕ್ ಬಾಂದ್ರಾ, ದಿನೇಶ್ ಪೂಜಾರಿ ಸಾಕಿನಾಕ, ಸುಧಾಕರ್ ಮೂಲ್ಯ ನಲಾಸೋಪಾರ, ದಿನೇಶ್ ಹೆಮ್ಮಾಡಿ ಜೋಗೇಶ್ವರಿ ಸಹಕರಿಸಿದರು
========
ಧರ್ಮ ಕಾರ್ಯ ಮಾಡಲು ಪುಣ್ಯ ಬೇಕು – ಪ್ರವೀಣ್ ಭೋಜ ಶೆಟ್ಟಿ
ಮುಖ್ಯ ಅತಿಥಿತಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಮಾತನಾಡುತ್ತಾ ಹರೀಶ್ ಡಿ. ಮೂಲ್ಯ ಅವರು ನಾನಿಲ್ತಾರ್ ಅಭಿಮಾನಿ ಬಳಗದ ಮೂಲಕ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದು ಸಮಾಜ ಸೇವೆ ಹಾಗೂ ದೇವರ ಸೇವೆ ಮಾಡಲು ಪುಣ್ಯ ಬೇಕು. ಅದಕ್ಕೆ ಸಣ್ಣವರು ದೊಡ್ಡವರು ಅಂತಿಲ್ಲ. ಎಲ್ಲರಲ್ಲೂ ಯೋಗ್ಯತೆ ಇದೆ ಆದರೆ ಅದಕ್ಕೆ ಯೋಗ ಬರಬೇಕು. ಇಂದು ನಮ್ಮ ತುಳು ನಾಡಿನ ಕಟೀಲಿನಿಂದ ಆಸ್ರಣ್ಣರು ಆಗಮಿಸಿ ನಮಗೆಲ್ಲಾ ಆಶೀರ್ವಚನ ಮಾಡಿದ್ದು ಇದು ನಮ್ಮೆಲ್ಲರ ಸೌಬಾಗ್ಯ. ಮಾನವ ಸಂಮಂಧವನ್ನು ಎಲ್ಲರೂ ಕಾಪಾಡೋಣ. ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
———–
ಸನ್ಮಾನಿತರ ನುಡಿ
ಧಾರ್ಮಿಕ ಸೇವೆಯಲ್ಲಿ ನಮ್ಮೆಲ್ಲರನ್ನು ಒಗ್ಗಟ್ಟು ಮಾಡುವ ಶಕ್ತಿ ಇದೆ: ರಘು ಮೂಲ್ಯ ಪಾದೆಬೆಟ್ಟು
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಲಾಲ ಸಂಘದ ಅಧ್ಯಲ್ಷರಾದ ರಘು ಮೂಲ್ಯ ಪಾದೆಬೆಟ್ಟು ಅವರು ಇಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಯವರಂತಹ ಗಣ್ಯರ ಉಪಸ್ಥಿತಿಯಲ್ಲಿ ಕಟೀಲಿನ ಅನುವಂಶಿಕ ಅರ್ಚಕರಾದ ಶ್ರೀ ಲಕ್ಷ್ಮಿ ನಾರಾಯಣ ಆಸ್ರಣ್ಣ ರ ಹಸ್ತದಿಂದ ಸನ್ಮಾನ ಸ್ವೀಕರಿಸಿದ್ದು ನನ್ನ ಸೌಭಾಗ್ಯ. ಇದು ಕುಲಾಲ ಸಮಾಜಕ್ಕೆ ಸಿಕ್ಕಿದ ಆಶ್ರೀವಾದ. ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಇದರಿಂದ ಇನ್ನೂ ಒಳ್ಳೆಯ ಕಾರ್ಯಗಳು ನಡೆಯಲಿ ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ. ಧಾರ್ಮಿಕ ಸೇವೆಯಲ್ಲಿ ನಮ್ಮೆಲ್ಲರನ್ನು ಒಗ್ಗಟ್ಟು ಮಾಡುವ ಶಕ್ತಿ ಇದೆ ಎಂದು ನುಡಿದರು.