
ದಕ್ಷ ಕಾರ್ಯಕ್ರಮಗಳಿಂದ ಅತ್ತ್ಯುತ್ತಮ ಪ್ರಾದೇಶಿಕ ಸಮಿತಿ ಬಿರುದು ಡೊಂಬಿವಲಿ ಪ್ರಾದೇಶಿಕ ಸಮಿತಿಗೆ ಲಭಿಸುವುದರಲ್ಲಿ ಸಂದೇಹವಿಲ್ಲ- ಪ್ರವೀಣ್ ಬಿ. ಶೆಟ್ಟಿ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಅ. 12: ಇಂದು ನಿಮ್ಮ ಅಟಿದ ಸೊಗಸ್ ಕಾರ್ಯಕ್ರಮವೋ ಅಥವ ಪ್ರಾದೇಶಿಕ ಸಮಿತಿಯ ವಾರ್ಷಿಕ ದಿನಾಚರಣೆಯಾ ? ಎಂಬ ಯಕ್ಷ ಪ್ರಶ್ನೆ ನನ್ನನ್ನು ಕಾಡುತ್ತಿದೆ ಇಷ್ಟೊಂದು ಸಂಖ್ಯೆಯ ಮಹಿಳಾ ಸದಸ್ಯರು ಮತ್ತು 175 ಕ್ಕೂ ಮಿಕ್ಕಿ ಸದಸ್ಯೆಯರ ಮನೆಯ ವಿವಿಧ ಅಡುಗೆ, ವೈದ್ಯಕೀಯ ಸೆಮಿನಾರ್, ಶಿಲ್ಪಾ ಸಂತೋಷ ಶೆಟ್ಟಿಯವರ ತುಳು ಭಾಷೆಯ ಹಿಡಿತದ ನಿರೂಪಣೆ ಇಂದಿನ ಎಲ್ಲಾ ಕಾರ್ಯಕ್ರಮ ಗಳನ್ನು ಕಂಡಾಗ ಅತ್ಯುತ್ತಮ ಪ್ರಾದೇಶಿಕ ಸಮಿತಿ ಬಿರುದು ಡೊಂಬಿವಲಿ ಪ್ರಾದೇಶಿಕ ಸಮಿತಿಗೆ ಲಭಿಸುವುದರಲ್ಲಿ ಸಂದೇಹವಿಲ್ಲ. 90% ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಗೌರವ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಪಾಸದ ಮನೀಷ್ ರೈ ಯನ್ನು ಸನ್ಮಾನಿಸಿದ್ದು ನನ್ನ ಮನಸ್ಸಿಗೆ ಬಹಳಷ್ಟು ಮುದ ನೀಡಿದೆ ಸಿಎ ಕಲಿಯಲು ಬಹಳಷ್ಟು ಶ್ರಮ ವಹಿಸ ಬೇಕಾಗುತ್ತದೆ ಈ ಬವಣೆಯನ್ನು ನಾನು ಕಂಡವ ಮೊದಲ ಪ್ರಯತ್ನದಲ್ಲೇ ಪಾಸದ ಮನಿಷ್ ರೈಗೆ ನನ್ನ ವೈಯಕ್ತಿಕ ಪರವಾಗಿ ಒಂದು ಲಕ್ಷ ರೂಪಾಯಿ ನೀಡುತ್ತೇನೆ. ನಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಸಂಘ ಸಮಾಜ ಬಾಂಧವರ ವಿದ್ಯಾರ್ಜನೆಗೆ ಅತೀ ಹೆಚ್ಚಿನ ರಿಯಾಯಿತಿ ನೀಡುತ್ತಿದ್ದೇವೆ ಇದರ ಲಾಭವನ್ನು ಸಮಾಜ ಬಾಂಧವರು ಪಡೆಯ ಬಹುದು. ಸಂಘಕ್ಕೆ 100 ವರ್ಷ ತುಂಬುವ ಸಮಯದಲ್ಲಿ ಬಂಟ ಸಮಾಜದಲ್ಲಿ ಅರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರು ಇರಬಾರದು ಎಂಬ ಉದ್ಧೇಶದಿಂದ ಕಾರ್ಯದರ್ಶಿ ಆರ್.ಕೆ. ಶೆಟ್ಟಿಯವರ ಸಂಜೀವಿನಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಈ ಯೋಜನೆ ಅರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಕಣ್ಣೀರು ಒರೆಸುವಲ್ಲಿ ಸಹಕಾರಿಯಾಗಲಿದೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು.








ಅವರು ಅ. 11 ರ ರವಿವಾರ ಡೊಂಬಿವಲಿ ಎಂ.ಐ.ಡಿಸಿ ಪರಿಸರದಲ್ಲಿರುವ ಹೋಟೆಲ್ ಶಿವಂ ನ ಸಭಾಗೃಹ ದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಜರಗಿದ ಅಟಿದ ಸೊಗಸ್ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರ್ ಮಾತನಾಡುತ್ತಾ ಈ ಕಾರ್ಯಕ್ರಮ ಯಶಸ್ವಿಯಾಗಲು ದಾನಿಗಳ ಸಹಕಾರ, ಕಾರ್ಯಾಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಬಹಳಷ್ಟು ಶ್ರಮಿಸಿದ್ದಾರೆ ಅದುದರಿಂದ ಈ ಕಾರ್ಯಕ್ರಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಮಾಜ ಬಾಂಧವರು ನೆರೆದಿದ್ದಾರೆ ರಾಮಾಯಣದಲ್ಲಿ ಲಕ್ಷ್ಮಣ ನ ಜೀವ ಉಳಿಸಿದ್ದು ಸಂಜೀವಿನಿ, ಡಾ. ಆರ್.ಕೆ ಶೆಟ್ಟಿಯವರು ಸಂಜೀವಿನಿ ಯೋಜನೆ ಮೂಲಕ 9 ಪ್ರಾದೇಶಿಕ ಸಮಿತಿಯ ಬಂಟ ಸಮಾಜ ಬಾಂಧವರ ಜೀವನ ಉದ್ದಾರ ವಾಗುವುದರಲ್ಲಿ ಸಂದೇಹವಿಲ್ಲ, ಬಂಟರ ಸಂಘ ಪ್ರಾದೇಶಿಕ ಸಮಿತಿಯ ಸಮಾಜ ಬಾಂದವರ ಕಷ್ಠಗಳಿಗೆ ಸ್ಪಂದನೆ ನೀಡುತ್ತದೆ ಎಂದರು.
ಪೂರ್ವವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ ಶೆಟ್ಟಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯ ಉತ್ತಮ ಅರ್ಥಪೂರ್ಣ ಕಾರ್ಯಕ್ರಮ, ನಮಗೆಲ್ಲ ಹಿಂದಿನ ದಿನಗಳಲ್ಲಿ ಅಟಿ ತಿಂಗಳಲ್ಲಿ ಊಟಕ್ಕೂ ಅನಾನೂಕೂಲವಿತ್ತು ಇಂದು ಪ್ರತಿಯೊಬ್ಬರ ಜೀವನ ಶೈಲಿ ಸುಧಾರಣೆ ಗೊಂಡಿದೆ ಆಶೋಕ್ ಶೆಟ್ಟಿ ಮೂಂಡ್ಕೂರು ಹಾಗೂ ಅವರ ಸಂಗಡಿಗರೂ, ಕಾರ್ಯಕಾರಿ ಸಮಿತಿ,ಮಹಿಳಾ ವಿಭಾಗ,ಯುವ ವಿಭಾಗ ಬಹಳ ಸಹಕಾರ ನೀಡಿದ್ದಾರೆ. ಡಾ. ಆರ್.ಕೆ ಶೆಟ್ಟಿಯವರ ಸಂಜೀವಿನಿ ಯೋಜನೆಯಿಂದ ಡೊಂಬಿವಲಿ ಪರಿಸರದ ಸಮಾಜ ಬಾಂಧವರಿಗೆ ಬಹಳಷ್ಟು ಉಪಯೋಗವಾಗಲಿದೆ. ಡೊಂಬಿವಲಿಯಲ್ಲಿ 700 ಅರ್ಜಿಗಳು ವಿಲೇವಾರಿ ಯಾಗುತ್ತಿತ್ತು ಅದರೆ ಇಂದು 350 ಅರ್ಜಿಗೆ ಬಂದಿದೆ ಸಂಜೀವಿನಿ ಯೋಜನೆಯ ಲಾಭದಿಂದ ಡೊಂಬಿವಲಿ ಪರಿಸರದಲ್ಲಿ ಅರ್ಥಿಕವಾಗಿ ಹಿಂದುಳಿದ ಬಂಟರಿಲ್ಲ ಎನ್ನುವಂತಾಗಲಿ ಎಂದರು.








ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಮತ್ತು ಯೋಗಿನಿ ಶೆಟ್ಟಿಯವರ ಮುಂದಾಳುತ್ವದಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿದೆ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ ಅನಂದ ಶೆಟ್ಟಿ ಮತ್ತು ಯೋಗಿನಿ ಶೆಟ್ಟಿಯವರ ಸಂಘಟಿತ ಕೆಲಸ ಕಾರ್ಯ ನೋಡುವಾಗ ಮನಸ್ಸಿಗೆ ಬಹಳಷ್ಟು ಮುದ ನೀಡುತ್ತಿದೆ. ಬಂಟರ ಸಂಘದಲ್ಲಿ ಶುಕ್ರವಾರ ಮಹಿಳಾ ವಿಭಾಗದಿಂದ ಶ್ರಾವಣ ತಿಂಗಳ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸ ಬೇಕೆಂದರು.










ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ. ಸಂಗೀತಾ ಸತ್ಯಪ್ರಕಾಶ್ ಶೆಟ್ಟಿಯವರಿಂದ ಮಹಿಳೆಯರ ಅರೋಗ್ಯದ ಬಗ್ಗೆ ಕಾಳಜಿ ವಹಿಸುವ ವೈದ್ಯಕೀಯ ಸೆಮಿನಾರ್ ನಡೆಯಿತು.
ಮಕ್ಕಳು, ಮಹಿಳೆಯರಿಂದ ವಿವಿಧ ನೃತ್ಯ, ಮಹಿಳೆಯರಿಂದ ಕಿರು ನಾಟಕ,ಅಟಿ ಕಳಂಜ ಪ್ರಾತೀಕ್ಷತೆ ನಡೆಯಿತು ಆಟಿ ಕಳಂಜ ಪಾರ್ದನವನ್ನು ಸುನಂದ ಶೆಟ್ಟಿ ಸುನಂದಾ ಶೆಟ್ಟಿ, ಆರತಿ ರೈ, ಮಮತಾ ರೈ, ಜಯಂತಿ ಶೆಟ್ಟಿ ಹಾಡಿದರು, ಸಂಜೀವಿನಿ ಯೋಜನೆಯನ್ನು ದೀಪ ಬೆಳಗಿಸಿ ಗಣಪತಿ ದೇವರಿಗೆ ಸುತ್ತಿಗೆ ಇಟ್ಟು ಅದನ್ನು ಯೋಜನೆಯ ರೂವಾರಿಯಾದ ಡಾ. ಆರ್. ಕೆ. ಶೆಟ್ಟಿಯವರಿಗೆ ನೀಡಿ ವಿಶೇಷವಾಗಿ ಉದ್ಘಾಟಿಸಲಾಯಿತು
ಇದೇ ಸಂದರ್ಬದಲ್ಲಿ ಇತ್ತೀಚೆಗೆ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮನೀಷ್ ರೈ ಯನ್ನು ಸನ್ಮಾನಿಸಲಾಯಿತು ಹಾಗೂ ಎಸ್.ಎಸ್.ಸಿ ಯಲ್ಲಿ ಮತ್ತು ಎಚ್.ಎಸ್.ಸಿ ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರಖ್ಯಾತ್ ಶೆಟ್ಟಿ, ಪ್ರತೀಕ್ಷ ಶೆಟ್ಟಿ, ವೈಷ್ಣವಿ ಶೆಟ್ಟಿ, ಅಮೂಲ್ಯ ಎಸ್.ಶೆಟ್ಟಿ ಹಾಗೂ ಮತ್ತಿತರರನ್ನು ಸತ್ಕರಿಸಲಾಯಿತು.ಬಂಟರ ಸಂಘದ ಮಹಿಳಾ ವಿಭಾಗ ಕಾರ್ಯಕ್ರಮದಲ್ಲಿ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದ ಮಹಿಳಾ ವಿಭಾಗದ ಸದಸ್ಯರನ್ನು ಹಾಗೂ ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀನಿಧಿ ಅರುಣ್ ಶೆಟ್ಟಿ, ಸೀಮಾ ಸುನೀಲ್ ಶೆಟ್ಟಿಯವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ತೃಷಾ ಅಳ್ವರ ಪ್ರಾರ್ಥನೆ ಹಾಗೂ ಬಂಟ ಗೀತೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಸಂಜೀವಿನಿ ದತ್ತು ಸ್ವೀಕಾರ ಯೋಜನೆಯನ್ನು ವಿಶೇಷ ರೀತಿಯಲ್ಲಿ ಉದ್ಘಾಟಿಸಲಾಯಿತು
ವೇದಿಕೆಯ ಮೇಲೆ ಪ್ರವೀಣ್ ಭೋಜ ಶೆಟ್ಟಿ, ಡಾ. ಆರ್.ಕೆ. ಶೆಟ್ಟಿ, ಆನಂದ ಶೆಟ್ಟಿ ಡಿ. ಎಕ್ಕಾರ್, ಸುಕುಮಾರ್ ಎನ್. ಶೆಟ್ಟಿ, ಚಿತ್ರಾ ಅರ್. ಶೆಟ್ಟಿ, ಯೋಗಿನಿ ಸುಕುಮಾರ್ ಶೆಟ್ಟಿ, ಲತಾ ಆನಂದ ಶೆಟ್ಟಿ, ಪೂರ್ಣಿಮಾ ಸುರೇಶ್ ಶೆಟ್ಟಿ, ಸುಧಾ ಹೇಮಂತ ಶೆಟ್ಟಿ, ಶಿಲ್ಪಾ ಸಂತೋಷ್ ಶೆಟ್ಟಿ, ಪ್ರತಿಭಾ ವೈ. ಶೆಟ್ಟಿ ಮೊದಲಾದವರು ಉಪಸ್ಥಿತಿತರಿದ್ದರು.
ಶಿಲ್ಪಾ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ
————
ಡೊಂಬಿವಲಿ ಪ್ರಾದೇಶಿಕ ಸಮಿತಿಯಲ್ಲಿ ಸಂಜೀವಿನಿ ಕಾರ್ಯಕ್ರಮದ ಉದ್ಘಾಟನೆಯನ್ನು ವಿಷೇಶ ರೀತಿಯಲ್ಲಿ ಅಚರಿಸಿದ್ದು ಬಹಳ ಸಂತೋಷವಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮವನ್ನು ಈ ಪ್ರಾದೇಶಿಕ ಸಮಿತಿ ವಿಶಿಷ್ಠ ರೀತಿಯಲ್ಲಿ ಅಯೋಜಿಸುವ ಗುರಿಯನ್ನು ಹೊಂದಿದೆ. ಇಂದಿನ ದಿನದ ವರೆಗೆ ನಾವು 8 ಪ್ರಾದೇಶಿಕ ಸಮಿತಿಯ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದ್ದೇವು ಡೊಂಬಿವಲಿ ಪ್ರಾದೇಶಿಕ ಸಮಿತಿ ಈ ಎಲ್ಲಾ ದಾಖಲೆಯನ್ನು ಮುರಿದಿದೆ. ನಾನು ಅಂಧೇರಿ – ಬಾಂದ್ರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷನಾಗಿದ್ದಾಗ ದತ್ತು ಸ್ವೀಕಾರದಂತಹ ಕಾರ್ಯಕ್ರಮವನ್ನು ಅಯೋಜಿಸಿದ್ದೇವು ಈ ಕಾರ್ಯಕ್ರಮಕ್ಕೆ 61 ಅರ್ಜಿ ಸ್ವೀಕಾರವಾಗಿತ್ತು ಇದರಲ್ಲಿ 20 ಕುಟುಂಬಗಳ ಮಾಸಿಕ ಉತ್ಪಾದನೆ ಎನೂ ಇರಲಿಲ್ಲ ಇದನ್ನು ಅರಿತ ನಾವು ಅವರನ್ನು ಸ್ವಾವಲಂಬಿ ಗಳನ್ನಾಗಿಸ ಬೇಕೆಂದು ಶ್ರಮಪಟ್ಟು ಅವರಿಗೆ ಹೊಲಿಗೆ ಮೆಶಿನ್, ಬ್ಯೂಟಿಷನ್ ಕೆಲಸ ಮಾಡುವ ಕೆಲಸಗಳನ್ನು ಕಲಿಸಿ ಅದರಲ್ಲಿ ಸಫಲರಾಗಿದ್ದೇವೆ. ಈ ಯೋಜನೆಯ ಬಗ್ಗೆ ಹಿಂದಿನ ಅವಧಿಯ ಅಧ್ಯಕ್ಷರಿಗೆ ತಿಳಿಸಿದಾಗ ಸುಮಾರು100 ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ದತ್ತು ಸ್ವೀಕಾರ ಮಾಡಿದ್ದೇವೆ ಸಂಜೀವಿನಿ ದತ್ತು ಸ್ವೀಕಾರದ ಮೂಲಕ 9 ಪ್ರಾದೇಶಿಕ ಸಮಿತಿಯ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ದತ್ತು ಸ್ವೀಕರಿಸಿ ಬಂಟ ಸಮಾಜದ ಕಣ್ಣೀರನ್ನು ಒರೆಸುವ ಕಾರ್ಯ ಮಾಡುವ ಉದ್ದೇಶವಿದೆ ಪ್ರತಿಯೊಂದು ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕಾರ್ಯಕ್ರಮಕ್ಕೆ ರೂಪ ರೇಷೆ ನೀಡಲಿದ್ದೇವೆ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಅತಿಥಿ ಸತ್ಕಾರಕ್ಕೆ ಮನದಾಳದ ವಂದನೆಗಳು — ಡಾ. ಆರ್.ಕೆ. ಶೆಟ್ಟಿ ( ಸಂಜೀವಿನಿ ಯೋಜನೆಯ ರೂವಾರಿ)
————-
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಶೆಟ್ಟಿ ಮಾತನಾಡುತ್ತಾ ನಮ್ಮ ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತೇಜನ ನೀಡುವ ಸಲುವಾಗಿ ಮಕ್ಕಳ ನೃತ್ಯ ಕಾರ್ಯಕ್ರಮವನ್ನು ಅಯೋಜಿಸಿದ್ದೇವೆ ಹಿಂದಿನ ದಿನಗಳಲ್ಲಿ ಒಂದೆ ಸಮನೆ ದೋ ಎಂದು ಸುರಿಯುತ್ತಿರುವ ಮಳೆ, ಹಸಿವನ್ನು ನೀಗಿಸಲು ಪಡುತ್ತಿದ್ದ ಭವಣೆಯ ಅ ದಿನವನ್ನು ನಮ್ಮವರಿಗೆ ನೆನಪು ಮಾಡುವ ಕಾರ್ಯಕ್ರಮ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ನಮ್ಮ ಮನದಾಳದ ವಂದನೆಗಳು. ನಿಮ್ಮ ಸಹಕಾರದಿಂದ ಈ ಕಾರ್ಯಕ್ರಮದಲ್ಲಿ ಇಷ್ಟೋಂದು ಸಂಖ್ಯೆಯ ಸಮಾಜ ಬಾಂಧವರು ಸೇರಿದ್ದಾರೆ ( ಯೋಗಿನಿ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ)
ಸನ್ಮಾನಿತರು:-
ನಾನು ಸಣ್ಣವನಿದ್ದಾಗಿನಿಂದ ಶಿಕ್ಷಣಕ್ಕಾಗಿ ಸಂಘದ ಸಹಾಯವನ್ನು ಪಡೆದಿದ್ದೇನೆ ನನ್ನ ಮಾತ- ಪಿತರು ನನ್ನ ಸಿಎ ಮಾಡುವ ಕನಸ್ಸನ್ನು ಪೂರ್ಣಗೊಳಿಸಲು ಬಹಳಷ್ಟು ಸಹಕಾರ ನೀಡಿದ್ದಾರೆ ನನ್ನ ಸಾಧನೆ ಮಾತ- ಪಿತರ, ಧೈವ- ದೇವರ ಅಶೀರ್ವಾದದಿಂದ ಸಾಧ್ಯವಾಗಿದೆ, ನನ್ನ ಸಾಧನೆಗೆ ಸಂಪೂರ್ಣ ಸಹಕಾರ ನೀಡಿದ ಸರ್ವರಿಗೂ ಮನದಾಳದ ವಂದನೆಗಳು – ( ಮನೀಷ್ ರೈ ಸಿಎ )
ವೈದ್ಯಕೀಯ ಸೆಮಿನಾರ್
ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು ಇತ್ತೀಚಿನ ದಿನಗಳಲ್ಲಿ ಹಿಮೋಗ್ಲೋಬಿನ್ ಕೊರತೆ, ಡಾಯಾಬಿಟೀಸ್, ಥೈರಾಯ್ಡ್, ಸರ್ವೈಕಲ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಅಂಡಕೋಶದ ಕ್ಯಾನ್ಸರ್ ಬಗ್ಗೆ ಹೆಚ್ಚಿನ ನಿಯಮಿತ ಸಮಯದಲ್ಲಿ ತಪಾಸಣೆ ಮಾಡುತ್ತಿರ ಬೇಕು. ಮಹಿಳೆಯರ ಋತು ಚಕ್ರದಲ್ಲಿ ಎರು ಪೇರು ಅಗಲು ಇಂದಿನ ಆಹಾರ ಪದ್ದತಿ ಕಾರಣ ಪ್ರತಿಯೊಬ್ಬರೂ ಮಾನಸಿಕ ಒತ್ತಡವನ್ನು ಬಿಟ್ಟು 7 ಗಂಟೆ ನಿದ್ರೆ, ನಡಿಗೆ, ನಿಯಮಿತ ವ್ಯಾಯಮಯನ್ನು ಮಾಡಲೇ ಬೇಕು ಅಸಗ ನಮ್ಮ ಅರೋಗ್ಯ ಸುಧಾರಿತ ವಾಗುತ್ತದೆ. ಜಂಕ್ ಫುಡ್, ಚಾಕಲೇಟ್, ಪೆಸ್ಟ್ರಿ, ಕರಿದ ಪದಾರ್ಥ, ಸಿಹಿ ತಿಂಡಿ ಗಳಿಂದ ದೂರ ವಿದ್ದಷ್ಟು ಉತ್ತಮ ಹಣ್ಣು- ಹಂಪಲು, ತರಕಾರಿ, ಸೇವಿಸಿದಷ್ಟು ಉತ್ತಮ ಥೈರಾಯ್ಡ್ ಸಮಸ್ಯೆ ಇದ್ದವರು ಫ್ಲವರ್ ಗೋಬಿ, ಕೋಬಿ ತರಕಾರಿಯಿಂದ ದೂರ ವಿದ್ದಷ್ಠು ಉತ್ತಮ ಸೂರ್ಯ ಕಿರಣದಿಂದ ವಿಟಮಿನ್ ಡಿ ಯನ್ನು ಪಡೆದರೆ ಆರೋಗ್ಯಕ್ಕೆ ಉತ್ತಮ ಅರೋಗ್ಯ ನಮ್ಮ ಸಂಪತ್ತು ಇದನ್ನು ಕಾಪಾಡಿ ಕೊಳ್ಳ ಬೇಕು — ಡಾ. ಸಂಗೀತಾ ಸತ್ಯಪ್ರಕಾಶ್ ಶೆಟ್ಟಿ