
ಶ್ರೀ ಸೀತಾರಾಮ ಭಜನಾ ಮಂದಿರ ಪಲಿಮಾರು ಹೊಸಗೈ, ಹೆಜಮಾಡಿ, ಇಲ್ಲಿ ಕಳೆದ 65 ವರ್ಷಗಳಿಂದ ಧರ್ಮಗ್ರಂಥದ ವಾಚನ ನಡೆಯುತ್ತಿದ್ದು, ಈ ವರ್ಷ ಜುಲೈ 16ಕ್ಕೆ ಕುಮಾರವ್ಯಾಸ ವಿರಚಿತ “ಮಹಾಭಾರತ ” ಎಂಬ ಪುಣ್ಯ ಕಥಾ ವಾಚನವು ಆರಂಭವಾಗಿತ್ತು.ಜಯ ದೇವಾಡಿಗ ಸುರತ್ಕಲ್ ಮತ್ತು ಪ್ರವಚನಕಾರರಾಗಿ ಭಾಸ್ಕರ್ ಕೆ ಪಡುಬಿದ್ರಿ, ಮನೋಹರ್ ಕುಂದರ್ ಎರ್ಮಾಳು ಇವರಿಂದ ವಾಚನ ಆರಂಭವಾಗಿತ್ತು.
ಇದೀಗ ಕಥಾ ವಾಚನದ ಮಂಗಲೋತ್ಸವವು ಆಗಸ್ಟ್ 17ರಂದು,ಶನಿವಾರ ಸಾಯಂಕಾಲ 8 ಗಂಟೆಗೆ ನೆರವೇರಲಿದೆ.
ಅ ಪ್ರಯುಕ್ತ ಭಕ್ತಾದಿಗಳು ಸಕಾಲದಲ್ಲಿ ಆಗಮಿಸಿ, ಶ್ರೀ ಸೀತಾರಾಮ ದೇವರ ಕೃಪೆಗೆ ಪಾತ್ರರಾಗಬೇಕೆಂದು ಫಲಿಮಾರು ಮೊಗವೀರ ಸಭಾ, ಫಲಿಮಾರು, ಫಲಿಮಾರು ಮೊಗವೀರ ಸಭಾ ಮುಂಬಯಿ, ಫಲಿಮಾರು ಮೊಗವೀರ ಮಹಿಳಾ ಮಂಡಳಿ ಫಲಿಮಾರು, ಶ್ರೀ ಸೀತಾರಾಮ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.
ತಾ. 18.8.24ರಂದು ಸಂಜೆ 4.30ಗಂಟೆಗೆ ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು, ಮೂಲ್ಕಿ, ಇವರಿಂದ “ತುಳಸಿ ಜಲಂಧರ ” ಯಕ್ಷಗಾನ ಕಾರ್ಯಕ್ರಮ ಫಲಿಮಾರು ಮೊಗವೀರ ಮಹಿಳಾ ಮಂಡಳಿಯ ವತಿಯಿಂದ ಜರಗಲಿದೆ.
ವಿ ಸೂ : ಭಕ್ತಾದಿಗಳು ನೀಡುವ ಉದಾರ ಧನ ಸಹಾಯವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು.