
ಸಾಯನ್ ಕೋಲಿವಾಡದ ಸಾಮಾಜಿಕ, ಧಾರ್ಮಿಕ ಸಂಸ್ಥೆ ಮಕರ ಜ್ಯೋತಿ ಫೌಂಡೇಶನ್ ವತಿಯಿಂದ ಆಗಸ್ಟ್ 23ರಂದು ಶುಕ್ರವಾರ, ಸಂಜೆ 5 ಗಂಟೆಗೆ, ಜಿ ಎಸ್ ಬಿ ಸೇವಾ ಮಂಡಲ ಕಿಂಗ್ ಸರ್ಕಲ್ ಬಳಿಯ ಅಮೂಲಕ್ ಅಮಿಚಂದ ಹೈಸ್ಕೂಲ್ ನ ಸಭಾಗ್ರಹದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಹಳದಿ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮ :
ಸಂಜೆ ಗಂಟೆ 5ರಿಂದ 6.15ರ ತನಕ ಭಜನೆ
6:30ರ ಗೋಧೂಳಿ ಲಗ್ನ ಮುಹೂರ್ತದಲ್ಲಿ ಕಳಶ ಸ್ಥಾಪನೆ
ನಂತರ ಅಲಂಕಾರ ಪೂಜೆ ಹಾಗೂ ಅಷ್ಟೋತ್ತರ ಪೂಜೆ ರಾತ್ರಿ 8ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ರಾತ್ರಿ 8:30 ಕ್ಕೆ ಸುಮಂಗಲಿಯರಿಗೆ ಹಳದಿ ಕುಂಕುಮ ಕಾರ್ಯಕ್ರಮ
ರಾತ್ರಿ 9ಕ್ಕೆ ಅನ್ನ ಸಂತರ್ಪಣೆ.
ಈ ಅದ್ದೂರಿ ದೇವತಾ ಕಾರ್ಯಕ್ಕೆ ಭಕ್ತಾಭಿಮಾನಿಗಳಾದ ತಾವು ತನು-ಮನ -ಧನದ ಸಹಾಯದಿಂದ ಸಹಕರಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗಬೇಕೆಂದು ಕಾರ್ಯಕ್ರಮದ ಸಂಯೋಜಕರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಚಂದ್ರ ದೇವಾಡಿಗ ನಾಗೂರು – 9664075303 ಹಾಗೂ ಬಾಬು ದೇವಾಡಿಗ – 7738171678 ಇವರನ್ನು ಸಂಪರ್ಕಿಸಬಹುದು.