
ಮುಂಬಯಿ ಅ17. ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಂಧೇರಿ ಪ್ರಧಾನ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ಕೂಟ ಕಾರ್ಯಕ್ರಮವು ಅಂಧೇರಿಯ ಮೊಗವೀರ ಭವನದಲ್ಲಿ ಆಗಸ್ಟ್ 11 ರಂದು ಹವಾ ನಿಯಂತ್ರಿತ ಮಿನಿ ಸಭಾಗ್ರಹದಲ್ಲಿ ನಡೆಯಿತು .
ವಿಭಾಗದ ಕಾರ್ಯಾಧ್ಯಕ್ಷೆ ರಾಜೇಶ್ವರಿ ಉಪ್ಪೂರು ಅತಿಥಿಗಳನ್ನು ಸ್ವಾಗತಿಸಿದರು .ಬಳಿಕ ದ್ವೀಪ ಪ್ರಜ್ವಲನೆಯನ್ನು ಮಂಡಳಿಯ ಉಪಾಧ್ಯಕ್ಷರಾದ ಅರವಿಂದ ಕಾಂಚನ್ ಮತ್ತು ಮುಖ್ಯ ಅತಿಥಿಯಾಗಿ ಆಮಂತ್ರಿಸಲಾಗಿದ್ದ ಮಂಡಳಿಯ ಜತೆ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಹರೀಶ್ ಶ್ರೀಯಾನ್ ಹಾಗು ವೇದಿಕೆಯಲ್ಲಿದ್ದ ಗಣ್ಯರು ಮಂಡಳಿಯ ಶಾಖೆಗಳ ಪದಾಧಿಕಾರಿಗಳು ಮಾಡಿದರು , ಮಂಡಳಿಯ ಅಧ್ಯಕ್ಷರಾದ ಎಚ್ ಅರುಣ್ ಕುಮಾರ್ ಅವರು ತಮ್ಮ ಭಾಷಣದಲ್ಲಿ ಆಟಿ ತಿಂಗಳಿನಲ್ಲಿ ಹಿಂದೆ ಇದ್ದ ಸಂಕಷ್ಟಗಳು , ಆಟಿ ತಿಂಗಳಿಗಾಗಿ ಬೇಕಾದ ದವಸ ಧಾನ್ಯ ಗಳನ್ನು ಮಹಿಳೆಯರು ಶೇಖರಣೆ ಮಾಡುತ್ತಿದ್ದ ಕ್ರಮಗಳು ಅವರ ಈ ಶ್ರದ್ದೆ ಕುಟುಂಬ ನಿರ್ವಹಣೆಗೆ ಪಡುತಿದ್ದ ದುಡಿಮೆಗಳ ಬಗ್ಗೆ ತಿಳಿಸಿದರು ಹಾಗು ಇಂತಹ ಕಾರ್ಯಕ್ರಮಗಳು ನಡೆಯಬೇಕಾದ ಅಗತ್ಯತೆ ಬಗ್ಗೆ ಹೇಳಿದರು . ಅರವಿಂದ ಕಾಂಚನ್ ಅವರು ಆಟಿ ತಿಂಗಳು ಬಡವರಿಗೆ ಜೀವನ ಸಾಗಿಸಲು ಕಷ್ಟದ ದಿನಗಳು ಆದಾಗ್ಯೂ ತುಳುವರು ಸ್ವಾಭಿಮಾನದಿಂದ ಎಲ್ಲಾ ತರಹದ ಸಮಸ್ಯೆಗಳನು ಎದುರಿಸಿ ಸೋಣ ತಿಂಗಳ ಆಗಮನಕ್ಕೆ ಕಾಯುತ್ತಿದರು . ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ರಾದ ಡಿ. ಬಿ. ಪುತ್ರನ್ ಅವರು ಮಂಡಳಿಯ ಸಾಧನೆ ಹಾಗು ಸಮಾಜ ಕಲ್ಯಾಣ ಕಾರ್ಯಗಳ ಬಗ್ಗೆ ತಮ್ಮ ಭಾಷಣದಲ್ಲಿ ನುಡಿದರು.
ಮೊಗವೀರ ಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ ಅವರು ಆಟಿಯ ವಿಶೇಷತೆ ,ತುಳುನಾಡಿನ ಆಹಾರ ಪದ್ಧತಿ ,ರೋಗ ರುಜಿನಗಳನ್ನೂ ನಿಯಂತ್ರಿಸಲು ತಯಾರಿಸಲಾಗುತ್ತಿದ್ದ ನಾಟಿ ಮದ್ದುಗಳು ,ಆಟಿ ತಿಂಗಳಲ್ಲಿ ಬರುವ ತುಳುನಾಡಿನ ಆಚರಣೆಗಳು ಮಾರಿಪೂಜೆ ,ಆಟಿ ಅಮಾವಾಸ್ಯೆ ,ಎಡೆ ಬಳಸುವ ಪರಂಪರೆ , ಆಟಿ ತಿಂಗಳು ಮುಗಿದ ಬಳಿಕ ಒಟ್ಟು ಮನೆಯನ್ನು ಶುದ್ದಗೊಳಿಸಿ ಆಟಿಯನ್ನ್ನು ಹೊರ ಹಾಕಿ , ಸೋಣ ತಿಂಗಳಲ್ಲಿ ಪ್ರಾರಂಭದಿಂದ ತುಂಬೆ ಹೂಗಳಿಂದ ಹೊಸ್ತಿಲು ಪೂಜೆ ಮಾಡುವುದು ಇತ್ಯಾದಿ ವಿಷಯಗಳನ್ನು ನೆನಪಿಸಿದರು .ಹಾಗು ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಬೆಳಕು ಚೆಲ್ಲಿದರು .ಮನೋರಂಜನಾ ಅಂಗವಾಗಿ ಮಹಿಳೆಯವರಿಂದ ಕೊರವಂಜಿ ,ಆಟಿ ಕಳೆಂಜ ,ತಿಥ್ ತಿರಿ ಕೊರಗ ಜಾನಪದ ನಲಿಕೆ ಪ್ರದರ್ಶನಗೊಂಡಿತು.

ಕಲಾವಿದರಾಗಿ ಯಶೋಧ ಕರ್ಕೇರ ,ರೇಖಾ ಕಾಂಚನ್ ,ಚಂದ್ರಾವತಿ ಮೆಂಡನ್ ,ರೂಪ ಪುತ್ರನ್ ,ಮೋಹಿನಿ ಸುವರ್ಣ ,ಭಾರತಿ ಕರ್ಕೇರ ,ಯಶೋಧ ಸಾಲ್ಯಾನ್ , ನಿವೇಧಿತಾ ಸಾಲ್ಯಾನ್ ,ರಾಜೇಶ್ವರಿ ಉಪ್ಪೂರು ಮತ್ತು ಮೊಗವೀರ ಗಾರ್ಡ್ಸ್ ನ ಕಾರ್ಯಧ್ಯಕ್ಷ ಚಂದ್ರಶೇಖರ್ ಕರ್ಕೇರ ಪಾಲ್ಗೊಂಡರು .ವೇದಿಕೆಯಲ್ಲಿ ಕೋಶಾಧಿಕಾರಿ ಪ್ರತಾಪ್ ಕುಮಾರ್ ಕರ್ಕೇರ ,ಜತೆ ಕಾರ್ಯದರ್ಶಿಗಳಾದ ದಯಾವತಿ ಸುವರ್ಣ ಮತ್ತು ವಿಶ್ವನಾಥ್ ಪುತ್ರನ್ , ಮಹಿಳಾ ವಿಭಾಗದ ಉಪಾಧ್ಯಕ್ಷೆ ಪ್ರೇಮಲತಾ ಪುತ್ರನ್ , ವಿಭಾಗದ ಕಾರ್ಯದರ್ಶಿ ಸುಮತಿ ತಿಂಗಳಾಯ ,ಕೋಶಾಧಿಕಾರಿ ರೂಪ ಪುತ್ರನ್ ,ಮಂಡಳಿಯ ಮೀರಾ ಬಾಯಿಂದರ್ ಶಾಖೆಯ ಉಪ ಕಾರ್ಯಾಧ್ಯಕ್ಷೆ ಸುಜಾತ ಮೆಂಡನ್ ‘ ಸಹ ಕಾರ್ಯದರ್ಶಿ ದೇವಕಿ ಕೋಟ್ಯಾನ್ ,ಡೊಂಬಿವಲಿ ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದಮಯಂತಿ ಕೋಟ್ಯಾನ್ ,ಕಾರ್ಯದರ್ಶಿ ಗೀತಾ ಮೆಂಡನ್, ನವಿ ಮುಂಬಯಿ ಶಾಖೆಯ ತೇಜಸ್ವಿ ಮಲ್ಪೆ ,ವಸಯಿ ವಿರಾರ್ ಶಾಖೆಯ ಸ್ಮಿತಾ ಸಾಲ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂಡಳಿಯ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಗೋವಿಂದ ಏನ್ ಪುತ್ರನ್ ,ಪ್ರವೀಣ್ ಕುಮಾರ್ ಸಾಲ್ಯಾನ್,ಪ್ರಶಾಂತ್ ತಿಂಗಳಾಯ, ನವೀನ್ ಸಾಲ್ಯಾನ್ ,ಕಾನೂನು ಸಲಹಾ ಸಮಿತಿಯ ಕಾರ್ಯಧ್ಯಕ್ಷ ನಾಗೇಶ್ ಮೆಂಡನ್ ,ಪ್ರತಾಪ್ ಸಾಲ್ಯಾನ್ ,ದ ಕ ಉಡುಪಿ ಶಾಖೆಯ ಕೋಶಾಧಿಕಾರಿ ಭರತ್ ಸಾಲ್ಯಾನ್ ಹಾಗು ಶಾಖೆಗಳ ಸದಸ್ಯರು ಉಪಸ್ಥಿತರಿದ್ದರು .ಈ ಕೂಟದಲ್ಲಿ ತುಳುನಾಡಿನ ವಿವಿಧ ಭಕ್ಷ ,ಆಹಾರ ತಿನಸುಗಳ ಪ್ರದರ್ಶನ ನಡೆಯಿತು ಮತ್ತು ಅವುಗಳನ್ನು ಭಾಗವಹಿಸಿದವರಿಗೆ ವಿತರಣೆ ಮಾಡಲಾಯಿತು .