30 C
Mumbai
April 24, 2026
Mumbai News Kannada
ಮುಂಬಯಿ

*ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನ* , ರಾವಲ್ಪಾಡ, ದಹಿಸರ್, ಪೂರ್ವ *ಮುದ್ದು ಕೃಷ್ಣ ಸ್ಪರ್ಧೆ* .ಬಹುಮಾನ ವಿತರಣೆ.





  ದಹಿಸರ್ ಆ17.    ದೇವಸ್ಥಾನದ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ ಆಗಸ್ಟ್ 15, 2025 ರಂದು ಸಂಜೆ 7 ರ ನಂತರ  ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗಿದೆ.

ವರ್ಷಂಪ್ರತಿ ಆಚರಿಸುತ್ತಿರುವ  ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಆಚರಿಸುವ “ಮುದ್ಧು ಕೃಷ್ಣ”  ಸ್ಪರ್ಧೆಯಲ್ಲಿ 36 ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಲವ ಲವಿಕೆ ಹಾಗೂ ಮುದ್ಧು ಕೃಷ್ಣ, ಬಾಲ ಕೃಷ್ಣ, ಗೋಪಾಲ ಕೃಷ್ಣ, ರಾಧಾ ಕೃಷ್ಣ ಹೀಗೆ ವಿವಿಧ ರೀತಿಯ ಪಾತ್ರಗಳಲ್ಲಿ ಧರಿಸಿದ ವೇಷ ಭೂಷಣ, ಬಾಲ ಕಂದಮ್ಮಗಳ ಸಭಾ ಕಂಪನವಿಲ್ಲದ ನಗೆಯಾಟ, ತುಂಟಾಟದ ವಿವಿಧ ನ್ರತ್ಯಭಿನಯ ಇವೇ ಮೊದಲಾದುವುಗಳು ನೋಡಲು ಆಕರ್ಷಕವಾಗಿ ನೆರೆದಿರುವ ಭಕ್ತಾಭಿಮಾನಿಯರ ಮನ ಗೆದ್ದಿತು.

ಈ ಕ್ಷೇತ್ರದಲ್ಲಿ ನಿರಂತರ ಇಂತಹ ಧಾರ್ಮಿಕ ಚಟುವಟಿಕೆಗಳು ಸದಾ ಮುಂದುವರಿಯುತ್ತಿರಲಿ ಎಂದು ತೀರ್ಪುಗಾರರಾಗಿ ಆಗಮಿಸಿ ಸಹಕರಿಸಿದ *ಶ್ರೀ ಶೋಧನ್ ಬಂಗೇರ  ಇವರು* ಆಶೀಸಿದರು.

ತುಳು ಕನ್ನಡಿಗರಿಂದ ಸ್ಥಾಪನೆ ಗೊಂಡ ಈ ದೇವಸ್ಥಾನದಲ್ಲಿ, ಪ್ರತಿ ವರ್ಷ ಹೇಗೆ ಪರಿಸರದ ತುಳು ಕನ್ನಡಿಗರಿಗಿಂತಲೂ ಅನ್ಯ ಸಮಾಜದ  ಮಕ್ಕಳಿಗೆ ಈ ಚದ್ಮವೇಶದಲ್ಲಿ ಭಾಗವಹಿಸಿ ಬಾಲ ಪ್ರತಿಭೆಯ ಅರಳುವಿಕೆಗೆ ಅವಕಾಶ ಕಲ್ಪಿಸಿದ ಶ್ರೀ ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು ಅಭಿನಂದನೀಯರು, ಇಂತಹ ದೇವಸ್ಥಾನದಲ್ಲಿ ಶ್ರೀ ದೇವರು ಭಕ್ತರಿಗೆ ಶೀಘ್ರ ಅನುಗ್ರಹಿಸುವರು. ಇದು  ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ಎಂದು ಸಾರುವ ಸಂದೇಶ ಎಂದು ಇನ್ನೊರ್ವ ತೀರ್ಪುಗಾರರಾಗಿ ಆಗಮಿಸಿದ ಶ್ರೀ *ಧೀರಜ್ ಪೂಜಾರಿ* ಯವರು  ದೇವಸ್ಥಾನದ ಸಂಘಟನೆಗೆ ಪ್ರೋತ್ಸಾಹಿಸಿದರು.

 *ಬಹುಮಾನ ವಿಜೇತರು :* 

3 ರಿಂದ 7 ವರ್ಷ ಹಾಗೂ 8 ರಿಂದ 14 ವರ್ಷದ ವಯೋಮಿತಿ ಇರುವ ಪರಿಸರದ ಎಲ್ಲಾ ಸಮಾಜದ ಪುಟಾಣಿಯರಿಗೆ ಏರ್ಪಡಿಸಿದ ಈ ಸ್ಪರ್ಧೆಯಲ್ಲಿ

 *3 ರಿಂದ 7 ವರ್ಷ ವಿಭಾಗ :* 

 *ಜಿನಲ್ ಜೈನ್* ಹಾಗೂ *ಜಿನಿಷಾ ಜೈನ್*  *ಪ್ರಥಮ* ಸ್ಥಾನ ಪಡೆದರು.

 *ಅಮಿತ್ ದಾಸ್* *ದ್ವಿತೀಯ* ಬಹುಮಾನ ಪಡೆದುಕೊಂಡರು.

 *ತೃತೀಯ* ಬಹುಮಾನವು *ವೇದಿಕ್ ತ್ರಿವೇದಿ* ಯವರ   ಪಾಲಾಯಿತು.

 *8ರಿಂದ 14 ವರ್ಷದ ವಿಭಾಗ*:-

ಕುಮಾರಿ ರಿಯಾ ಚೌಧುರಿ *ಪ್ರಥಮ* ಸ್ಥಾನ ಪಡೆದರು.

 *ತ್ರಿಷಾ ಜಾದವ್*   ದ್ವಿತೀಯ ಬಹುಮಾನ ಪಡೆದುಕೊಂಡರು.

ತೃತೀಯ ಬಹುಮಾನವು *ರುಹಿ ರಾಥೋಡ್ ಹಾಗೂ ಆರಾಧ್ಯ ದುಬೆ* ರವರ   ಪಾಲಾಯಿತು.

 3 ರಿಂದ 7 ಹಾಗೂ 8 ರಿಂದ 14 ಪ್ರಾಯದ ಎರಡೂ ವರ್ಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿಜೇತರಿಗೆ ಮಾಸ್ಟರ್ ಶಿವಾಯ್ ಶಿವರಾಜ್ ಶೆಟ್ಟಿ ಯವರ ವತಿಯಿಂದ  ನಗದು ಬಹುಮಾನ ವಿತರಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಯರಿಗೂ ತುಳಸಿ ಗಿಡ,  ಉಡುಗೊರೆ ಹಾಗೂ ಸಿಹಿ ತಿಂಡಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ರಾತ್ರಿ 10.00 ರಿಂದ ಭಜನಾ, ಕುಣಿತ ಭಜನೆ ಕಾರ್ಯಕ್ರಮ ಹಮ್ಮಿಕೊಂಡು, ಪ್ರಧಾನ ಆರ್ಚಕರಾದ ಶ್ರೀಯುತ ವಿಜಯ್ ಉಪಾಧ್ಯಾಯ ಇವರ ಹಸ್ತದಿಂದ ಹಾಗೂ ತೇಜಸ್ ಭಟ್ ಇವರ ಸಹಕಾರದಿಂದ ಶ್ರೀ ಕೃಷ್ಣ ದೇವರಿಗೆ 12.04 ರಿಂದ ಮಂಗಳಾರತಿ, ವಿವಿಧ ರೀತಿಯ ಸಿಹಿತಿಂಡಿಗಳ ನೈವೇದ್ಯ ಅರ್ಪಣೆ ತದನಂತರ ನೆರೆದ ಎಲ್ಲಾ ಭಕ್ತಾಭಿಮಾನಿಯಾರಿಂದ ಶ್ರೀ ಕೃಷ್ಣ ದೇವರಿಗೆ ಆರ್ಘ್ಯ ಪ್ರಧಾನಿಸಲಾಯಿತು.

ಮರುದಿನ ಬೆಳಿಗ್ಗೆ ಶ್ರೀ ಕೃಷ್ಣ ಲೀಲೋತ್ಸವದ ಅಂಗವಾಗಿ ಪರಿಸರದ  ಎಲ್ಲಾ ಭಕ್ತರು ಸೇರಿ ತುಳುನಾಡಿನಲ್ಲಿ ಪ್ರಚಲಿತ ಕಣ್ಣಿಗೆ ಬಟ್ಟೆ ಕಟ್ಟಿ ಮೊಸರು ಕುಡಿಕೆ ಹೊಡೆಯುವ ಕಾರ್ಯಕ್ರಮದಲ್ಲಿ ಪರಿಸರದ 11 ವರ್ಷದ ಬಾಲಕ ಹರೀಜ್ ಖಾನ್  ಇವರು  ಮೊಸರು ಕುಡಿಕೆ ಒಡೆದು ವಿಶೇಷ ಬಹುಮಾನವನ್ನು ಪಡೆದರು.

ಕಾರ್ಯಕ್ರಮಗಳಿಗೆ ಸಮಿತಿ ಅಧ್ಯಕ್ಷರಾದ ಶೇಖರ್ ಪಿ ಶೆಟ್ಟಿ, ಕೋಶಾಧಿಕಾರಿ ದೀಪಕ್ ಕೆ ಪೂಜಾರಿ ಹಾಗೂ ಉಪಸ್ಥಿತರಿದ್ದ ಸಮಿತಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಭಕ್ತಾಭಿಮಾನಿಯರು ಸಹಕರಿಸಿದರು.

ಕಾರ್ಯದರ್ಶಿ ಲಕ್ಷ್ಮಣ್ ಎಂ. ಪೂಜಾರಿ ಯವರು  ಬಾಲಗೋಪಾಲ ಚದ್ಮ ವೇಷ ಸ್ಪರ್ಧೆಯಲ್ಲಿ ಹಾಗೂ ಮಡಕೆ ಒಡೆಯುವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಎಲ್ಲಾ ಸ್ಪರ್ಧಾಳುಗಳಿಗೆ,   ಸೇರಿದ ಎಲ್ಲಾ ಭಕ್ತಾಭಿಮಾನಿಯರಿಗೆ ಮತ್ತು ತೀರ್ಪುಗಾರರಿಗೆ ಅಭಿನಂದನೆ ನೀಡಿ ಧನ್ಯವಾದ ಸಮರ್ಪಿಸಿದರು.



Related posts

ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ, ಭಕ್ತಿ, ಸಡಗರದಿಂದ ಜರಗಿದ ವಿಶ್ವಕರ್ಮ ಮಹೋತ್ಸವ.

Mumbai News Desk

ಮುಂಬೈ: ಐದು ವರ್ಷದ ಮಗುವನ್ನು ಅಪಹರಿಸಿ, 6 ಲಕ್ಷ ರೂ.ಗೆ ಮಾರಾಟ : ವೈದ್ಯರ ಮನೆಯಿಂದ ಮಗುವಿನ ರಕ್ಷಣೆ

Mumbai News Desk

ಜಗಜ್ಯೋತಿ ಕಲಾವೃಂದದ ವತಿಯಿಂದ ಶಿವರಾತ್ರಿ ಪೂಜೆ ಸಂಪನ್ನ

Mumbai News Desk

ಧರ್ಮಪಾಲ ದೇವಾಡಿಗರಿಗೆ  ದೇವಾಡಿಗ ಸಂಘದ ಗೌರವ. ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಧರ್ಮಪಾಲರ ಕೊಡುಗೆ ಅಪಾರ: ರವಿ ದೇವಾಡಿಗ

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬಯಿ ವತಿಯಿಂದ ಮಹಾವೀರ ಜಯಂತಿ ಆಚರಣೆ

Mumbai News Desk

ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದ  ನವರಾತ್ರಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ.

Mumbai News Desk