
ಆಟಿಯಲ್ಲಿ ಬಂಟರ ಕೂಟ ನಿಜಕ್ಕೂ ಅರ್ಥಪೂರ್ಣವಾಗಿದೆ – ಪ್ರವೀಣ್ ಭೋಜ ಶೆಟ್ಟಿ
ಮುಂಬಯಿ : ಮೊತ್ತಮೊದಲಿಗೆ ಆಟಿಯ ಕೂಟದ ಬದಲು ’ಆಟಿಡೊಂಜಿ ಬಂಟರೆ ಕೂಟ” ಹೆಸರಲ್ಲಿ ಇಂದಿನ ಕಾರ್ಯಕ್ರಮ ನಡೆಯುತ್ತಿದ್ದು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರನ್ನು ಅಭಿನಂದಿಸಲೇ ಬೇಕಾಗಿದೆ. ನಾವೆಲ್ಲರೂ ಒಂದಾಗಿ ಒಂದೇ ಮನಸ್ಸಿನಿಂದ ಸುಂದರವಾದ ಕೂಟ ನಡೆಸುತ್ತೇವೆ. ಆದುದರಿಂದ ಇದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು.

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಸಮಿತಿಯ ವತಿಯಿಂದ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ, ಆ. 15 ರಂದು ಸಂಜೆ ಕಾಂದಿವಲಿ ಪೂರ್ವ ಅವೆನ್ಯೂ ಹೋಟೇಲಿನ ಸಭಾಂಗಣದಲ್ಲಿ ನಡೆದ ಆಟಿಡೊಂಜೆ ಬಂಟರೆ ಕೂಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಸ್ವತಂತ್ರೋತ್ಸವದ ಸುಭಾಶಯವನ್ನು ನೀಡಿ ಮಾತನಾಡಿದ ಅವರು ನಾವೆಲ್ಲರೂ ಬಂಟ ಸಮುದಾಯದಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭ್ಯಾಗ್ಯ. ಈ ಪರಿಸರದ ಸಮಾಜ ಬಾಂಧವರು ಇಲ್ಲಿ ಕಾಲೇಜನ್ನು ಸ್ಥಾಪಿಸುವ ಕನಸ್ಸನ್ನು ಹೊಂದಿದ್ದು ಈಗಾಗಲೇ ಬೋರಿವಲಿಯಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಪ್ರಾರಂಭಗೊಂಡಿದ್ದು ಅದಕ್ಕೆ ಇನ್ನೂ ನಿಧಿ ಸಂಗ್ರಹಿಸುವಲ್ಲಿ ಸಮಿತಿಯ ಪ್ರಮುಖರು ಕ್ರೀಯಾಶೀಲರಾಗಿದ್ದಾರೆ. ಇದ್ದವರು ನಮ್ಮ ಸಂಘಕ್ಕೆ ನೀಡಬೇಕು. ಸಂಘಕ್ಕೆ ದಾನ ನೀಡಿದಲ್ಲಿ ನಾವಿಲ್ಲದಿದ್ದರೂ ಬದುಕಿದಂತೆ. ದಾನಿಗಳ ಹೆಸರು ಅಲ್ಲಿ ಚಿರಸ್ಮರಣೀಯ. ಇನ್ನು ಸಂಘದ ನೂರನೇ ವರ್ಷಕ್ಕೆ ಮೂರೇ ವರ್ಷ ಬಾಕಿ. ಇದ್ದವರು ಈ ಅವಕಾಶವನ್ನು ಕಳೆಯಬೇಡಿ. ದಾನಿಗಳೇ ಒಂದು ಸಂಘಕ್ಕೆ ದೇವರು ಎಂದರು.
ಪ್ರಸ್ಥಾವನೆಯ ಮಾತುಗಳನ್ನಾಡಿದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ನಾವು ಎಳೆಯ ಪ್ರಾಯದಲ್ಲಿ ನಿಜವಾದ ಆಟಿಯನ್ನು ನೋಡಿದವರು. ಆಟಿಯ ತಿಂಗಳು ಕಷ್ಟದ ತಿಂಗಳಾದರೂ ನಮ್ಮ ಸಮಾಜಕ್ಕೆ ಅಷ್ಟು ಕಷ್ಠಕರವಾಗಿಲ್ಲ. ಆಟಿಯ ತಿಂಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಬಟ್ಟೆಗಳನ್ನು ಒಣಗಿಸುವುದೂ ಅಸಾದ್ಯವಾಗುತ್ತಿತ್ತು. ಆಟಿ ತಿಂಗಳ ಕಶಾಯ ಸೇವನೆಯಿಂದ ರೋಗವೂ ದೂರವಾರುವುದು ಎನ್ನುತ್ತಾ ಎಲ್ಲರಿಗೂ ಸ್ವಾಗತ ಬಯಸಿದರು.

ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸಿದರು.
ಲೇಖಕಿ, ಸಹಿತಿ ವಾಣಿ ಶೆಟ್ಟಿ ಮೂಡಬಿದ್ರೆ ಯವರು ಮುಖ್ಯ ವಕ್ತಾರರಾಗಿ ಆಗಮಿಸಿ ಆಟಿಯ ಬಗ್ಗೆ ತನ್ನ ಮಾತನ್ನು ಪ್ರಾರಂಭಿಸಿ ಈ ಬಗ್ಗೆ ಹೆಚ್ಚಿನವರಿಗೆ ಅರಿವು ಇದ್ದ ಕಾರಣ ಆಟಿ ತಿಂಗಳಲ್ಲಿ ಬರುವ ನಾಗರ ಪಂಚಮಿ ಬಗ್ಗೆ ಮಾಹಿತಿಯಿತ್ತರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಈ ಸಲ ನಮಗೆ ಬೆಷ್ಟ್ ಕಾಲೇಜು ಪ್ರಶಸ್ತಿ ಸಿಕ್ಕಿದೆ. ನಮ್ಮವರು ಊರಿನ ದೈವ ದೇವಸ್ಥಾನಕ್ಕೆ ಹಣ ನೀಡುತ್ತಾರೆ. ಅದರಿಂದ ಯಾವುದೇ ಹಣ ಹಿಂದೆ ಬರುದಿಲ್ಲ. ಆದರೆ ನಮ್ಮ ಶಿಕ್ಷಣ ಸಂಸ್ಥೆಗೆ ಖರ್ಚು ಮಾಡುವುದರಿಂದ ಹಣ ವಾಪಾಸು ಬರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ನಾವು ಸಾಧನೆ ಮಾಡಿದ್ದೇವೆ, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು.
ಸಂಘದ ಪಶ್ಚಿಮ ವಲಯದ ಸಮನ್ವಯಕರಾದ ಕಾಂದೇಶ್ ಭಾಸ್ಕರ ಶೆಟ್ಟಿಯವರು ಮಾತನಾಡುತ್ತಾ ಎಲ್ಲರೂ ಸೇರಿ ಬಂಟರ ಸಂಘ ಎಂಬ ದೇವಸ್ಥಾನದ ಜೀರ್ಣೋದ್ದಾರ ಮಾಡೋಣ. ಈಗಾಗಲೇ ಊರಿನ ಅನೇಕ ದೇವಸ್ಥಾನಗಳ ಜೀರ್ಣೋದ್ದಾರ ಆಗಿದೆ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ಆರ್ ಶೆಟ್ಟಿ ಸೋಣ ತಿಂಗಳ ಪ್ರಥಮ ಧಾರ್ಮಿಕ ಕಾರ್ಯಕ್ರಮಕ್ಕೆ ಎಲ್ಲರನ್ನು ಆಮಂತ್ರಿಸಿದರು.
ಸಮಿತಿಯ ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಯವರು ಮಾತನಾಡುತ್ತಾ ಶ್ರೀಮಂತಿಕೆ ಇದ್ದವರು ದಾನ ಧರ್ಮವನ್ನು ನೀಡುದರಿಂದ ಜೀವನ ಸಾರ್ಥಕ. ನಮ್ಮ ಶಿಕ್ಷಣ ಸಂಸ್ಥೆಗೆ ನಮ್ಮ ಸಮಾಜದಲ್ಲಿ ಇದ್ದವರು ದಾನಮಾಡಿದಲ್ಲಿ ಮುಂದೆ ಪ್ರಯೋಜನಕಾರಿಯಾಗುತ್ತದೆ. ಉತ್ತಮ ಮನಸ್ಸಿನಿಂದ ಇದೆಲ್ಲಾ ಸಾದ್ಯ ಎಂದರು.
ತುಡರ್ ಸಿನೇಮಾದ ನಾಯಕ ಸಿದ್ದಾರ್ಥ್ ಮತ್ತು ಸಿಎ ಉತ್ತೀರ್ಣರಾದ ದೀಪೇಶ್ ರಾಮಣ್ಣ ರೈ ಯವರನ್ನು ಹಾಗೂ ಸಾಂಸ್ಕೃತಿಕ ಸಮಿತಿಯಲ್ಲಿ ಬಾಗವಹಿಸಿದವರನ್ನ, ಆಟಿದ ಅಡುಗೆಯನ್ನು ತಯಾರಿಸಿ ತಂದ ಮಹಿಳೆಯರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಗೀತಾ ಎಸ್. ಶೆಟ್ಟಿ ಮತ್ತು ಮಹಿಳಾ ವಿಭಾಗದ ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ ಹೆಸರನ್ನು ವಾಚಿಸಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಲ್ಲಾರ್, ಜೊತೆ ಕೋಶಾಧಿಕಾರಿ, ಶಶಿಧರ ಕೆ. ಶೆಟ್ಟಿ ಇನ್ನಂಜೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ ಶೆಟ್ಟಿ , ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು,
ಡಾ. ಪಿ. ವಿ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕರಾದ ನಿಟ್ಟೆ ಮುದಣ್ಣ ಜಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಕೋಶಾಧಿಕಾರಿ ಸಂಕೇತ್ ಎಸ್. ಶೆಟ್ಟಿ, ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ರವೀಂದ್ರ ಎಸ್. ಶೆಟ್ಟಿ ಎರ್ಮಾಳು ಹರೀಶ್ ಶೆಟ್ಟಿ ಇತರ ಪ್ರಾದೇಶಿಕ ಸಮಿತಿಗಳ ಹಾಗೂ ಉಪವಿಭಾಗಗಳ ಕಾರ್ಯಾಧ್ಯಕ್ಷರುಗಳು ಹಾಗು ಪದಾಧಿಕಾರಿಗಳೂ ಮತ್ತು ಸದಸ್ಯರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರಘುನಾಥ ಎನ್ ಶೆಟ್ಟಿ ಕಾಂದಿವಲಿ ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು, ತನ್ಮದ್ಯೆ ಬಾಲ್ಯದಲ್ಲಿ ಊರಲ್ಲಿ ಕೇಳಿ ಬರುತ್ತಿದ್ದ ಕೆಲವು ವ್ಯಕ್ತಿಗಳ ಕಸುಬು ಹಾಗೂ ಹವ್ಯಾಸಕ್ಕಣುಗುಣವಾಗಿ ಕರೆಯಲಾಗುತ್ತಿರುವ ಹೆಸರು ಇದೀಗ ಮರೆಯಾಗುತ್ತಿದ್ದು ಕೆಲವು ಉದಾಹರಣೆಯೊಂದಿಗೆ ನೆನಪಿಸಿಕೊಂಡರು. ವಿಜಯಲಕ್ಷ್ಮೀ ಪ್ರಸಾದ್ ಶೆಟ್ಟಿ ಮತ್ತು ರಜನಿ ಆರ್. ಶೆಟ್ಟಿಯವರು ಪ್ರಾರ್ಥನೆ ಮಾಡಿದ್ದು, ಸರಿತಾ ಮಹೇಶ್ ಶೆಟ್ಟಿ ವಂದಿಸಿದರು.