
ಮುಂಬಯಿ ಪರಿಸರದ ಹಿರಿಯ ಸಮಾಜ ಸೇವಕ, ಸಂಘಟಕ, ಹಲವಾರು ಸಂಘಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಭಾಯಂದರ್ ನಿವಾಸಿ ಚಿತ್ರಾಪು ಕೆ.ಎಮ್.ಕೋಟ್ಯಾನ್(ಗೌ.ಕಾರ್ಯದರ್ಶಿ ವಿದ್ಯಾದಾಯಿನಿ ಸಭಾ, ಮುಂಬಯಿ)ರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದಾರೆ.
ಈ ಕಾರ್ಯಕ್ರಮವು ಆದಿತ್ಯವಾರ ಅ.25ರಂದು ಸಾಯಂಕಾಲ 4.30ರಿಂದ ಭಾಯಂದರ್ ಪೂರ್ವದ ನವಘರ್ ರಸ್ತೆಯಲ್ಲಿರುವ ಹನುಮಾನ್ ಮಂದಿರದ ಸಮೀಪ ಹಾಗೂ ಎಸ್.ಎನ್.ಕಾಲೇಜಿನ ಎದುರುಗಡೆ ಇರುವ ಸೈಂಟ್ ಅಗ್ನಿಸ್ ಹೈಸ್ಕೂಲ್ ಇದರ ಸಭಾಂಗಣದಲ್ಲಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಪ್ರಿಯ ಬಳಗ ಮೀರಾಭಾಯಂದರ್ ಇವರಿಂದ ಕುಶ – ಲವ ಕಾಳಗ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ ಹಾಗೂ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಕೆ.ಎಮ್ ರವರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕೋಟ್ಯಾನರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಕೆ.ಎಮ್.ಕೋಟ್ಯಾನ್ ಅಭಿನಂದನಾ ಬಳಗದ ಪರವಾಗಿ ಜಿ.ಟಿ.ಆಚಾರ್ಯ, ಡಾ.ಸತೀಶ್ ಬಂಗೇರ, ಡಾ.ಪ್ರಕಾಶ್ ಕುಮಾರ್ ಮೂಡಬಿದ್ರೆ, ಅಶೋಕ್ ಶೆಟ್ಟಿ ಬಿಇಎಸ್ಟಿ ಹಾಗೂ ಪ್ರೇಮಾ ಮಾಧವ ಹೆಗ್ಡೆ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. ಕೋಟ್ಯಾನರ ಅಭಿಮಾನಿಗಳು ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ..9324759589 ಅಥವಾ 9769797495ರಲ್ಲಿ ವಿಚಾರಿಸಬಹುದು.