
ನವಿ ಮುಂಬಯಿ ಅ 19. ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ , ಇದರ ಆಟಿಡೋಂಜಿ ದಿನಕಾರ್ಯಕ್ರಮ ಸರೋವರ್ NX ಬ್ಯಾಂಕ್ವೆಟ್ ಹಾಲ್ ಕಾಮೋಟೆ, ಇಲ್ಲಿ ಸಂಸ್ಥೆಯ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ವಿಭಾಗದ ರೇಖಾ ಆಯಿಲ್ ಹಾಗೂ ಡಾನ್ಸ್ ಟೀಚರ್ ಮಿಸ್ ಸುನಿತಾ ಪೂಜಾರಿ ಇವರ ಸಹಕಾರದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.
ತುಳುನಾಡಿನ ಪರಂಪರೆಯನ್ನು ನೆನಪಿಸುವಂತೆ ಅಲಂಕೃತವಾದ ವೇದಿಕೆಗೆ ಗಣ್ಯರೆಲ್ಲರೂ ಸೇರಿ ಆಟಿಕಳಂಜನನ್ನು ನೃತ್ಯದ ಮೂಲಕ ಬರಮಾಡಿಕೊಂಡರು.
ಸಂಸ್ಥೆಯ ಮಹಿಳೆಯರು ತುಳುನಾಡಿನ ವಿವಿಧ ರೀತಿಯ ರುಚಿಕರವಾದ ತಿಂಡಿ ತಿನಸುಗಳನ್ನು ಮಾಡಿ ತಂದು ನಮ್ಮ ತುಳುನಾಡಿನ ನೆನಪು ಹಸಿರಾಗುವಂತೆ ಮಾಡಿದರು. ಕಾರ್ಯಕ್ರಮವನ್ನು ಸಂಸ್ಥೆಯ ಗೌ ಪ್ರ ಕಾರ್ಯದರ್ಶಿ ಸುಧಾಕರ್ ಕೆಮ್ತತುರ್ ಇವರು ನಿರೂಪಿಸಿದರು .




ಸಭಾದ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸುಜಿತ್ ಪೂಜಾರಿಯವರು ವಹಿಸಿದ್ದರು , ಶಂಕರ್ ಜೀ ಗಯ್ಕರ್, ಕೇಂದ್ರ ಮಂತ್ರಿ, ಕ್ರಾಂತಿಕಾರಿ ಯೂನಿಯನ್ ಶ್ರೀಧರ ಎನ್ ಪೂಜಾರಿ. ಹಿಂದೂ ಪರಿಷತ್ತಿನ ಅಧ್ಯಕ್ಷ ಸಂಜೀವ ಶೆಟ್ಟಿ ಅಶ್ವಿತ, , ದೇವಾಡಿಗ ಸಂಘ ಅಧ್ಯಕ್ಷರು, ನವಿ ಮುಂಬಯ ರಮೇಶ್ ದೇವಾಡಿಗ. ಸುನೀತಾ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ನವಿ ಮುಂಬಯಿ, ತಾರ ಬಂಗೇರ, ಮಹಿಳಾ ಅಧ್ಯಕ್ಷರು ಕನ್ನಡಿಗ ಕಲಾವಿದರ ಪರಿಷತ್ತು, ಸ್ವಪ್ನ ಮೊಯ್ಲಿ , ಮಹಿಳಾ ಅಧ್ಯಕ್ಷರು ದೇವಾಡಿಗ ಸಂಘ ನವಿ ಮುಂಬಯಿ, ಪ್ರಸನ್ನ ಶೆಟ್ಟಿ, ಮಹಿಳಾ ಅಧ್ಯಕ್ಷರು ಶ್ರೀ ಅಯ್ಯಪ್ಪ ಸೇವಾ ಸಂಸ್ಥ ಕಾಂದ ಕಾಲೊನಿ ಮತ್ತು ನಮ್ಮ ಸಂಸ್ಥೆಯ ಮಹಿಳಾ ಅಧ್ಯಕ್ಷೆ ಶ್ರೀಮತಿ ವಸಂತಿ ಸುರೇಶ್ ಹೆಗ್ಡೆ , ಇವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ತೇಜಸ್ವಿನಿ ಎಸ್ ಪೂಜಾರಿ ಅವರು ಸ್ವಾಗತ ಭಾಷಣ ಗೈದರು.
ಶ್ರೀ ಶಂಕರ ಗಯ್ಕರ್ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ಅದರಲ್ಲೂ ಮಹಿಳೆಯರ ಮೇಲೆ ಆಗುವಂತಹ ದೌರ್ಜನ್ಯ ಗಳನ್ನು ಎದುರಿಸಲು ಏನು ಮಾಡಬೇಕು, ನಮ್ಮ ಮಕ್ಕಳಿಗೆ ಸನಾತನ ಧರ್ಮದ ಬಗ್ಗೆ ಹೀಗೆ ಅರಿವು ಮೂಡಿಸಬೇಕು ಎಂಬುದನ್ನು ವಿವರಿಸಿದರು. ಶ್ರೀಧರ ಪೂಜಾರಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕು ಎಂದರು. ಸಂಜೀವ ಶೆಟ್ಟಿ VHP ಯವರು ಮಾತನಾಡುತ್ತಾ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮಹಿಳೆಯರು ಸಶಕ್ತ ರಾಗಬೇಕು ಎಂದರು. ಶ್ರೀ ರಮೇಶ್ ದೇವಾಡಿಗ ನಾನು ತುಂಬಾ ಕಾರ್ಯಕ್ರಮಕ್ಕೆ ಹೋಗುತ್ತೇನೆ ಆದರೆ ಇಲ್ಲಿ ಒಂದು ವಿಶಿಷ್ಟ ರೀತಿಯಲ್ಲಿ ತುಳು ನಾಡಿನ ಸಂಸ್ಕೃತಿಯನ್ನು ತೋರಿಸುವಂತಹ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು. ಅದೇ ರೀತಿ ವೇದಿಕೆಯಲ್ಲಿದ್ದ ಮಹಿಳಾ ಗಣ್ಯರು ಕೂಡ ನಮ್ಮ ಮಕ್ಕಳಿಗೆ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಯಾವ ರೀತಿ ಕಷ್ಟ ಪಟ್ಟಿದ್ದಾರೆ, ತುಳುನಾಡಿನ ಸಂಸ್ಕೃತಿ ಏನು, ದೈವದಾನೆ ಏನು ಇವೆಲ್ಲದರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸಭಾಧ್ಯಕ್ಷರು ಸುಜೀತ್ ಪೂಜಾರಿ ಅವರು ಮಾತನಾಡುತ್ತಾ ಇಂತಹ ಕಾರ್ಯಕ್ರಮದಲ್ಲಿ ಮಹಿಳೆಯರು ಮುಂದೆ ಬಂದು ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಮಕ್ಕಳಿಗೆ ನಮ್ಮ ಸನಾತನ ಧರ್ಮದ ಬಗ್ಗೆ ತಿಳಿಸಿ ಅವರ ಮನಸ್ಸಿಗೆ ಮುಟ್ಟುವಂತೆ ಮಾಡುವುದಿದ್ದರೆ ಅದು ಮಹಿಳೆಯರಿಂದ ಮಾತ್ರ ಸಾಧ್ಯ ಎಂದರು.
ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕರು ಮತ್ತು ಮಾಜಿ ಸಭಾಪತಿ ಶ್ರೀ ಸಂತೋಷ್ ಜಿ ಶೆಟ್ಟಿ ಇವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು. ಅವರಿಗೆ ಸಂಸ್ಥೆಯ ಪದಾಧಿಕಾರಿಗಳು ಸೇರಿ ಹೂ ಗುಚ್ಛ ನೀಡಿ ಗೌರವಿಸಿದರು.
ಪ್ರತಿಭಾ ಪುರಸ್ಕಾರದ ಅಂಗವಾಗಿ 7ನೇ ತರಗತಿಯ ತನಕದ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಮತ್ತು 10ನೇ ಮತ್ತು 12ನೇ ತರಗತಿಯಲ್ಲಿ ಶೇಕಡಾ 90% ರಿಂದ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ನೀಡಿ ಸನ್ಮಾನಿಸಲಾಯಿತು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತಿಕೆ ಕ್ಷೇತ್ರದಲ್ಲಿ ಮುಂಬಯಿ ಅಲ್ಲದೆ ಹೊರ ದೇಶಗಳಲ್ಲಿ ಮಿನುಗುತ್ತಿರುವ ,ಆಂಗ್ಲ ಮಾದ್ಯಮ ಶಾಲೆಯಲ್ಲಿ ಕಲಿತು ಕನ್ನಡದ ಅರಿವು ಇಲ್ಲದೆ ಇದ್ದರೂ ಕೂಡ ಹಿಂದಿಯಲ್ಲಿ ಅನುವಾದ ಮಾಡಿ ಕನ್ನಡ ದಲ್ಲಿ ಭಾಗವತಿಕೆ ಮಾಡುವಂತಹ ಶ್ರೀ ರೋಶನ್ ಕೋಟ್ಯಾನ್ ಇವರಿಗೆ ಗಣ್ಯರ ಸಮ್ಮುಖದಲ್ಲಿ ಗೌರವ ನೀಡಿ ಸನ್ಮಾನಿಸಲಾಯಿತು.
ಕೊನೆಗೆ ಸಂಸ್ಥೆಯ ಸದಸ್ಯರಲ್ಲಿ “ಉಂದು ಸಂಸಾರ ” ಮತ್ತು ಸುಧಾಕರ್ ಕೆಮ್ತತುರ್ ಅವರ ನಿರ್ದೇಶನದಲ್ಲಿ “ಮಾಮಿ ಮರ್ಮಲ್” ಎಂಬ ಕಿರು ನಾಟಕ ಪ್ರಸ್ತುತ ಪಡಿಸಿದರು. ಹಾಗು ಭಕ್ತಿ ಸ್ವರ ಸಂಗಮ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕೊನೆಗೆ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶ ಸುಧಾಕರ್ ಕೆಮ್ತೂರು ಇವರು ಧನ್ಯವಾದ ಹೇಳಿ ಪ್ರೀತಿ ಭೋಜನ ದೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು