ಥಾಣೆ ಪಶ್ಚಿಮ ವೀರ್ ಸಾವರ್ಕರ್ ನಗರದ ಕಾರಣಿಕದ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಚಾಮುಂಡೇಶ್ವರಿ ದೇವಿ, ಶ್ರೀ ಶನೀಶ್ವರ ದೇವರ ಹಾಗೂ ಶ್ರೀ ಸತ್ಯನಾರಾಯಣ ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆಯ ಅಂಗವಾಗಿ ಇದೇ ಶುಕ್ರವಾರ
23 ಆಗಸ್ಟ್ 2024 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.
ಅಂದು ಬೆಳಿಗ್ಗೆ ಗಂಟೆ 08.30 ಕ್ಕೆ…ದೇವತಾ ಪ್ರಾರ್ಥನೆ, ಬೆಳಿಗ್ಗೆ ಗಂಟೆ 09.00 ರಿಂದ ..ಪಂಚಗವ್ಯ ಪುಣ್ಯಹವಾಚನ,ಗಣಪತಿ ಯಾಗ, ನೂತನ ಮಂಟಪ ಶುದ್ದೀಕರಣ ಪೂರ್ವಕ ವಾಸ್ತು ಪ್ರಕ್ರಿಯೆ, ನೂತನ ಮಂಟಪ ಪ್ರತಿಷ್ಠಾಪನೆ, ಪ್ರಧಾನ ಹೋಮ ಪೂರ್ವಕ ನವಕ ಕಲಶ ಅಭಿಷೇಕ, ಅಲಂಕಾರ ಪೂಜೆ.
ಮಧ್ಯಾಹ್ನ ಗಂಟೆ 12.00 ಕ್ಕೆ…ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಗಂಟೆ 12.30 ಕ್ಕೆ…ಅನ್ನದಾನವು ನಡೆಯಲಿದೆ..
ಆದುದರಿಂದ ಸದ್ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪರವಾಗಿ
ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು (9004318009)
ಪ್ರಕಟಣೆ ಮೂಲಕ ತಿಳಿಸಿದ್ದಾರೆ.
