
ಬ್ರಹ್ಮ ಶ್ರೀ ನಾರಾಯಣ ಗುರುಗಳ “ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ”, ಸಂಘಟನೆಯಿಂದ ಬಲಯುತರಾಗಿರಿ”, ಎಂಬ ಸಂದೇಶದಂತೆ ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಛೇರಿಯ ವತಿಯಿಂದ ಪ್ರತಿ ವರ್ಷದಂತೆ ಈ ಸಲವೂ ಸಹ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ವಿತರಿಸಲಾಯಿತು. ಗುರುವಾರ ದಿನಾಂಕ 15.08.2024 ರಂದು ಬೆಳ್ಳಿಗೆ 10 ರಿಂದ ಸ್ಥಳೀಯ ಕಚೇರಿಯ ಸಭಾಗ್ರಹದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಾರಂಭದಲ್ಲಿ ಪುರೋಹಿತರಾದ ಶ್ರೀ ಐತ್ತಪ್ಪ ಸುವರ್ಣ ರವರು ಗುರುಪೂಜೆ ನೆರವೇರಿಸಿದರು. ಈ ಕಾರ್ಯಕ್ರಮ ಯಶಸ್ವಿಯಾಗಲು ನಮ್ಮ ಕರೆಗೆ ಓಗೊಟ್ಟು ಧನ ಸಹಾಯಮಾಡಿದ ಎಲ್ಲಾ ಧಾನಿಗಳಿಗೆ ಗುರುದೇವರು ಆಯುರಾರೋಗ್ಯ ಸುಖ ಶಾಂತಿ ನೀಡಲಿಯೆಂದು ಪ್ರಾಥಿಸಲಾಯಿತು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷರಾದ ಶ್ರೀ ಚಂದ್ರಹಾಸ್ ಪಾಲನ್ ವಹಿಸಿದರು, ಮುಖ್ಯ ಅತಿಥಿಗಳಾದ ಶ್ರೀ ಡಿ. ಆರ್. ದೇಶಪಾಂಡೆ , ದಿನೇಶ್ ಕರ್ಕೇರ , ಪ್ರಶಾಂತ್ ಸುವರ್ಣ , ಶ್ರೀಮತಿ ಗಿರಿಜಾ ಸಂಜೀವ ಪಾಲನ್ , ಕುಶ ಸನಿಲ್ ಸ್ಥಳೀಯ ಕಚೇರಿಯ ಗೌರವ ಕೋಶಾಧಿಕಾರಿಯಾದ ಶ್ರೀ ಆನಂದ್ ಪೂಜಾರಿ, ಉಪ ಕಾರ್ಯಾಧ್ಯಎಕ್ಷರಾದ ಶ್ರೀ ಪುರಂದರ ಪೂಜಾರಿ ಹಾಗು ಶ್ರೀಧರ್ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಕಚೇರಿಯ ಉಪ ಕಾರ್ಯದರ್ಶಿ ಕೃಷ್ಣ ಪೂಜಾರಿ ಯವರು ಎಲ್ಲರನ್ನು ಸ್ವಾಗತಿಸಿದರು, ಹಾಗು ಅತಿಥಿ ಗಣ್ಯರನ್ನು ಪರಿಚಯಿಸಿ ಶಾಲು, ಪುಷ್ಪ ನೀಡಿ ಗೌರವಿಸಲಾಯಿತು.

ಸನ್ಮಾನಿತರದ ಶ್ರೀ ಶ್ರೀ ಡಿ. ಆರ್. ದೇಶಪಾಂಡೆ (ಮಾಜಿ ಮುಕ್ಯೋಪಾದ್ಯೆಯರು ,ಕೆನರಾ ವಿದ್ಯಾದಾಯಿನಿ ಸಭಾ, ಫೋರ್ಟ್ ) ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಡ್ಡಿಯಲ್ಲಿ ಈ ಸಂಸ್ಥೆ ಮಾಡುವ ಕಾರ್ಯ ಶಾಲ್ಲಂಘನೀಯ , ವಿದ್ಯಾರ್ಥಿಗಳಾದ ನೀವು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ನಾಗರಿಕರಾಗಿ ಈ ಸಂಸ್ಥೆ ಹಾಗೂ ವಿದ್ಯೆ ನೀಡಿದ ಶಿಕ್ಷಕರನ್ನು ಮತ್ತು ನಿಮಗೆ ಜನ್ಮ ನೀಡಿದ ತಂದೆ ತಾಯಿಯನ್ನು ಎಂದಿಗೂ ಮರೆಯದಿರಿ ಎಂದು ಮಾರ್ಗದರ್ಶನ ನೀಡಿದರು. ಜೀವನದಲ್ಲಿ ವಿದ್ಯಾಭ್ಯಾಸ ಎಷ್ಟು ಮಹತ್ವವನ್ನು ನೀಡುತದ್ದೇ ಹಾಗು ಯಾವ ರೀತಿಯಲ್ಲಿ ನಾವು ವಿದ್ಯಾಭ್ಯಾಸ ವನ್ನು ಮಾಡಬೇಕು ಹಾಗು ಅದರಿಂದ ಹಾಗುವ ಪ್ರಯೋಜನಗಳ ಬಗ್ಗೆ ಉದಾಹರಣೆಯೊಂದಿಗೆ ಮಾರ್ಗದರ್ಶನವಿತ್ತರು.
ಮತೋರ್ವ ಅತಿಥಿ ದಿನೇಶ್ ಕರ್ಕೇರವರು ಮಾತನಾಡುತ್ತಾ ಮಕ್ಕಳ ವಿದ್ಯೆಗೋಷ್ಕರ ನೀಡುವಂತಹ ಈ ಕಾರ್ಯಕ್ರಮ ನಿಜವಾಗಿಯುವು ಒಂದು ಅರ್ಥ ಪೂರ್ಣ ಕಾರ್ಯಕ್ರಮ ಇದಾಗಿದೆ , ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಮತ್ತು ಕನಸು ಇದ್ದಲಿ ಮಾತ್ರ ಜೀವನದಲ್ಲಿ ಯಶಸ್ವಿ ಯನ್ನು ಪಡೆಯಲು ಸದ್ಯ ಎಂದು ಹೇಳಿದರು.

ಕೃಷ್ಣ ಪೂಜಾರಿ ಸ್ಥಳೀಯ ಕಚೇರಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಳೆದ 35 ವರ್ಷಗಳಿಂದ ನಾವು ವಿದ್ಯಾಬ್ಯಾಸಕಾಗಿ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬರುತ್ತಿದ್ದೇವೆ ಎನ್ನಲು ತುಂಬಾ ಸಂತೋಷ ವಾಗುತ್ತದೆ ಮತ್ತು ಇಂತಹ ಒಂದು ಕಾರ್ಯಕ್ರಮ ನಡೆಯಲು ಮುಖ್ಯವಾಗಿ ದಾನಿಗಳ ಸಹಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಸಭಾಕಾರ್ಯಕ್ರಮದ ಸಭಾಧ್ಯಎಕ್ಷರಾದ ಶ್ರೀ ಚಂದ್ರಹಾಸ್ ಪಾಲನ್ ಮಾತನಾಡುತ್ತಾ ಶಿಕ್ಷಣದ ಮಹತ್ವವನ್ನು ಹೇಳುತ್ತಾ , ಮಕ್ಕಳು ಜೀವನದಲ್ಲಿ ಒಂದು ಧನಾತ್ಮಕ ಪ್ರೇರಣೆಯನ್ನು ಅಳವಡಿಸಿ ಕೊಂಡರೆ ಮುಂದೊಂದು ದಿನ ಯೆಶಸ್ವಿ ನಾಗರಿಕರ ಸಾಲಿನಲ್ಲಿ ಗುರುತಿಸಿಕೊಳ್ಳಲು ಸದ್ಯ ಎಂದರು, ಈ ವಿದ್ಯಾರ್ಥಿ ವೇತನದ ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯ ನೀಡಿದ ಎಲ್ಲ ದಾನಿಗಳಿಗೆ ಧನ್ಯವಾದ ನೀಡಿದರು. ಕೇಂದ್ರ ಕಾರ್ಯಾಲಯದ ಸಹಾಯದಿಂದ 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕೃಷ್ಣ ಪೂಜಾರಿ ಕಾರ್ಯಕ್ರಮ ನೀರೂಪಿಸಿ , ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ನೀಡಿದರು . ಕೊನೆಯಲ್ಲಿ ಧನ್ಯವಾದ ನೀಡಿದ ನಂತರ ಮಕ್ಕಳಿಗೆ ಪುಸ್ತಕ ಹಾಗು ಹಾಗು ಉಪಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡೊಂಬಿವಲಿ ಸ್ಥಳೀಯ ಸಮಿತಿಯ ಸದಸ್ಯರುಗಳು ಹಾಗು ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶ್ವಸಿಯಾಗಲು ಸಹಕರಿಸಿದರು.