
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಮೀರಾ ಭಾಯಂದರ್ ಶಾಖೆಯ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಆಯೋಜನೆಯಲ್ಲಿ ಆಟಿದ ಕೂಟ ಕಾರ್ಯಕ್ರಮ ಜುಲೈ 28ರಂದು ಮೀರಾ ರೋಡ್ ನ ಬ್ಲೂ ಮೂನ್ ಕ್ಲಬ್ಬಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವು ಸುರೇಶ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪ್ರೀತಿ ಶ್ರೀಯಾನ್, ದಯಾವತಿ ಸುವರ್ಣ, ಶಾಖೆಯ ಕಾರ್ಯಧ್ಯಕ್ಷರಾದ ಗಂಗಾಧರ್ ಬಂಗೇರ ಜೊತೆ ಕಾರ್ಯದರ್ಶಿ ತಿಲಕ್ ಸುವರ್ಣ, ಕೋಶಧಿಕಾರಿಯದ ರವಿ ಸುವರ್ಣ, ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಅಮೀನ್, ದೊಂಬಿವಲಿ ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದವಯಾಂತಿ ಕೋಟ್ಯಾನ್ , ಪ್ರಧಾನ ಕಚೇರಿಯ ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ಭಾರತಿ ಕರ್ಕೇರ ಹಾಗೂ ಯುವ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಪ್ರಮೋದ ಪುತ್ರನ್ ವೇದಿಕೆಯಲ್ಲಿ ಉಪಸ್ತರಿದ್ದರು.
ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಎಚ್ ಅರುಣ್ ಕುಮಾರ್ ಮಾತನಾಡಿ ಮೀರಾ ಭಾಯಂದರ್ ಶಾಖೆಯ ಮಹಿಳಾ ವಿಭಾಗ ವಿವಿಧ ಕಾರ್ಯಕ್ರಮಗಳನ್ನು ನಡಿಸಿ ಪರಿಸರದ ಸಮಾಜ ಬಾಂಧವರನ್ನು ಒಗ್ಗಟ್ಟು ಮಾಡಿದೆ. ಮಂಡಳಿಯಲ್ಲಿ ಸಿಗುವ ಸೇವಾ ಸೌಲಭ್ಯಗಳನ್ನು ಶಾಖೆಯ ಸದಸ್ಯರು ಪಡೆದುಕೊಳ್ಳಬೇಕು ಎಂದು ನುಡಿದರು.




ಪ್ರೀತಿ ಶ್ರೀಯಾನ್, ದಯಾವತಿ ಸುವರ್ಣ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸುರೇಶ್ ಕುಂದರ್ ಗಂಗಾಧರ್ ಬಂಗೇರ ಪ್ರಭಾವತಿ ಅಮೀನ್ ಆಟಿ ತಿಂಗಳ ಬಗ್ಗೆ ಮತ್ತು ಶಾಖೆಯ ಬೆಳವಣಿಗೆ ಬಗ್ಗೆ ಮಾತುಗಳನ್ನಾಡಿದರು
ಪ್ರಭಾವತಿ ಅಮೀನ್,ನವೀನ್ ತಿಂಗಳಾಯ, ದೇವದಾಸ್ ಕರ್ಕೇರ ಅವರು ಆಟಿ ಕಳಂಜೆ ನೃತ್ಯ ರೂಪಕವನ್ನು ಮಾಡಿದರು. ಮಹಿಳಾ ವಿಭಾಗದ ಮತ್ತು ಯುವ ವಿಭಾಗದವರು ಜಾನಪದ ನೃತ್ಯ ರೂಪಕವನ್ನು ಮಾಡಿದರು. ಪ್ರಭಾವತಿ ಅಮೀನ್ ರವರು ಏಕಪಾತ್ರ ಅಭಿನಯವನ್ನು ಮಾಡಿ ರಂಜಿಸಿದರು.
ಅಮಿತಾ ಶ್ರೀಯಾನ್ ಆಟಿ ತಿಂಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಸ್ನೇಹ ರಾಜೀವ ಮತ್ತು ಭವಾನಿ ಕೋಟ್ಯಾನ್ ಅವರನ್ನು ಗೌರವಿಸಲಾಯಿತು.
ಗೌರವವನ್ನು ಸ್ವೀಕರಿಸಿದಿಬ್ಬರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮಹಿಳಾ ವಿಭಾಗದವರು ಮನೆಯಿಂದ ಮಾಡಿ ತರಲಾದ ವಿವಿಧ ರೀತಿಯ ರುಚಿಕರ ತಿಂಡಿ ತಿನಿಸುಗಳು ಸವಿಯನ್ನು ನೆರೆದವರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ನೃತ್ಯವನ್ನು ಸಂಯೋಜಿಸಿದ ಮಾನ್ಸಿ ಪುತ್ರನ್ ಮತ್ತು ಆಶಿಕ ಕಾಂಚನ್ ಇವರನ್ನು ವೇದಿಕೆ ಗಣ್ಯರು ಗೌರವಿಸಿದರು.
ಕಾರ್ಯಕ್ರಮವನ್ನು ಅಮಿತ ಶ್ರೀಯಾನ್ ಮತ್ತು ಅಮೃತ ಸಾಲ್ಯಾನ್ ನಿರೂಪಿಸಿದರು. ಅಮಿತಾ ಶ್ರೀಯಾನ್., ಅಮೃತ ಸಾಲಿಯನ್ ಅತಿಥಿಗಳನ್ನು ಸ್ವಾಗತಿಸಿದರು.
ದೇವಕಿ ಕೋಟ್ಯಾನ್, ಕಲಾವತಿ ತಿಂಗಳಾಯ, ವೈಶಾಲಿ ಸಾಲಿಯನ್ ಅವರು ಪ್ರಾರ್ಥನೆ ಮಾಡಿದರು.
ಕಾರ್ಯಕ್ರಮದಲ್ಲಿ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಮುಲ್ಕಿ, ಕೋಶಾಧಿಕಾರಿ ಪ್ರತಾಪ್ ಕರ್ಕೇರ, ಉಪಾಧ್ಯಕ್ಷ ಅರವಿಂದ ಕಾಂಚನ್, ಸದಸ್ಯರಾದ ಪ್ರತಾಪ್ ಸಾಲಿಯಾನ್, ಚಂದ್ರಶೇಖರ್ ಕರ್ಕೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಾಜೇಶ್ವರಿ ಉಪ್ಪೂರ್, ಶಾಖೆಯ ಮಾಜಿ ಕಾರ್ಯಧ್ಯಕ್ಷ ಜಯಶೀಲ ತಿಂಗಳಾಯ ಹಾಗೂ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.