July 23, 2026
Mumbai News Kannada
ಮುಂಬಯಿ

ಪಾಲ್ಗರ್ ಜಿಲ್ಲಾ ಬಿಲ್ಲವರಿಂದ ವಿಹಾರ ಕೂಟ : ಮುಂಬೈ ಬಿಲ್ಲವರ   ಒಗ್ಗಟ್ಟು ಬಲಿಷ್ಠ ಗೊಳಿಸಲು ಚಂದ್ರಶೇಖರ್ ಪೂಜಾರಿ ಕರೆ







 
ಮಹಾರಾಷ್ಟದ ಪಾಲ್ಗರ್ ಜಿಲ್ಲಾ ವ್ಯಾಪ್ತಿಯ ವಿರಾರ್, ನಾಲಾಸೋಪಾರ, ಭಾಯಂದರ್, ಮೀರಾರೋಡ್ ಪರಿಸರದ ಬಿಲ್ಲವರು ಮತ್ತು ಜಯ ಸುವರ್ಣ ಅಭಿಮಾನಿಗಳಿಗಾಗಿ   ಪೆ 16. ರಂದು ಬೊರಿವಲಿ ತಾಲೂಕಿನ ಫಾರ್ಮ್ ರಿಜನ್ಸಿ ಗೊರೈ ರೆಸಾರ್ಟ್ ನಲ್ಲಿ ವಿಹಾರ ಕೂಟ ನಡೆಯಿತು.

 ಬೆಳಗ್ಗೆ ವಿವಿಧ ಪ್ರದೇಶದಿಂದ ಬಿಲ್ಲವರು ರೆಸಾರ್ಟ್ ನಲ್ಲಿ ಆಗಮಿಸಿ ವಿವಿಧ ಆಟೋಟ, ಪಂದ್ಯ ನೆರವೇರಿಸಿ ವಿಹಾರ ಕೂಟ ಒಂದು ಸವಿ ನೆನಪಾಗಿ ಉಳಿಯುವಲ್ಲಿ ಎಲ್ಲಾ ಬಾಂಧವರು ಸಹಕರಿಸಿದರು.

ಹಲವಾರು ಕಾರ್ಯಕ್ರಮಗಳು ಜರಗಿದ ಬಳಿಕ,ಸಂಜೆ  ಸಮಾರೋಪ ಸಮಾರಂಭ ಜರಗಿತು.

ಈ ಸಮಾರಂಭದ ವೇದಿಕೆಯಲ್ಲಿ  ಭಾರತ್ ಬ್ಯಾಂಕ್ ನಿರ್ದೇಶಕರು, ಬಿಲ್ಲವರ ಎಸೋಸಿಯೇಷನ್ ಮಾಜಿ ಅಧ್ಯಕ್ಷರೂ ಆದ   ಚಂದ್ರಶೇಖರ್ ಎಸ್ ಪೂಜಾರಿ, ಬ್ಯಾಂಕ್ ನಿರ್ದೇಶಕರುಗಳಾದ  ಮೋಹನ್ ದಾಸ್ ಜಿ ಪೂಜಾರಿ,  ಸಂತೋಷ್ ಕೆ ಪೂಜಾರಿ,  ಸುರೇಶ್ ಸುವರ್ಣ,  ನರೇಶ್ ಪೂಜಾರಿ, ಹಾಗೂ ಸಮಾಜ ಸೇವಕಿಯರಾದ  ದೇವಕಿ ಎಸ್ ಕರ್ಕೇರ,  ದೀಪ್ತಿ ಯೋಗೇಶ್ ಸುವರ್ಣ, ಸಮಾಜ ಸೇವಕ ಶಿವಾನಂದ ಬಂಗೇರರು ಉಪಸ್ಥಿತರಿದ್ದರು.          

 ಚಂದ್ರಶೇಖರ್ ಎಸ್ ಪೂಜಾರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಜಯ ಸುವರ್ಣರ ಆದರ್ಶವನ್ನು ಮತ್ತು ಅವರು ನಡೆದ ಹಾದಿಯಲ್ಲಿ ನಾವೆಲ್ಲರೂ ನಡೆದು ಮುಂಬೈಯ ಬಿಲ್ಲವರನ್ನು ಬಲಿಷ್ಠ ಗೊಳಿಸಬೇಕಾಗಿದೆ ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಇರಬೇಕು ಎಂದು ನುಡಿದರ.
ವಿಹಾರ ಕೂಟದ ಕುರಿತು ವಿರಾರ್ ನಾಲಾಸೋಪಾರ ಕರ್ನಾಟಕ ಸಂಘದ ಅಧ್ಯಕ್ಷ ಸದಾಶಿವ್ ಕರ್ಕೇರ ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲೂ ಒಳ್ಳೆಯ ಕಾರ್ಯಕ್ರಮಗಳು ನಡೆಸಿ ಸಮಾಜದ ಜನರಿಗೆ ಆಶಯವಾಗೋಣ ಎಂದು ನುಡಿದರು.

ಕಾರ್ಯಕ್ರಮದ ಯಶಸ್ಸಿಗೆ ಬಿಲ್ಲವ ಯುವ ನಾಯಕರುಗಳಾದ ಭಾಯಂದರ್  ಉದಯ್ ಸುವರ್ಣ, ಅಶೋಕ್ ಸಸಿಹಿತ್ಲು, ಅಕ್ಷಯ್, ಹಾಗೂ ಇನ್ನಿತರ ಯುವಕ ಯುವತಿಯರು ಸಹಕರಿಸಿದರು. ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ನೀಡಿ ಸತ್ಕಾರಿಸಲಾಯಿತು.

ಕಾರ್ಯಕ್ರಮವನ್ನು ಗಣೇಶ್ ಪೂಜಾರಿ ನಿರೂಪಿಸಿದರೆ ಅಶೋಕ್ ಕೆ ಸಸಿಹಿತ್ಲು ಧನ್ಯವಾದ ನೀಡಿದರು.



Related posts

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗೆ ಚುನಾವಣಾ ದಿನಾಂಕ ಪ್ರಕಟ : ಜನವರಿ 15ರಂದು ಮತದಾನ, ಜ. 16ಕ್ಕೆ ಫಲಿತಾಂಶ

Mumbai News Desk

ಮಾನನಷ್ಟ ಪ್ರಕರಣದಲ್ಲಿ ಸಂಜಯ್ ರಾವುತ್ ದೋಷಿ, ಜೈಲು ಶಿಕ್ಷೆ – ನ್ಯಾಯಾಲಯದ ಮಹತ್ತರ ನಿರ್ಧಾರ.

Mumbai News Desk

ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ – ಮಹಿಳಾ ವಿಭಾಗದವತಿಯಿಂದ ಜರಗಿದ ಶ್ರಾವಣ ಸಂಭ್ರಮ

Mumbai News Desk

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿ. ಹೊಸ ವರ್ಷದ ಗುರುಪೂಜೆ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ‘ಪುರಂದರದಾಸರ ಆರಾಧನೋತ್ಸವ ಮತ್ತು ಭಜನಾ ಸ್ಪರ್ಧೆ’

Mumbai News Desk

ಜಿ. ಎಸ್. ಬಿ. ಮಂಡಲಿ ಕಲ್ಯಾಣ – ಸಾಮೂಹಿಕ ಚೂಡಿ ಪೂಜೆ ಹಾಗೂ ಸತ್ಯನಾರಾಯಣ ಪೂಜೆ.

Mumbai News Desk