
ಚಿಣ್ಣರಬಿಂಬದಲ್ಲಿ ನಡೆಯುವ ಸ್ಪರ್ಧೆಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ:- ನವೀನ್ ಕರಿಯ ಶೆಟ್ಟಿ
ಮುಂಬಯಿ ಅ27. ಚಿಣ್ಣರಬಿಂಬದಲ್ಲಿ ನಡೆಯುವಂತಹ ಸ್ಪರ್ಧೆಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತವೆ. ರೂವಾರಿ ಪ್ರಕಾಶ್ ಭಂಡಾರಿಯವರ ದಕ್ಷ ನಾಯಕತ್ವ, ಕಾರ್ಯವೈಖರಿಯಿಂದ ಚಿಣ್ಣರಬಿಂಬವು ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದೆ.ಮಕ್ಕಳ ಪ್ರತಿಭೆಗಳನ್ನು ಕಂಡು ತುಂಬಾ ಆನಂದವಾಯಿತು ಎಂದು ಉದ್ಯಮಿ ನವೀನ್ ಕರಿಯ ಶೆಟ್ಟಿ ಹೇಳಿದರು.
ಆಗಸ್ಟ್ 18, ರವಿವಾರದಂದು ವಿಕ್ರೋಲಿ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಗಳು ವಿಕ್ರೋಲಿಯ ವಿಕೇಸ್ ಇಂಗ್ಲೀಷ್ ಹೈಸ್ಕೂಲಿನಲ್ಲಿ ನಡೆದು ವಿಕ್ರೋಲಿ ಶಿಬಿರದ ಮಕ್ಕಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಅತಿಥಿ ಸ್ಥಾನವನ್ನು ಅಲಂಕರಿಸಿ ಚಿಣ್ಣರಬಿಂಬದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಅಂದಿನ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಭಾವಗೀತೆ, ಜಾನಪದ ಗೀತೆ, ಭಾಷಣ ,ಚರ್ಚಾ ಸ್ಪರ್ಧೆ, ಛದ್ಮವೇಷ, ಪಾಲಕರಿಗಾಗಿ ಜಾನಪದ ಗೀತೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಚಿಣ್ಣರ ಪ್ರಾರ್ಥನೆಯೊಂದಿಗೆ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿಯವರು ಮತ್ತು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಪ್ರಕಾಶ್ ಭಂಡಾರಿಯವರು ಮಕ್ಕಳಲ್ಲಿ ಪ್ರತಿಭೆ ಮತ್ತು ಆತ್ಮವಿಶ್ವಾಸವಿದ್ದು ಅವರ ಉಚ್ಚಾರಣೆ ತಿದ್ದಿ ಸ್ಪಷ್ಟಗೊಳಿಸುವ ಕಾರ್ಯ ಮಾಡಬೇಕು. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ವಾರ್ಷಿಕ ಉತ್ಸವಕ್ಕೆ ಮಕ್ಕಳನ್ನು ತಯಾರು ಮಾಡಬೇಕು ಎಂದು ಮೆಚ್ಚಿಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ್ದ ಘಾಟ್ ಕೋಪರಿನ ಕನ್ನಡ ಸಂಘ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನಬಾಳಿಕೆಯವರು ಮಕ್ಕಳು ತುಂಬಾ ಪ್ರತಿಭಾವಂತರಾಗಿದ್ದು ಅವರು ಕನ್ನಡದಲ್ಲಿ ಮಾತನಾಡುವ ಶೈಲಿ ಆಕರ್ಷಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಹರಸಿದರು.



ವಿಕ್ರೋಲಿ ಬಂಟ್ಸ್ ನ ಅಧ್ಯಕ್ಷರಾದ ಗಣೇಶ್ ಮಹಾಬಲ ಶೆಟ್ಟಿ, ಮಹಾರಾಷ್ಟ್ರ ಎಸ್ಇಓ ಯುಗಾನಂದ ಶೆಟ್ಟಿ, ವಿಕೇಸ್ ಶಾಲೆಯ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಿಣ್ಣರಬಿಂಬದ ಕೇಂದ್ರ ಸಮಿತಿಯ ಸದಸ್ಯೆ ವನಿತಾ ಹೇಮಂತ್ ಗೌಡ ಮಕ್ಕಳು ಉತ್ತಮವಾಗಿ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರಸ್ತುತ ಪಡಿಸಿದ್ದು ಇನ್ನು ಮುಂದೆಯೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಬುದ್ಧರಾಗಿ ಬೆಳೆಯಲಿ ಎಂದು ಹಿತನುಡಿಗಳನ್ನಾಡಿದರು.

ಚಿಣ್ಣರ ಬಿಂಬದ ಶಿಬಿರದ ಮುಖ್ಯಸ್ಥೆ ಅನುಸೂಯ ಸುದೀರ್ ಶೆಟ್ಟಿ ಸ್ವಾಗತ ಕೋರಿದರು ಮತ್ತು ಶಿಬಿರದ ಕನ್ನಡ ಶಿಕ್ಷಕಿ ಮಲ್ಲಿಕಾ ಸಾಲ್ಯಾನ್ ಪ್ರಾಸ್ತಾವಿಕವಾಗಿ ಚಿಣ್ಣರಬಿಂಬದ ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ಅಂದಿನ ಕಾರ್ಯಕ್ರಮಕ್ಕೆ ಚಂದ್ರಶೇಖರ್ ಪಾಲೆತ್ತಾಡಿಯವರ ಅನಿರೀಕ್ಷಿತ ಆಗಮನ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಅವರನ್ನು ಮಕ್ಕಳು ಶಾಲು ಹೊದಿಸಿ ಹೂವಿನ ಗಿಡ ಕೊಟ್ಟು ಗೌರವಿಸಿದರು .ಬಂದ ಎಲ್ಲಾ ಅತಿಥಿಗಳನ್ನು ಚಿಣ್ಣರು ಶಾಲು ಹೊದಿಸಿ ಹೂವಿನ ಗಿಡವನ್ನು ನೀಡಿ ಸನ್ಮಾನಿಸಿದರು. ಅತಿಥಿಗಳಿಂದ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಅಂದಿನ ಊಟದ ವ್ಯವಸ್ಥೆಯನ್ನು ಗಣೇಶ್ ಶೆಟ್ಟಿ ಮತ್ತು ಯುಗಾನಂದ ಶೆಟ್ಟಿಯವರು ವಹಿಸಿಕೊಂಡಿದ್ದರು.
ತೀರ್ಪುಗಾರರಾಗಿ ಅನಿತಾ ವಿನೋದ್ ರಾವ್ ಮತ್ತು ಸುಪ್ರಿಯಾ ಉಡುಪ ಆಗಮಿಸಿದ್ದರು. ಚಿಣ್ಣರ ಬಿಂಬದ ಸಮನ್ವಯಕಿ ಗೀತಾ ಹೇರಳ ಹಾಗೂ ಕೇಂದ್ರ ಸಮಿತಿಯ ಸದಸ್ಯರಾದ ವಿಜಯ್ ಕೋಟ್ಯಾನ್, ಪ್ರಾದೇಶಿಕ ಮುಖ್ಯಸ್ಥೆ ಸ್ಮಿತಾ ಸುಧಾಕರ್ ಹಾಗೂ ಪ್ರಾದೇಶಿಕ ಪರಿವೀಕ್ಷಕರಾದ ದೇವಿಕಾ ಶೆಟ್ಟಿ ಮತ್ತು ಸುಜಾತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಕ್ರೋಲಿ ಶಿಬಿರದ ಸಾಂಸ್ಕೃತಿಕ ಮುಖ್ಯಸ್ಥೆ ವನಿತಾ ಕುಂದರ್ ಧನ್ಯವಾದ ಸಮರ್ಪಣೆಯನ್ನು ಮಾಡಿದರು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಬಹುಮಾನ ವಿಜೇತರು:-
ಜೂನಿಯರ್ ಜಾನಪದ ಗೀತೆ
I ಸಾನ್ವಿ ಶೆಟ್ಟಿ
2ಅನ್ವಿಕ್ಷ ಪೂಜಾರಿ
3ಆರುಷಿ ಕುಂದರ್
ಜೂನಿಯರ್ ಭಾಷಣ
1ಸಾನ್ವಿ ಶೆಟ್ಟಿ
2ಅನ್ವಿಕ್ಷ ಪೂಜಾರಿ
3ಆರುಷಿ ಕುಂದರ್
ಚದ್ಮ ವೇಷ
Iವಂಶಿಕ ಶೆಟ್ಟಿ
2ಅನ್ವಿಕ್ಷ ಪೂಜಾರಿ
3ಬಾನಿ ಶೆಟ್ಟಿ
ಸೀನಿಯರ್ ಚರ್ಚಾ ಸ್ಪರ್ಧೆ
1 ದೀತ್ಯ ನಾಯಕ್
2 ಶೌರ್ಯ ಶೆಟ್ಟಿ
3 ಆಕಾಶ್ ಪೂಜಾರಿ
ಸೀನಿಯರ್ ಭಾವಗೀತೆ
| ಆಕಾಶ್ ಪೂಜಾರಿ
2 ಆರ್ಯನ್ ಕುಂದರ್
3 ಶೌರ್ಯ ಶೆಟ್ಟಿ
ಪಾಲಕರ ಗೀತೆ
| ಹೇಮ ಶೆಟ್ಟಿ
2ವನಿತಾ ಕುಂದರ್
3 ಜಲಜಾಕ್ಷಿ ಪೂಜಾರಿ