29 C
Mumbai
October 4, 2026
Mumbai News Kannada
ಮುಂಬಯಿ

ಕಾಲಾಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿ; ಮಲಾಡ್ ಸ್ನೇಹಸಾಗರ್ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಅಗತ್ಯ ವಸ್ತುಗಳ ನೆರವು.




.

.

ವರದಿ- ಉಮೇಶ್ ಕೆ. ಅಂಚನ್.

ಧಾರ್ಮಿಕದೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಕಾಲಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ ಸದಸ್ಯರು ಡಿ. 29 ರಂದು ಮಲಾಡ್ ಪೂರ್ವದ ‘ಸ್ನೇಹ ಸಾಗರ್’ ಅನಾಥಾಶ್ರಮ ಮತ್ತು ವೃದ್ದಾಶ್ರಮಕ್ಕೆ ಬೇಟಿ ನೀಡಿ ಸುಮಾರು ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಅಗತ್ಯ ವಸ್ತುಗಳನ್ನು ನೀಡಿದರು.ಅದರಲ್ಲಿ ಆಹಾರ ಪದಾರ್ಥಗಳು, ಖಾದ್ಯ ತೖಲ, ಟೂತ್ ಪೇಸ್ಟ್ ಮತ್ತು ಬ್ರಷ್, ಸಾಬೂನು, ಹೊದಿಕೆ ವಸ್ತ್ರಗಳು, ಟವೆಲ್, ತಿಂಡಿತಿನಿಸುಗಳು, ಆಶ್ರಮಕ್ಕೆ ಒಂದು ಹೊಲಿಗೆ ಯಂತ್ರ ಹಾಗೂ ಒಂದು ಮೊಬೖಲನ್ನು ನೀಡಿದ್ದರು. ಸಮಿತಿಯ ಅದ್ಯಕ್ಷ ಮಾದವ ಎಸ್. ಶೆಟ್ಟಿ, ಕಾರ್ಯದರ್ಶಿ ಫ್ರೊ. ಕೇಶವ ಎಚ್. ಕರ್ಕೇರ ಇವೆಲ್ಲವನ್ನು ಆಶ್ರಮದ ಉಸ್ತುವಾರಿ ಸಿಸ್ಟರ್ ಮಾರ್ತಾ ಮೊಂಡಲ್ ಹಾಗೂ ಅವರ ಸಹಾಯಕರಿಗೆ ನೀಡಿ ಮುಂದಿಗೂ ತಮ್ಮ ಅಗತ್ಯಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಾಯಿಬಾಬಾ ಪೂಜಾ ಸಮಿತಿಯ ಕಾರ್ಯಕಾರೀ ಸಮಿತಿಯ ಸದಸ್ಯರಾದ ಸತೀಶ್ ಭಂಡಾರಿ, ಪ್ರದೀಪ್ ಸುವರ್ಣ ಹಾಗೂ ಪಾರಿತೋಷ್ ರೈ, ರಾಧಿಕಾ ಶೇಣವ, ಯಶೋಧಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



Related posts

ಬಂಟರ ಸಂಘ ಮುಂಬಯಿ – ವಸಯಿ ಡಹಣು ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗ ನವರಾತ್ರಿ ಉತ್ಸವ ಸಂಭ್ರಮ. ದಾಂಡಿಯಾ .

Mumbai News Desk

ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನ, ಮುಂಬೈ: 2026–2028ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Mumbai News Desk

ವಿದ್ಯಾದಾಯಿನಿ ಸಭಾ ಮುಂಬಯಿ – ಶತ ಸಂಭ್ರಮದ ಉದ್ಘಾಟನೆ.

Mumbai News Desk

ಗೊರೆಗಾಂವ್ ಕರ್ನಾಟಕ ಸಂಘದ 67ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ ಸಮಾರಂಭಕ್ಕೆ ಚಾಲನೆ,

Mumbai News Desk

ಶಹಾಡ್: ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಭೂಮಿಕಾ ಭಂಡಾರಿ  ಗೆ ಶೇ 93 ಅಂಕ.

Mumbai News Desk