April 2, 2025
ಮುಂಬಯಿ

ಕುರುಬರ ಸಂಘ ಮಹಾರಾಷ್ಟ್ರ ವಾರ್ಷಿಕ ಮಹಾಸಭೆ ಹಾಗೂ ಹಳದಿ ಕುಂಕುಮ ಅಚರಣೆ

ತಮ್ಮ ಮಕ್ಕಳಿಗೆ ಸಂಘದ  ಚಟುವಟಿಕೆಗಳಲ್ಲಿ ಭಾಗ ವಹಿಸಲು ಪ್ರೇರಣೆ ನೀಡಿ- ಯೋಗೇಶ್ ಗೌಡ

ಮುಂಬಯಿ ಅ‌ 27: ಸಮಾಜ ಬಾಂಧವರು ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ತಾವು ಭಾಗವಹಿಸುದರೊಂದಿಗೆ ತಮ್ಮ ಮಕ್ಕಳಿಗೆ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಿ ಸಂಘಟನೆಯನ್ನು ಬಲಪಡಿಸಲು ಸಹಕಾರ ನೀಡ ಬೇಕು ಯುವಕರು ಮುಂದೆ ಬಂದು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಘದ ಬೆನ್ನೆಲುಬಾಗಿ ನಿಲ್ಲ ಬೇಕು ಹಾಗೂ ಸಮಾಜ ಬಾಂಧವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದಲ್ಲಿ ಸಂಘ ಮತ್ತಷ್ಟು ಬಲಿಷ್ಠ ಗೊಳ್ಳುವುದರಲ್ಲಿ ಸಂದೇಹವಿಲ್ಲ ಮಾಜಿ ಅದ್ಯಕ್ಷರಾದ ದಿ.ಮಂಜೇಗೌಡರ ನಂತರ ನಾನು ಅಧ್ಯಕ್ಷ ಪದವನ್ನು ವಹಿಸಿಕೊಂಡಾಗ 6,54000/ರೂಪಾಯಿ ನಮ್ಮ ಸಂಘದಲ್ಲಿ ಇತ್ತು  ನಿಮ್ಮೆಲ್ಲರ ಸಹಕಾರದಿಂದ ಈಗ 84,00,000/ ಲಕ್ಷ ರೂಪಾಯಿಗೆ ಎರಿಕೆಯಾಗಿದೆ. ತಾವೆಲ್ಲರೂ ಇದೇ ರೀತಿ ಸಹಕಾರ ನೀಡಿದರೆ ಮುಂದಿನ ಒಂದೂವರೆ ವರ್ಷದಲ್ಲಿ ಸಮಾಜಕ್ಕೆ ಸ್ವಂತ ಕಚೇರಿಯನ್ನು ತೆಗೆದು ಕೊಳ್ಳಲಿದ್ದೇವೆ ಎಂದು ಕುರುಬರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಯೋಗೇಶ್ ಗೌಡರವರು ನುಡಿದರು

ಅವರು ಅಗಸ್ಟ್ 25 ರ ರವಿವಾರದಂದು ಬೆಳಿಗ್ಗೆ ಮಸ್ಜೀದ್ ಬಂದರ್ ನ ಬದ್ರಿ ಬಾಗ್ ಸಭಾಗೃಹದಲ್ಲಿ ಕುರುಬರ ಸಂಘ ಮಹಾರಾಷ್ಟ್ರ ಇದರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ರೇಷ್ಮಾ ಮಾತನಾಡುತ್ತಾ ಸಂಘದ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸ ಬೇಕು  ಎಲ್ಲಾ ಸದಸ್ಯರಿಗೆ ಉಪಯೋಗವಾಗುವಂತೆ ಕಚೇರಿಯನ್ನು ಮುಂಬಯಿಯ ಮಧ್ಯಭಾಗದಲ್ಲಿ ಮಾಡುವಂತೆ ಕರೆ ನೀಡಿದರು.

ಗೌ.ಪ್ರ ಕಾರ್ಯದರ್ಶಿ ರವಿ ಕುಮಾರ್ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಕೋಶಾಧಿಕಾರಿ ಗಂಗಾಧರ್ ಲೆಕ್ಕ ಪತ್ರ ಮಂಡಿಸಿದರು

ಇದೇ ಸಂದರ್ಬದಲ್ಲಿ ಸಮಿತಿ ಸದಸ್ಯ ದಂಪತಿಗಳನ್ನು ಹಾಗೂ ಹಿರಿಯ ಸದಸ್ಯರನ್ನು  ವೇದಿಕೆಯ ಮೇಲೆ ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಮಹಾ ಸಭೆಗೆ ಚಾಲನೆ ನೀಡಿದರು.

ವೇದಿಕೆಯ ಮೇಲೆ ಅಧ್ಯಕ್ಷ ಯೋಗೇಶ್ ಗೌಡ, ಉಪಾಧ್ಯಕ್ಷ ನಿಂಗರಾಜ ಗೌಡ, ಕುಮಾರ್ ಗೌಡ, ಗೌ.ಪ್ರ ಕಾರ್ಯದರ್ಶಿ ರವಿಕುಮಾರ್, ಗೌ.ಪ್ರ ಕೋಶಾಧಿಕಾರಿ ಗಂಗಾಧರ್, ಜತೆ ಕಾರ್ಯದರ್ಶಿ ಶಿವೆಗೌಡ, ಜತೆ ಕೋಶಾಧಿಕಾರಿ ಉಮೇಶ್, ಸಲಹೆಗಾರರಾದ ನಂಜೇಗೌಡ, ಮಂಜೇಗೌಡ, ಸಮಿತಿ ಸದಸ್ಯರಾದ  ಮುತ್ತಣ್ಣ ಗೌಡ, ಉಮೇಶ್ ಗೌಡ, ಮಂಜೇಗೌಡ, ರವಿ ಗೌಡ, ಮೈಲಾರಿಗೌಡ, ಚಂದ್ರ ಗೌಡ, ಸುರೇಶ್ ಗೌಡ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾಗೌಡ, ರಾಧ ಗೌಡ, ಮಣಿ ಮಂಜೇಗೌಡ, ನೇತ್ರಾ ಗೌಡ, ಪುಷ್ಪ ಗೌಡ, ಜಯಲಕ್ಷ್ಮೀ ಗೌಡ, ವಿಶಾಲಕ್ಷಿ ಗೌಡ,  ಜ್ಯೋತಿ ಗೌಡ, ದೀಪಾ ಗೌಡ, ಶಾಂತಾ ಗೌಡ, ಜಯಮ್ಮ ಗೌಡ, ಗಾಯತ್ರಿ ಗೌಡ, ಕೌಶಲ್ಯ ಗೌಡ, ಪದ್ಮಾ ಗೌಡ, ತಾಯಮ್ಮ ಗೌಡ, ಮೊದಲಾದವರು ಉಪಸ್ಥಿತರಿದ್ದರು.

ಮಂಜೇ ಗೌಡ ಚೆಂಬೂರು, ಕೃಷ್ಣ ಗೌಡ, ಸುರೇಶ್ ಗೌಡ, ಮಂಜ ಗೌಡ, ಸ್ವಾಮಿ ಗೌಡ ಹೊಸೂರು, ಕುಮಾರ್ ಗೌಡ, ಚಂದ್ರ ಗೌಡ, ರವಿ ಕುಮಾರ್, ಯೋಗೇಶ್ ಗೌಡ ಇನಿತರರು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿ ಗೊಳಿಸಿದರು. ಕೊನೆಯಲ್ಲಿ ರವಿ ಕುಮಾರ್ ವಂದಿಸಿದರು.

Related posts

ಶ್ರೀ ಕಟೀಲ್ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವ

Mumbai News Desk

ಬಂಟರ ಸಂಘ ಮುಂಬೈ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಅರಶಿನ ಕುಂಕುಮ, ವಿಧವೆಯರಿಗೆ  ಸೀರೆ, ಧನ ಸಹಾಯ ವಿತರಣೆ

Mumbai News Desk

ಕರ್ನಾಟಕ ಸಂಘ ಪನ್ವೆಲ್ ಇದರ  34ನೇ ವಾರ್ಷಿಕೋತ್ಸವ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ 11 ನೇ ವಾರ್ಷಿಕೋತ್ಸವ ಸಂಭ್ರಮ.

Mumbai News Desk