
ಸಹಾಯ ಮಾಡಿ ಬದುಕುವುದನ್ನು ಡೊಂಬಿವಲಿ ತುಳು- ಕನ್ನಡಿಗರಿಂದ ಕಲಿಯ ಬೇಕು- ಡ. ದಿವಾಕರ ಶೆಟ್ಟಿ ಇಂದ್ರಾಳಿ
ಚಿತ್ರ ವರದಿ : ರವಿ. ಬಿ. ಅಂಚನ್
ಡೊಂಬಿವಲಿ ಅ.21: ತುಳು – ಕನ್ನಡಿಗರು ಸಂಘ ಜೀವಿಗಳು, ಒಗ್ಗಟ್ಟಿನಿಂದ ಸಂಘ- ಸಂಸ್ಥೆಗಳನ್ನು ಕಟ್ಟಿ ಅನ್ಯೋನ್ಯತೆಯಿಂದ ಬಾಳುವವರು, ಇನ್ನೊಬ್ಬರಿಗೆ ಸಹಾಯ ಮಾಡಿ ಬದುಕುವುದನ್ನು ಡೊಂಬಿವಲಿ ತುಳು- ಕನ್ನಡಿಗರಿಂದ ಕಲಿಯ ಬೇಕು, ನಾವು ಇನ್ನೊಬ್ಬರಿಗೆ ಸಹಾಯ ಮಾಡಿ ಅವರ ಕಣ್ಣೀರನ್ನು ಒರೆಸಿದಾಗ ಸಿಗುವ ಆನಂದ ಮನಸ್ಸಿಗೆ ತೃಪ್ತಿ ನೀಡುತ್ತದೆ. ಮಹಾರಾಷ್ಟ್ರದ ತುಳುನಾಡೇಂದು ಖ್ಯಾತಿಯನ್ನು ಪಡೆದ ಡೊಂಬಿವಲಿಯ ಸಂಘ- ಸಂಸ್ಥೆಯ ಕಾರ್ಯಕ್ರಮ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಇತರರೊಂದಿಗೆ ಬೆರೆತಾಗ ನಮ್ಮ ಮನಸ್ಸಿನ ತಳಮಳ ದುಃಖ ಮಾಯವಾಗುತ್ತದೆ. ಡೊಂಬಿವಲಿಯ ಹಿರಿಯ ಸಂಸ್ಥೆ ಕರ್ನಾಟಕ ಸಂಘ ಡೊಂಬಿವಲಿ ಇದು ನಿಮ್ಮೆಲ್ಲರ ಸಂಸ್ಥೆ, ನಮ್ಮ ಶಾಲೆ, ಕಾಲೇಜಿನಲ್ಲಿ ಸಿಗುವ ಸೌಲಭ್ಯವನ್ನು ತುಳು- ಕನ್ನಡಿಗರು ಪಡೆಯ ಬೇಕು, ಬೆರಳೆಣಿಕೆಯ ಸದಸ್ಯರಿಂದ ಸ್ಥಾಪನೆಯಾದ ತುಳು ವೆಲ್ ಫೇರ್ ಎಸೋಸಿಯೇಷನ್ ಇಂದು 27 ನೇ ವಾರ್ಷಿಕೋತ್ಸವವನ್ನು ರವಿ ಸನಿಲ್ ರವರ ಅಧ್ಯಕ್ಷತೆಯಲ್ಲಿ ಅಚ್ಚುಕಟ್ಟಾಗಿ ಅಚರಿಸಿದೆ ಇಂದಿನ ಯಕ್ಷಗಾನದಲ್ಲಿ ಬಾಲಕಿ ಶರಣ್ಯ ಉತ್ತಮ ಪ್ರದರ್ಶನವನ್ನು ನೀಡಿ ನಮ್ಮೆಲ್ಲರ ಮನಗೆದ್ದಿದ್ದಾಳೆ.ಈ ಅಚರಣೆ ಇಲ್ಲಿಗೆ ನಿಲ್ಲದೆ ಪ್ರತಿವರ್ಷ ಅಚರಿಸುವಂತಾಗ ಬೇಕು, ರವಿ ಸನಿಲ್ ಒರ್ವ ಅಪತ್ಭಾಂದವ ಎಂದರೂ ತಪ್ಪಾಗಲಾರದು ಹಲವಾರು ರೋಗಿಗಳಿಗೆ ಸಹಾಯ ಮಾಡಿ ಪುಣ್ಯವನ್ನು ಸಂಪಾದನೆ ಮಾಡಿದ್ದಾರೆ. ಎಂದು ಹೊರನಾಡ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಾಧ್ಯಕ್ಷ ಡಾ.ದಿವಾಕರ ಶೆಟ್ಟಿ ಇಂದ್ರಾಳಿ ನುಡಿದರು.
ಅವರು ಅಗಸ್ಟ್ 25 ರ ರವಿವಾರ ಸಂಜೆ ಡೊಂಬಿವಲಿ ಎಂ.ಐ.ಡಿ.ಸಿ ಫೈಯರ್ ಬಿಗ್ರಡ್ ಸಮೀಪದ ಹೋಟೆಲ್ ಶಿವಂ ಸಭಾಗೃಹದಲ್ಲಿ ತುಳು ವಲ್ ಫೇರ್ ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.

ಅತಿಥಿ ಕರ್ನಾಟಕ ಸಂಘದ ಅದ್ಯಕ್ಷರಾದ ಸುಕುಮಾರ್ ಶೆಟ್ಟಿ ಮಾತನಾಡುತ್ತಾ ತುಳು ವೇಲ್ ಫೇರ್ ಎಸೋಸಿಯೇಷನ್ ಇದರ ಕಾರ್ಯ ಚಟುವಟಿಕೆಗಳನ್ನು ನಾನು ಬಹಳ ಹತ್ತಿರದಿಂದ ಕಂಡವ, ನಮ್ಮ ಸಂಸ್ಕಾರ, ಸಂಸ್ಕೃತಿಗಳು ಇಂದು ಉಳಿದಿದ್ದರೆ ಅದು ಯಕ್ಷಗಾನದಿಂದ ಎಂದು ಹೆಮ್ಮೆಯಿಂದ ಹೇಳ ಬಹುದು, ಇಂದಿನ ದಿನಗಳಲ್ಲಿ ಯಕ್ಷಗಾನ ಗಂಡು ಕಲೆಯಾಗಿ ಉಳಿದಿಲ್ಲ ಇಂದಿನ ಪ್ರದರ್ಶನ ದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮಹಿಳೆಯರು ಭಾಗವಹಿಸಿದ್ದಾರೆ. ಕರ್ನಾಟಕ ಸಂಘ ನಮ್ಮ ನಿಮ್ಮೆಲ್ಲರ ಸಂಸ್ಥೆ ತುಳು- ಕನ್ನಡಿಗರು ಶಿಕ್ಷಣದಿಂದ ವಂಚಿತರಾಗ ಬಾರದೇಂಬ ಉದ್ಧೇಶದಿಂದ ಸುಮಾರ ಒಂದುವರೆ ಕೋಟಿ ರೂಪಾಯಿ ಠೇವಣಿಯಲ್ಲಿಟ್ಟು ಅದರ ಬಡ್ಡಿದರದಲ್ಲಿ ಕನ್ನಡಿಗರ ಶಿಕ್ಷಣಕ್ಕೆ ಸಹಾಯ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.ಡೊಂಬಿವಲಿಯಲ್ಲಿ ಜರಗುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಕನ್ನಡಿಗರು ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ ಇಂತಹ ಸಹಕಾರ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸದಾ ಇರಲಿ ಎಂದರು.
ಅತಿಥಿ ಶ್ರೀ ಮೂಕಾಂಬಿಕಾ ದೇವಸ್ಥಾನ ಶಹಾಡ್ ಇದರ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಮಾತನಾಡುತ್ತಾ ಪ್ರತಿಯೊಬ್ಬ ಮಾತ-ಪಿತರು ತಮ್ಮ ಮಕ್ಕಳನ್ನು ದೇವಸ್ಥಾನ, ಮಂದಿರ, ಮಠಗಳಿಗೆ ಕರೆದುಕೊಂಡು ಹೋಗಿ ನಮ್ಮ ಅಚಾರ, ವಿಚಾರಗಳನ್ನು ಕಲಿಸಿದಾಗ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿದು ಬೆಳೆಯುತ್ತದೆ ಎಂದರು.

ಅತಿಥಿ ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ಮಾತನಾಡುತ್ತಾ ನಾವೆಲ್ಲರೂ ಜಾತಿ , ಮತ, ಬೇಧವನ್ನು ಮರೆತು ಉತ್ತಮ ಸಂಘಟನೆಯ ಮೂಲಕ ಕೆಲಸ ಮಾಡಿ ನಮ್ಮ ಮಕ್ಕಳಿಗೆ ನಮ್ಮ ಧರ್ಮ, ಅಚರಣೆ, ಸಂಸ್ಕಾರಗಳನ್ನು ಕಲಿಸಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗೋಣಾ. ಮಕ್ಕಳು, ಮಹಿಳೆಯರು ಉತ್ತಮ ಯಕ್ಷಗಾನದ ಪ್ರದರ್ಶನವನ್ನು ನೀಡಿದ್ದಾರೆ ಇಂತಹ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡೋಣಾ ಎಂದರು.
ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಮಾತನಾಡುತ್ತಾ ಎಸೋಸಿಯೇಷನ್ ಒಗ್ಗಟ್ಟಿನಿಂದ ಪರಿಸರದಲ್ಲಿ ಧಾರ್ಮಿಕ, ಸಮಾಜಿಕ, ಕೆಲಸಗಳನ್ನು ಮಾಡುತ್ತಿದ್ದು ಇಂದು ಹೆಜ್ಮಾಡಿ ಮನೋಜ್ ಕುಮಾರ್ ರವರ ನೀರ್ಧೇಶನದಲ್ಲಿ ಉತ್ತಮ ಯಕ್ಷಗಾನ ಪ್ರದರ್ಶನ ಜರಗಿದೆ ಎನ್ನಲು ಸಂತೋಷ ವಾಗುತ್ತಿದೆ. ಎಸೋಸಿಯೇಷನ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ, ಸಂಸ್ಥೆಯ ಅಭಿವೃದ್ಧಿಯಲ್ಲಿ ನಾವು ಪಾಲುದಾರರಾಗೋಣಾ ಎಂದರು.

ಅತಿಥಿ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ ಅದ್ಯಕ್ಷರಾದ ಸೋಮನಾಥ ಪೂಜಾರಿ ಮಾತನಾಡುತ್ತಾ ಈ ಸಂಸ್ಥೆ ಸಂಘಟನೆಯ ಮೂಲಕ ಯಶಸ್ವಿ ಸಂಸ್ಥೆಯಾಗಿ 27 ರ ವಸಂತವನ್ನು ಕಂಡಿದೆ ತುಳು- ಕನ್ನಡಿಗರ ಸಹಕಾರದಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಇದೇ ಸಂದರ್ಬದಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯರಾದ ದೇವದಾಸ ಕುಲಾಲ್, ಕೃಷ್ಣ ಸಾಲ್ಯಾನ್, ಪಾಂಡುರಂಗ ಕಾಂಚನ್,ಅರವಿಂದ ಕಾಂಚನ್ ಇವರನ್ನು ಹಾಗೂ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಮತ್ತು ಸಂಸ್ಥೆಯ ಸಕ್ರಿಯ ಕಾರ್ಯಕರ್ತರಾದ ಭಾಸ್ಕರ್ ಕೋಟ್ಯಾನ್, ಗಂಗಾಧರ ಶೆಟ್ಟಿಗಾರ್, ಸುನಂದ ಶೆಟ್ಟಿ, ಪ್ರತಿಭಾ ಡಿ.ಕರ್ಕೇರ, ರೇಣುಕಾ ಸುಧೀರ್,ವಿನೋದಾ ಡಿ ಶೆಟ್ಟಿ, ತಾರಾನಾಥ ಕುಂದರ್, ಪ್ರಕಾಶ್ ಅಮೀನ್, ಕುಮಾರ್ ಕಾಂಚನ್ ಯಕ್ಷಗುರು ಮನೋಜ್ ಹೆಜ್ಮಾಡಿ, ಸಂಸ್ಥೆಯ ಅಧ್ಯಕ್ಷ ರವಿ ಸನಿಲ್ ದಂಪತಿ, ಉಪಾಧ್ಯಕ್ಷ ವಸಂತ ಸುವರ್ಣ ಇವರನ್ನು ವೇದಿಕೆಯ ಮೇಲಿದ್ದ ಗಣ್ಯರು ಶಾಲು, ನೆನಪಿನ ಕಾಣಿಕೆ ಫಲ,ಪುಷ್ಫ ನೀಡಿ ಸನ್ಮಾನಿಸಿದರು.

ಸುನಂದ ಎನ್. ಶೆಟ್ಟಿ, ಶೋಭಾ ಎಸ್. ಶೆಟ್ಟಿ, ಶಾಂತ ಜೆ.ಅಮೀನ್ ರವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ವೇದಿಕೆಯ ಮೇಲೆ
ರವಿ ಸನಿಲ್ ಡಾ.ದಿವಾಕರ್ ಶೆಟ್ಟಿ ಇಂದ್ರಾಳಿ, ಸುಕುಮಾರ್ ಎನ್. ಶೆಟ್ಟಿ, ಸುಬ್ಬಯ್ಯ ಎ.ಶೆಟ್ಟಿ ಆನಂದ ಡಿ.ಶೆಟ್ಟಿ ಎಕ್ಕಾರ್, ಜಗದೀಶ್ ಆರ್. ಬಂಜನ್, ಸೋಮನಾಥ ಅರ್.ಪೂಜಾರಿ, ಪ್ರಭಾಕರ್ ಆರ್.ಶೆಟ್ಟಿ, ಕರುಣಾಕರ ಜೆ.ಶೆಟ್ಟಿ, ಜಗನ್ನಾಥ ಆರ್.ಅಮೀನ್, ಲಕ್ಷ್ಮಣ್ ಮೂಲ್ಯ, ಪ್ರಕಾಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಮತ್ತು ಸದಸ್ಯರ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ತುಳು ವೆಲ್ ಫೇರ್ ಎಸೋಸಿಯೇಶನ್ ಯಕ್ಷಗಾನ ತರಬೇತಿ ಶಿಬಿರದ ವಿದ್ಯಾರ್ಥಿಗಳಿಂದ ಗುರು ಹೆಜ್ಮಾಡಿ ಮನೋಜ್ ಕುಮಾರ್ ಇವರ ನಿರ್ದೇಶನದಲ್ಲಿ ಮಹಿಷ ಮರ್ಧಿನಿ ತುಳು ಯಕ್ಷಗಾನ ನಡೆಯಿತು
ಅದ್ಯಕ್ಷರ ಮಾತು:-
ಕೇವಲ ಏಳು ಸದಸ್ಯರಿಂದ ಸ್ಥಾಪನೆಯಾದ ಈ ಸಂಸ್ಥೆ ತನ್ನ ಸ್ವಂತ ಕಚೇರಿಯನ್ನು ಹೊಂದಿದೆ ಎನ್ನಲು ಅಭಿಮಾನವಾಗುತ್ತಿದೆ ಸಂಸ್ಥೆ ಸಮಾಜಿಕ, ಧಾರ್ಮಿಕ ಕಾರ್ಯದೊಂದಿಗೆ ಗುರು ಮನೋಜ್ ಹೆಜ್ಮಾಡಿಯ ಮೂಲಕ ಮಕ್ಕಳಿಗೆ ಮಹಿಳೆಯರಿಗೆ ವಿನಾಮೂಲ್ಯ ಯಕ್ಷಗಾನವನ್ನು ಕಲಿಸುತ್ತಿದ್ದೇವೆ.ದಾನಿಗಳ ಹಾಗೂ ಸಂಸ್ಥೆ ಅಭಿಮಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ಸನ್ನು ಕಂಡಿದೆ. ಈ ಸಂಸ್ಥೆಗೆ ನಿಮ್ಮೇಲ್ಲರ ಪ್ರೀತಿ ಸದಾ ಇರಲಿ — ರವಿ ಸನಿಲ್ ( ಅಧ್ಯಕ್ಷರು: ತುಳು ವೆಲ್ ಫೇರ್ ಎಸೋಸಿಯೇಷನ್ )