ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಸಂದೇಶಗಳು ಸರ್ವಮಾನ್ಯ ವಾಗಿರುವಂತದು. ಶಿಕ್ಷಣ ಮತ್ತು ಸಂಘಟನೆಯ ಮಹತ್ವವನ್ನು ನಮಗೆ ಬೋಧಿಸಿ, ಅನುಷ್ಠಾನ ಗೊಳಿಸುವ ಪಾತ್ರ ವಹಿಸಿದವರು.ಅದರೆ ಸಾಕ್ಷರತೆ ಆದರೆ ಸಾಲದು, ಜೀವನಕ್ಕೆ ಸ್ಪಂದಿಸುವ ಶಿಕ್ಷಣ ಪಡೆಯುವುದು ಮುಖ್ಯ ಮೂಡನಂಬಿಕೆ, ಅಜ್ಞಾನದಿಂದಾಗಿ ಸಮಾಜ ಹಿಂದುಳಿದಿದೆ.ಅದೇ ರೀತಿ ರಾಜ್ಯದಲ್ಲಿ ಬಸವಣ್ಣ ನವರ ಬಳಿಕ ಶೋಷಿತ ಹಿಂದುಳಿದ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸುವ ಮಹತ್ವದ ಪಾತ್ರ ನಿರ್ವಹಿಸಿದವರು ಮಾಜಿ ಮುಖ್ಯಮಂತ್ರಿ ಗಳಾದ ದಿ.ಡಿ. ದೇವರಾಜ ಅರಸುರವರು ಎಂದು ವಿಧಾನ ಪರಿಷತ್ ನ ಸದಸ್ಯರಾದ ಬಿ.ಕೆ.ಹರಿಪುಸಾದ್ ರವರು ಹೇಳಿದರು.
ಅವರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸುವರ್ಣ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ಕುದ್ರೋಳಿ, ನಾರಾಯಣ ಗುರು ಶಿಕ್ಷಣ ಸಂಸ್ಥೆ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತ್ಯುತ್ಸವ ಮತ್ತು ದಿ.ಡಿ. ದೇವರಾಜ ಅರಸು ರವರ 109 ನೇ ಜನ್ಮಜಯಂತಿ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಭಾ ಅಧ್ಯಕ್ಷತೆಯನ್ನು ವಹಿಸಿದ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರು ಮಾತನಾಡುತ್ತಾ ಬ್ರಹ್ಮಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಆಶಯದಂತೆ ಹಿಂದುಳಿದ ಸಮಾಜದ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ದಾಮೋದರ ಆರ್.ಸುವರ್ಣ ರವರು ಸ್ಥಾಪಿಸಿರುವ ನಾರಾಯಣ ಗುರು ಶಿಕ್ಷಣ ಸಂಸ್ಥೆಯು ಯಾವುದೇ ಡೊನೇಷನ್ ಪಡೆಯದೆ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಸುಮಾರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈಯುತ್ತಿದ್ದಾರೆ ಎಂದರು.
ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಲತಾ ಎನ್.ಸುವರ್ಣ, ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೋಟು, ಕೋಶಾಧಿಕಾರಿ ಬಿ.ದೇರಣ್ಣ, ಒಕ್ಕೂಟದ ಕೋಶಾಧಿಕಾರಿ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯ ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿನೇಶ್ ಬಂಗೇರ ವಂದಿಸಿದರು. ಪ್ರಾಧ್ಯಾಪಕ ರಾದ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ವಿದ್ಯಾರ್ಥಿಗಳಿಂದ ಭಜನೆ ಬಳಿಕ ಗುರುಪೂಜೆ ನಡೆಯಿತು.
