April 2, 2025
ಮುಂಬಯಿ

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮಲಾಡ್ ಕೊಂಕಣಿ ಪಾಡದಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ .

ದಿ. ಜಯ ಸಿ ಸುವರ್ಣರು ನೀಡಿದ ಮಾರ್ಗದರ್ಶನದಂತೆ
ಬ್ಯಾಂಕ್ ಅಭಿವೃದ್ದಿಗೊಳ್ಳುತ್ತಿದೆ: ಸಂತೋಷ್ ಕೆ ಪೂಜಾರಿ


ಚಿತ್ರ.ವರದಿ ದಿನೇಶ್ ಕುಲಾಲ್.


ಮುಂಬಯಿ ಅ28. ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಮಲಾಡ್ ಪೂರ್ವದ ಕುರಾರ್ ನ ಕೊಂಕಣಿ ಪಾಡ್ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ ಅ21 ರಂದು ಭಾರತ್ ಬ್ಯಾಂಕ್ ನ ಹಿರಿಯ ಗ್ರಾಹಕರ, ನಿರ್ದೇಶಕ ಸಂತೋಷ್ ಕೆ ಪೂಜಾರಿ ಮತ್ತಿತರ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿರಿದ್ದ ಉದ್ಯಮಿ ನವೀನ್ ಕರ್ಕೇರ ಸ್ಪರ್ಧಾತ್ಮಕ ಯುಗದಲ್ಲಿ ಭಾರತ್ ಬ್ಯಾಂಕಿನ ಸಾಧನೆ ಮಹತ್ತರವಾದದ್ದು. ಪ್ರಮುಖ ಬ್ಯಾಂಕುಗಳಲ್ಲಿ ಭಾರತ್ ಬ್ಯಾಂಕು ಕೂಡ ಒಂದಾಗಿದ್ದು ಸದೃಢ ಬ್ಯಾಂಕ್ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಹಲವಾರು ವರ್ಷಗಳಿಂದ ಈ ಬ್ಯಾಂಕಿನಲ್ಲಿ ವ್ಯವಹಾರ ಹೊಂದಿದ ನನಗೆ ಈ ಬ್ಯಾಂಕಿನ ಸೇವೆ ಬಹಳ ಸಂತಸ ನೀಡಿದೆ. ಬ್ಯಾಂಕು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇನೆ ಎಂದರು.ಸ್ನೇಹಲ್ ಲಾಡ್ ಭಾರತ್ ಬ್ಯಾಂಕಿನ ಸೇವೆ ಅತಿ ಉತ್ತಮವಾಗಿದೆ. ನಗುಮೊಗದ ಸೇವೆ ಬೇರೆ ಯಾವ ಬ್ಯಾಂಕಿನಲ್ಲಿಯೂ ಸಿಗುವುದಿಲ್ಲ . ನಾನು ಹಲವು ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರು ಈ ಬ್ಯಾಂಕು ತಮ್ಮ ಬ್ಯಾಂಕಿಂಗ್ ವ್ಯವಹಾರ ಸಮಯ ಮೀರಿ ಬ್ಯಾಂಕಿಗೆ ನಾವು ಬಂದರು ಇಲ್ಲಿನ ಸಿಬ್ಬಂದಿಗಳು ಸೇವೆ ನೀಡುವುದು ಇಲ್ಲಿಯ ವೈಶಿಷ್ಟ್ಯ. ಆಧುನಿಕ ಡಿಜಿಟಲ್ ಕಾಲದಲ್ಲಿ ಬ್ಯಾಂಕಿನ ಅಭಿವೃದ್ಧಿ ಬಹಳ ಹೆಮ್ಮೆ ಎಸುತ್ತದೆ. ಇಲ್ಲಿ ನನಗೆ ಇದು ನನ್ನ ಕೌಟುಂಬಿಕ ಬ್ಯಾಂಕಿನಂತೆ ಭಾಸವಾಗುತ್ತದೆ. ನನ್ನ ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರ ಈ ಬ್ಯಾಂಕಿನಲ್ಲಿ ಮಾಡುತ್ತಿದ್ದೇನೆ ಎಂದು ನುಡಿದರು


ಬ್ಯಾಂಕಿನ ನಿರ್ದೇಶಕ. ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳಿಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ ಪೂಜಾರಿ ಮಾತನಾಡಿ ದಿವಂಗತ ಜಯ ಸಿ ಸುವರ್ಣರ ಮಾರ್ಗದರ್ಶನದಿಂದ ಭಾರತ್ ಬ್ಯಾಂಕ್ ಬಹಳ ಅಭಿವೃದ್ದಿ ಹೊಂದಿದೆ. ಪ್ರಸಕ್ತ ಆಡಳಿತ ಮಂಡಳಿ ಪಾರದರ್ಶಕತೆಯ ಸೇವೆಯೊಂದಿಗೆ ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ . ಈ ಶಾಖೆಯ ಅಭಿವೃದ್ಧಿಗೆ ಪರಿಸರದ ಉದ್ಯಮಿಗಳು ತುಳು ಕನ್ನಡಿಗರು ಸಹಕರಿಸಬೇಕು, ಇಲ್ಲಿನ ಸಿಬ್ಬಂದಿಗಳು ಬಹಳ ಒಳ್ಳೆಯ ರೀತಿಯಲ್ಲಿ ಇಂದು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ನುಡಿದರು.
ಮಲಾಡ್ ಲಕ್ಷ್ಮಣ್ ನಗರದ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜ್ಯೋತಿ ಹೋಟೆಲ್ ಮಾಲಕ ಹೋಟೆಲ್ ಉದ್ಯಮಿ ಸುರೇಶ್ ಶೆಟ್ಟಿ, ಉದ್ಯಮಿ ಸುರೇಶ್ ಕರ್ಕೇರ, ಹೋಟೆಲ್ ಉದ್ಯಮಿbಚಂದ್ರಶೇಖರ್ ಶೆಟ್ಟಿ ಕೊಕ್ಕರಣೆ, ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಉಪಕಾರ್ಯಧ್ಯಕ್ಷ ನ್ಯಾಯವಾದಿ ಸೋಮನಾಥ್ ಅಮೀನ್, ನಿರ್ದೇಶಕರುಗಳಾದ ಗಂಗಾಧರ್ ಜೆ ಪೂಜಾರಿ, ಮೋಹನ್ ದಾಸ್ ಜಿ ಪೂಜಾರಿ ಶುಭಾಶಯ ನೀಡಿದರು.
ಸಮಾರಂಭಕ್ಕೆ ಆಗಮಿಸಿದ ಗ್ರಾಹಕರಿಗೆ ಶಾಖೆಯ ಮುಖ್ಯ ಪ್ರಬಂಧಕರಾದ ಧನಂಜಯ ಶಾಂತಿ ಸ್ವಾಗತಿಸಿ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮತ್ತು ಆಡಳಿತ ಮಂಡಳಿಯ ಕಾರ್ಯಕಲಾಪಗಳನ್ನು ಗ್ರಾಹಕರಿಗೆ ಮತ್ತು ಹಿತೈಷಿಗಳಿಗೆ ತಿಳಿಸಿದರು.
ಶಾಖೆಯ ಉಪ ಪ್ರಬಂಧಕಿ ಜಯಲಕ್ಷ್ಮಿ ತೋನ್ಸೆ ಸೈಬರ್ ಕ್ರೈಂ ನ ಬಗ್ಗೆ ಮಾಹಿತಿ ಗ್ರಾಹಕರಿಗೆ ನೀಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪ ಪ್ರಬಂಧಕಿ ಜಯಲಕ್ಷ್ಮಿ ತೋನ್ಸೆ. ಅಧಿಕಾರಿಗಳಾದ ಹರಿಣಿ ಎಸ್ ಮಲ್ಪೆ.
ಧೀರಜ್ ಕುಮಾರ್, ಸಿಬ್ಬಂದಿಗಳಾದ ಅವಿನಾಶ್ ಪೂಜಾರಿ, ಯೋಜನ ಪುತ್ರನ್, ಶೇಯಾ ಪೂಜಾರಿ ಹಾಗೂ ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಗೋಪಾಲ್ ಪೂಜಾರಿ. ಜಯ ಪೂಜಾರಿ. ಮತ್ತಿತರರು ಉಪಸ್ಥರಿದ್ದರು.

Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಜೀವಿಕ ವಿಜಯಓದ್ಭಾವ ಶೆಟ್ಟಿ ಗೆ ಶೇ 94 ಅಂಕ.

Mumbai News Desk

ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರದ ಸ್ವಂತ ಕಾರ್ಯಾಲಯ ಉದ್ಘಾಟನೆ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಅರವಿಂದ್ ಪದ್ಮಶಾಲಿ ಗೆ ಶೇ 96 ಅಂಕ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk

ಬಂಟರ ಸಂಘ ಮುಂಬಯಿಯ ಡೊಂಬಿವಲಿ ಪ್ರಾದೇಶಿಕ ಸಮೀತಿಯ ಮಹಿಳಾ ವಿಭಾಗದ ವತಿಯಿಂದ ಅರಷಿಣ ಕುಂಕುಮ ಹಾಗೂ ಆರೋಗ್ಯಕುರಿತು ವಿಚಾರ ಸಂಕಿರಣ.

Mumbai News Desk

ಮಲಾಡ್ ಪೂರ್ವ  ಶನಿ ಮಂದಿರದ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ,

Mumbai News Desk