
ಮಹಾನಗರದ ಪ್ರತಿಷ್ಠಿತ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ಶ್ರೀಕೃಷ್ಣ ವಿಠಲ ಪ್ರತಿಷ್ಠಾನವು ಕಳೆದ 27 ವರ್ಷಗಳಿಂದ ಅನೇಕ ರೀತಿಯ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಾಮಾಜಿಕ ಸೇವಾ ಕಾರ್ಯಗಳನ್ನು ಧರ್ಮ ಸಮೃದ್ದಿ, ಸಂಸ್ಕೃತಿ ಸಮೃದ್ಧಿ, ಶಿಕ್ಷಣ ಸಮೃದ್ದಿ,ಆರೋಗ್ಯ ಸಮೃದ್ಧಿ ಎಂಬ ನಾಲ್ಕು ಮುಖ್ಯ ಯೋಜನೆಗಳ ಅಂಗವಾಗಿ ನಡೆಸಿಕೊಂಡು ಸಂಸ್ಥಾಪಕರು,ಅಧ್ಯಕ್ಷರೂ ಆದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ಹಾಗೂ ವಿಶ್ವಸ್ಥರ ,ಕಾರ್ಯಕಾರಿ ಮಂಡಳಿ ಸದಸ್ಯರ,ಮಹಿಳಾ ವಿಭಾಗದ ಸದಸ್ಯೆಯರ ನಿರಂತರ ಸೇವಕಾರ್ಯಗಳು ಜನ ಮಾನಸದಲ್ಲಿ ಗೌರವ ಪೂರ್ಣ ವಾಗಿ ಭದ್ರವಾಗಿ ನೆಲೆಸಿದೆ.
ಇತ್ತೀಚೆಗೆ ಶ್ರಾವಣ ಮಾಸದಲ್ಲಿ ಮೂರು ದಿನಗಳ ಹರಿಕಥಾ ಸಂಕೀರ್ತನೆಯನ್ನು ಸಂಸ್ಥೆಯು ಕೈರ ಬೆಟ್ಟು ವಿಶ್ವನಾಥ ಭಟ್ ಅವರ ಸಿರಿಕಂಠದಲ್ಲಿ ಯಶಸ್ವಿಯಾಗಿ ನಡೆಸಿ ಹರಿಕಥಾ ಅಭಿಮಾನಿಗಳನ್ನು ಭಕ್ತಬಂಧುಗಳ ಹೃದಯವನ್ನು ತಟ್ಟುವಂತೆ ಮಾಡಿ ಭಕ್ತಿಸಾಗರದಲ್ಲಿ ತೇಲುವಂತೆ ಮಾಡಿದೆ.
ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ಸಪ್ಟೆಂಬರ್ 1 ಆದಿತ್ಯವಾರ ಅಪರಾಹ್ನ 4 ರಿಂದ ರಾತ್ರಿ 8 ರ ವರೆಗೆ ಸಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ವಿವಿಧ ಸಾಂಸ್ಕೃತಿಕ ವೈಭವಗಳೊಂದಿಗೆ ಹಳದಿ ಕುಂಕುಮ ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮೀ ಕೋಟ್ಯಾನ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಪರಾಹ್ನ 4 ರಿಂದ 5:30 ವರೆಗೆ ಭಜನೆ ,ವಿವಿಧ ನೃತ್ಯ ವಿನೋದ,ಕಿರು ನಾಟಕ ,ಪ್ರಹಸನ,ಭಕ್ತಿ ಗೀತೆ, ಭಾವಗೀತೆ ನಡೆದು ನಂತರ ಹಳದಿ ಕುಂಕುಮ ವಿತರಣೆ,ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.
ಧಾರ್ಮಿಕ ಸಭೆಯಲ್ಲಿ ಅತಿಥಿಗಳಾಗಿ ಬಿಎಸ್ ಕೆ ಬಿ ಗೋಕುಲದ ಅಧ್ಯಕ್ಷರಾದ ಡಾ.ಸುರೇಶ್ ರಾವ್ ಅವರ ಧರ್ಮಪತ್ನಿ ವಿಜಯಾ ಎಸ್ ರಾವ್,ಪೇಜಾವರ ಮಠದ ಪ್ರಬಂಧಕರಾದ ರಾಮದಾಸ ಉಪಾಧ್ಯಾಯರ ಧರ್ಮಪತ್ನಿ ವಾಣಿಶ್ರೀ ಆರ್ ಉಪಾಧ್ಯಾಯ ,ಬಿಲ್ಲವರ ಅಸೋಸಿಯೇಶ ನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್ ಅವರ ಧರ್ಮಪತ್ನಿ ಮೊಮಿತಾ ಹೆಚ್ ಅಮೀನ್,ಯನ್,ಟಿ ಪೂಜಾರಿ ಯವರ ಧರ್ಮಪತ್ನಿ ಯಶೋದಾ ಯನ್ ಪೂಜಾರಿ, ಮೋಹಿನಿ ಪೂಜಾರಿ, ರತ್ನ ಪ್ರಭಾಕರ್ ಶೆಟ್ಟಿ, ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಅಧ್ಯಕ್ಷರಾದ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ಧರ್ಮಪತ್ನಿ, ಸಂಸ್ಥೆಯ ವಿಶ್ವಸ್ಥೆಯು ಆದ ಸುಮಾ ವಿ ಭಟ್ , ಉಷಾ ಆರ್ ಕೋಟ್ಯಾನ್ , ಮೃದುಲ ಎ ಕೊಟ್ಯಾನ್, ಉಷಾ ಶ್ಯಾಮ್ ಸಾಲಿಯಾನ್, ಪೂರ್ಣಿಮಾ ವಿಶ್ವನಾಥ್ ಶೆಟ್ಟಿ, ಲೀಲಾ ಎಂ ಪೂಜಾರಿ ಅವರು ಆಗಮಿಸಲಿದ್ದಾರೆ,
ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸುಧಾ ಕುಂದರ್ ಅವರಿಗೆ ಗೌರವ ಸನ್ಮಾನವು ನಡೆಯಲಿದ್ದು ಸಭೆಯ ನಂತರ ಪ್ರೀತಿ ಭೋಜನವು ನಡೆಯಲಿದೆ,
ಶ್ರಿ ಕೃಷ್ಣ ವಿಠಲ ಪ್ರತಿಷ್ಠಾನದ ಮಹಿಳಾ ವಿಭಾಗದ ಈ ಶ್ರಾವಣಮಾಸದ, ಈ ಉತ್ತಮ ಸತ್ಕಾರ್ಯಕ್ಕೆ ಮುಂಬೈ ತುಳು ಕನ್ನಡಿಗ ಬಂಧುಗಳು, ಸಂಸ್ಥೆಯ ಎಲ್ಲ ಸದಸ್ಯರು, ಸಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮ ವನ್ನು ಯಶಸ್ಸು ಗೊಳಿಸಬೇಕಾಗಿ ಸಂಸ್ಥೆಯ ಅಧ್ಯಕ್ಷರಾದ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್,ಪ್ರಧಾನ ಕಾರ್ಯದರ್ಶಿ ಸುಶೀಲಾ ದೇವಾಡಿಗ,ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಲಕ್ಷ್ಮೀ ಕೋಟ್ಯಾನ್ ಅವರು ವಿನಂತಿಸಿ ಕೊಂಡಿದ್ದಾರೆ.