
ಬಿಲ್ಲವರ ಅಸೋಸಿಯೇಶನ್ , ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಛೇರಿಯ ಸಭಾಗೃಹದಲ್ಲಿ 170 ನೇ ಗುರು ಜಯಂತಿ ಪೂಜೆಯನ್ನು ರವಿವಾರ ದಿನಾಂಕ 25/08/2024 ರಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಪುರೋಹಿತರಾದ ಐತಪ್ಪ ಸುವರ್ಣ, ಚಂದ್ರಪಾಲ್ ಪೂಜಾರಿ, ಜಗದೀಶ್ ಕೋಟಿಯನ್, ಪುರುಶೋತ್ತಮ ಪೂಜಾರಿ ಹಾಗೂ ಇತರ ಕಾರ್ಯಕರ್ತರ ಸಹಕಾರದಿಂದ ಗುರುಮಂಟಪವನ್ನು ಅಲಂಕರಿಸಿ ಪೂಜ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಿಗ್ಗೆ 9 ಗಂಟೆಗೆ ಕಲಶ ಪ್ರತಿಷ್ಟೆಯ ನಂತರ ಗುರು ಭಕ್ತರಿಂದ 12.30 ರ ತನಕ ವಿಶೇಷ ಭಜನಾ ಕಾರ್ಯಕ್ರಮವು ಜರುಗಿತು. ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗು ಅನ್ನ ಸಂತರ್ಪಣೆ ನೆಡೆಯಿತು.
ಡೊಂಬಿವಿಲಿ ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ರವರು ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಕಳೆದ 35 ವರ್ಷಗಳಿಂದ ನಿರಂತರ ಅರ್ಚಕರಾಗಿ ನಿಶ್ವಾರ್ಥ ಸೇವೆ ಸಲ್ಲಿಸುತ್ತಿರುವ ಸ್ಥಾಪಕ ಸದಸ್ಯೆರಾದ ಶ್ರೀಯುತ ಐತಪ್ಪ ಸುವರ್ಣ ರವರಿಗೆ ಭಕ್ತಾಭಿಗಳ ಸಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯೆರಾದ ಶ್ರೀ ಜಗದೀಶ್ ಜೆ.ಕೋಟಿಯನ್ ಭಕ್ತರ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮೀನ್, ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಹರೀಶ್ ಸಾಲಿಯಾನ್, ಜೊತೆ ಕಾರ್ಯದರ್ಶಿಗಳಾದ ರವಿ ಯಸ್ ಸನಿಲ್, ಭಾರತ್ ಬ್ಯಾಂಕ್ ನ ಮಾಜಿ ನಿರ್ದೇಶಕರಾದ ಶ್ರೀ ಪೂರುಷೋತ್ತಮ್ ಕೋಟಿಯನ್, ಧಾರ್ಮಿಕ ಉಪ ಸಮಿತಿಯ ಸದಸ್ಯರಾದ ಶ್ರೀ ಮೋಹನ್ ಪೂಜಾರಿ ಹಾಗು ಇತರ ಪದಾಧಿಕಾರಿಗಳು, ಇತರ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ದಾನಿಗಳು, ಡೊಂಬಿವಲಿ ಪರಿಸರದ ಹಲವು ಸಂಘ ಸಂಸ್ಥೆ ಗಳ ಪಧಾಧಿಕಾರಿಗಳು, ಪ್ರತಿನಿಧಿಗಳು , ಭಾರತ್ ಬ್ಯಾಂಕ್ ನ ಅಧಿಕಾರಿಗಳು, ಹಿತೈಸಿ ಗಳು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿದರು. ಸುಮಾರು 300 ಕು ಹೆಚ್ಚು ಗುರು ಭಕ್ತರು ಗುರು ಪೂಜೆ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಪಡೆದು ಪುನೀತರಾದರು

ಅನ್ನಸಂತರ್ಪಣೆ ಸೇವೆಗೆ ದಾನಿಗಳಾದ ಶ್ರೀ ರಾಮಚಂದ್ರ ಬಂಗೇರ , ಶ್ರೀಮತಿ ಗಿರಿಜಾ ಸಂಜೀವ ಪಾಲನ್, ಶ್ರೀಮತಿ ಕುಶ ರವಿ ಸನಿಲ್ , ಶ್ರೀಮತಿ ಮತ್ತು ಶ್ರೀಮತಿ ಮತ್ತು ಶ್ರೀ ಸತೀಶ್ ಕೋಟ್ಯಾನ್ (ಮಮತಾ ಡೆಂಟಲ್ ಲ್ಯಾಬ್), ಟಿ.ಕೆ.ಕೋಟಿಯನ್ (ಮಂಜುನಾಥ್ ಕ್ಯಾಟರ್ರ್ಸ್) , ನವೀನ್ ಅಂಚನ್ , ರಾಜು ಪೂಜಾರಿ , ದೇವೇಂದ್ರ ಬಂಗೇರ, ರಮೇಶ್ ಜಿ.ಸುವರ್ಣ, ರವಿ ಪೂಜಾರಿ (ಹೋಟೆಲ್ ವರ್ಷ), ನಿತ್ಯಾನಂದ್ ಜತನ್ ಹಾಗು ಅನೇಕ ಭಕ್ತರು ದೇಣಿಗೆ , ಎಣ್ಣೆ, ಹೂ, ಹಣ್ಣು ಕಾಯಿ ಇತ್ಯಾದಿ ನೀಡಿ ಸಹಕರಿಸಿದರು.
ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಶ್ರೀ ದೇವರಾಜ್ ಪೂಜಾರಿ, ಕಾರ್ಯಾಧ್ಯಕ್ಷ ಚಂದ್ರಹಾಸ್ ಎಸ್ ಪಾಲನ್, ಉಪ ಕಾರ್ಯಾಧ್ಯಕ್ಷರುಗಳಾದ ಶ್ರೀಧರ್ ಅಮೀನ್ , ಪುರಂದರ ಪೂಜಾರಿ, ಗೌರವ ಕಾರ್ಯದರ್ಶಿ ಸಚಿನ್ ಜಿ.ಪೂಜಾರಿ, ಸಹ ಕಾರ್ಯದರ್ಶಿ ಕೃಷ್ಣ ಪೂಜಾರಿ, ಗೌರವ ಕೋಶಾಧಿಕಾರಿ ಆನಂದ್ ಪೂಜಾರಿ ,ಸಹ ಕೋಶಾಧಿಕಾರಿ ಶ್ರೀಜಗನಾಥ್ ಸನಿಲ್ , ಶ್ರೀ ಮಂಜಪ್ಪ ಪೂಜಾರಿ, ಶ್ರೀ ದೇವದಾಸ್ ಗುಜರಾನ್, ಶ್ರೀ ಈಶ್ವರ್ ಕೋಟಿಯನ್ , ಶ್ರೀ ಸೋಮನಾಥ್ ಈ. ಪೂಜಾರಿ, ಶ್ರೀ ಜಗದೀಶ್ ಕೋಟಿಯನ್ , ಶ್ರೀ ಅನ್ನು ಪೂಜಾರಿ, ವಿಠ್ಠಲ್ ಅಮೀನ್ ಹಾಗೂ ಸಮಿತಿ ಸದಸ್ಯರು, ಮತ್ತು ಸಕ್ರಿಯ ಕಾರ್ಯಕರ್ತರು, ಯುವ ಸದಸ್ಯರು ಹಾಗೂ ಮಹಿಳಾ ವಿಭಾಗದವರು ಶ್ರಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಗುರು ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಪ್ರೊತ್ಸಾಹ ನೀಡಿ ಸಹಕರಿಸಿದರು.