September 6, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ ವಸಾಯಿ ದಹಾಣ ಪ್ರಾದೇಶಿಕ ಸಮಿತಿ ಯಿಂದ.ಸಮಾಜದ ಅರ್ಥಿಕವಾಗಿ ಹಿಂದುಳಿದ ಪರಿವಾರ ಮತ್ತು ವಿದ್ಯಾರ್ಥಿಗಳೀಗೆ 2025-26 ಸಾಲಿನ ಆರ್ಥಿಕ ಸಹಾಯ ವಿತರಣೆ.





  ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿದಗ ಪರಿವಾರಕ್ಕೆ ಆಧಾರವಾಗುತ್ತದೆ  : ಪ್ರವೀಣ್ ಭೋಜ ಶೆಟ್ಟಿ

ವಸಯಿ ಜೂ.14.  ಬಂಟರ ಸಂಘ ಮುಂಬಯಿಯ  ಸಮಾಜ ಕಲ್ಯಾಣ, ಸಮಿತಿಯ ಆಶ್ರಯದಲ್ಲಿ ಬಂಟ ಸಮಾಜದ ಅರ್ಥಿಕವಾಗಿ ಹಿಂದುಳಿದ ಪರಿವಾರ ಮತ್ತು ವಿದ್ಯಾರ್ಥಿಗಳೀಗೆ 2025-26 ಸಾಲಿನ ಆರ್ಥಿಕ ಸಹಾಯ ವಿತರಣೆ. ಬಂಟರ ಸಂಘ ಮುಂಬಯಿಯ,ವಸಾಯಿ ದಹಾಣ ಪ್ರಾದೇಶಿಕ ಸಮಿತಿ.ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯು   ಜೂ 08.ರವಿವಾರ ದಂದು ನಾಲಸೋಪಾರ ಪಶ್ಚಿಮದ ಹೋಟೇಲ್ ಗ್ಯಾಲಕ್ಷಿ  ಸಭಾಂಗಣದಲ್ಲಿ ಬಂಟರ ಸಂಘದ ಅಧ್ಯಕ್ಷರಾದ  ಪ್ರವೀಣ ಬೋಜ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

   ಬಳಿಕ ಮಾತನಾಡಿದ ಪ್ರವೀಣ್ ಬೋಜ ಶೆಟ್ಟಿ ಸಮಾಜ ಬಾಂಧವರಿಗೆಯಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದು ಬೊರಿವಳಿ ಬಹುಕೋಟಿ ವೆಚ್ಚದ ವಿದ್ಯಾ ದೇಗುಲ ಪ್ರಾರಂಭಗೊಂಡಿ ದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಸಂಘದ ಕುರ್ಲಾ ದಲ್ಲಿರುವ  ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ರೀತಿಯ ಉನ್ನತ ಶಿಕ್ಷಣ ಪಡೆಯುವ ಸೌಲಭ್ಯ ಕಲಿಕೆ ಅದನ್ನು ಸಮಾಜ ಬಾಂಧವರು ಪಡೆಯುಬೇಕು. ಈ ಪ್ರಾದೇಶಿಕ ಸಮಿತಿಯಿಂದ ನೀಡಿರುವ ಎಲ್ಲಾ ಅರ್ಜಿಗಳಿಗೆ  ಸ್ಪಂದಿಸಿದ್ದೇವೆ. ಉನ್ನತ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಉದ್ಯೋಗವನ್ನು ಪಡೆದು ಪರಿವಾರಕ್ಕೆ ಆಧಾರವಾಗುತ್ತಾರೆ ಎಂದು ನುಡಿದರು .

ವೇದಿಕೆಯ ಗಣ್ಯರನ್ನು, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ  ಮಂಜುನಾಥ ಎನ್ ಶೆಟ್ಟಿ, ಕೊಡ್ಲಾಡಿ, ಸ್ವಾಗತಿಸಿದರು.

ಪ್ರಾಸ್ತಾವಿಕ ಮಾತುಗಳನ್ನು ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಮತ್ತು ವಿದ್ಯಾ ಸಮಿತಿಯ ಕಾರ್ಯಾಧ್ಯಕ್ಷೆಯಾದ  ಜಯಾ ಅಶೋಕ್ ಶೆಟ್ಟಿ ಇವರು ಮಾಡಿದರು.

 ,   ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ .    ಕೋಶಾಧಿಕಾರಿ ಸಿ ಎ ರಮೇಶ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ  ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ  ಶಶಿಧರ ಕೆ ಶೆಟ್ಟಿ, ಇನ್ನಂಜೆ,   , ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷರಾದ  ಇಂದ್ರಾಳಿ ದಿವಾಕರ್ ಶೆಟ್ಟಿ . ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಸಿ. ಎಸ್. ಉತ್ತಮ್ ಶೆಟ್ಟಿ ,ಪ್ರಾದೇಶಿಕ ಸಮಿತಿಯ

ಉಪಾ ಕಾರ್ಯಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ  ಕಣಂಜಾರ್, ಕಾರ್ಯದರ್ಶಿ  ಜಗನ್ನಾಥ ಡಿ.ಶೆಟ್ಟಿ, ಪಳ್ಳಿ, ಕೋಶಾಧಿಕಾರಿ  ವಿಜಯ ಎಮ್ ಶೆಟ್ಟಿ, ಜೊತೆ ಕಾರ್ಯದರ್ಶಿ  ನಾರಾಯಣ ಎಮ್. ಶೆಟ್ಟಿ, ಜೊತೆ ಕೋಶಾಧಿಕಾರಿ  ರತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ  ಉಮಾ ಸತೀಶ್ ಶೆಟ್ಟಿ

 ಸಲಹೆಯ ಸಮಿತಿಯ ಕಾರ್ಯಾಧ್ಯಕ್ಷರಾದ  ಹರೀಶ್ ಪಿ. ಶೆಟ್ಟಿ ಗುರ್ಮೆ, ಯುವ-ವಿಭಾಗದ ಕಾರ್ಯಧ್ಯಕ್ಷೆ  ವರ್ಷಾ ಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಹಿರಿಯ ಹೋಟೆಲ್ ಉದ್ಯಮಿಗಳಾದ ಮೋಹನ್ ಬಿ ಶೆಟ್ಟಿ. ವಾಸು ಶೆಟ್ಟಿ ವೀರಾರ್. ಹಾಗೂ ವೈವಾಹಿಕ ಜೀವನದ ಐವತ್ತು ವರ್ಷದ ಸಂಭ್ರಮವನ್ನು ಆಚರಿಸಿಕೊಂಡ ಪಾಂಡು ಎಲ್ ಶೆಟ್ಟಿ  ಅವರನ್ನು ಗೌರವಿಸಲಾಯಿತು.

  ಸಭಾ ಕಾರ್ಯಕ್ರಮವನ್ನು  ಕಾರ್ಯಕ್ರಮ ಸಮಿತಿಯ  ಕಾರ್ಯಾಧ್ಯಕ್ಷರಾದ, ವಿಜಯ್ ಪಿ.ಶೆಟ್ಟಿ, ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ  ಕಣಂಜಾರ್ ನಿರೂಪಿಸಿದರು.ಕಾರ್ಯದರ್ಶಿ  ಜಗನ್ನಾಥ ಡಿ.ಶೆಟ್ಟಿ, ಪಳ್ಳಿ ಧನ್ಯವಾದ ನೀಡಿದರು.

———-

  ಕಾರ್ಯಕ್ರಮದ ಯಶಸ್ವಿಗೆ   ಸದಸ್ಯತನ  ನೊಂದಣಿಕೆ ಸಮಿತಿಯ ಕಾರ್ಯಾಧ್ಯಕ್ಷ, ನವೀನ್ ಶೆಟ್ಟಿ, ಪಳ್ಳಿ, ವೈದ್ಯಕೀಯ ಹಾಗು ಆರೋಗ್ಯ ಸಮಿತಿ ಕಾರ್ಯಧ್ಯಕ್ಷ  ಸತೀಶ್ ಎ. ಶೆಟ್ಟಿ, ಅಡ್ವೆ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ, ವಿವಾಹ ಸಮಿತಿಯ ಕಾರ್ಯಧ್ಯಕ್ಷ ತಾರಾನಾಥ್ ವಿ.ಶೆಟ್ಟಿ, ಐಟಿ ಸುಮಿತಿಯ ಕಾರ್ಯ ಅಧ್ಯಕ್ಷ ರಿತೇಶ್ ಶೆಟ್ಟಿ, ಕ್ಯಾಟರಿಂಗ್ ಸಮಿತಿಯ ಕಾರ್ಯಧ್ಯಕ್ಷ ದಯಾನಂದ ಶೆಟ್ಟಿ, ಡೆಕೋರೇಷನ್  ಸಮಿತಿ ಕಾರ್ಯ ಧ್ಯಕ್ಷ ಶುಭಾಶ್ ಶೆಟ್ಟಿ ಎರ್ಮಾಲ್, ಮತ್ತು ವಿವಿಧ ಉಪ ಸಮಿತಿಯ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು

12ನೇ ತರಗತಿಯ ನಂತರ ಉದ್ಯೋಗ ಮತ್ತು ಮುಂದಿನ ಶಿಕ್ಷಣದ ಬಗ್ಗೆ ಮಾಹಿತಿ ನೀಡಲು ಸಂಜೀವಿನಿ ಟ್ರಸ್ಟಿನ ಮೂಲಕ ಸಹಕಾರ: ಡಾ. ಆರ್. ಕೆ. ಶೆಟ್ಟಿ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಂಟರ ಸಂಘದ ಮುಂಬಯಿಯ ಕಾರ್ಯದರ್ಶಿ  ಡಾ. ಆರ್. ಕೆ. ಶೆಟ್ಟಿಯವರು ಮಾತನಾಡುತ್ತಾ ಬಂಟರ ಸಂಘ ಸಮಾಜದ ಆರ್ಥಿಕವಾಗಿ ಹಿಂದುಳಿದ ಬಾಂಧವರಿಗೆ ಸಹಕಾರ ನೀಡುತ್ತಾ ಬಂದಿದೆ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಹಲವು ಸೌಲಭ್ಯಗಳನ್ನು  ನೀಡುತ್ತಾ ಬಂದಿದೆ 12ನೇ ತರಗತಿಯ ಬಳಿಕ ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ಪಡೆಯಬೇಕು. ಉದ್ಯೋಗ ಮಾಡಲು ಯಾವ ರೀತಿಯ ಮಾರ್ಗದರ್ಶನ ಬೇಕು ಎನ್ನುವ ಬಗ್ಗೆ ಅರಿವಿರುವುದಿಲ್ಲ ಅದಕ್ಕಾಗಿ ಕೇಂದ್ರ ಸರಕಾರ ಮತ್ತು ಟಾಟಾ ಸಂಸ್ಥೆ ಮಾರ್ಗದರ್ಶನ ನೀಡುವುದಕ್ಕಾಗಿ ಸಹಕಾರಿ ಆಗುತ್ತಿದೆ ಅದರ ಬಗ್ಗೆ ಮಹತ್ವವಾದ ಮಾಹಿತಿಯನ್ನು ನಾನು ಪಡೆದುಕೊಂಡಿದ್ದೇನೆ. ವಿದ್ಯಾರ್ಥಿಗಳಿಗೆ ಇದರ ಸಂಪೂರ್ಣ ಮಾಹಿತಿ ಯನ್ನು ನಾನು ಸಾಪಿಸಿರುವ ಸಂಜೀವಿನಿ ಟ್ರಸ್ಟ್ ನ ನೀಡಲು ಸಹಕಾರ ಮಾಡುತ್ತೇನೆ. ಎಲ್ಲಾ ಪ್ರಾದೇಶಿಕ ಸಮಿತಿಯ ಮೂಲಕ ಕಾರ್ಯಾಧ್ಯಕ್ಷರನ್ನು ಸಂಪರ್ಕಿಸಿ ಎಂದು ತಿಳಿಸಿದರು 

—–

Show quoted text



Related posts

ಕಾಂದಿವಲಿ ಕನ್ನಡ ಸಂಘದಿಂದ ನವದೇವಿ ಮಂದಿರಗಳ ದರ್ಶನ: ಮಹಿಳಾ ವಿಭಾಗದ ಪವಿತ್ರ ಯಾತ್ರೆ

Mumbai News Desk

ಬಂಟರ ಸಂಘ ಮುಂಬಯಿ – ಜೋಗೇಶ್ವರಿ-ದಹಿಸರ್ ಸಮಿತಿ ಆಶ್ರಯದಲ್ಲಿ “ಭೀಷ್ಮ ಸೇನಾಧಿಪತ್ಯ – ಕರ್ಮಬಂಧ” ಯಕ್ಷಗಾನ ತಾಳಮದ್ದಳೆ

Mumbai News Desk

ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಭಜನೆ – ಕುಣಿತ ಭಜನ ಸ್ಪರ್ಧೆ

Mumbai News Desk

ನವಿ ಮುಂಬೈ ಪಾಲಿಕೆ ಚುನಾವಣೆ: ಸಾನ್ಪಾಡ ವಾರ್ಡ್ 19ರಲ್ಲಿ ನಗರಸೇವಕಿಯಾಗಿ ಶೈಲಾ ಜೆ. ಪಾಟೀಲ್ ಕುಲಾಲ್

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ; ಆಷಾಢ ಹಬ್ಬ ಆಚರಣೆ,

Mumbai News Desk