ನಾಲಾಸೋಪಾರ ಅ30.ಬಿಲ್ಲವರ ಎಸೋಸಿಯೇಶನ್, ಮುಂಬಯಿ ನಾಲಾಸೋಪಾರ – ವಿರಾರ್ ಸ್ಥಳೀಯ ಕಚೇರಿಯಲ್ಲಿ
170ನೇ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆ ಸೆ 1ನೇ ರವಿವಾರ ರಿಜೆನ್ಸಿ ಬ್ಯಾಂಕ್ವೆಟ್ ಹಾಲ್, ಅಗ್ನಿಶಾಮಕ ದಳ ಕಾರ್ಯಾಲಯದ ಎದರುಗಡೆ, ಅಗರ್ ವಾಲ ಚೌಕ್, ವಸಾಯಿ-ನಾಲಾಸೋಪಾರ ಲಿಂಕ್ ರೋಡ್, ನಾಲಾಸೋಪಾರ (ಪೂರ್ವ) ಇಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಗೊಳ್ಳಲಿದೆ.
ಕಾರ್ಯಕ್ರಮವನ್ನು. ಅಸೋಸಿಯೇಷನ್ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ,
ಬೆಳಿಗ್ಗೆ 8.00 ರಿಂದ 9.00ರ ವರೆಗೆ ಜಪಯಜ್ಞ ಪ್ರಾರಂಭ “ಓಂ ನಮೋ ನಾರಾಯಣಾಯ ನಮಃ ಶಿವಾಯ”
ಬೆಳಿಗ್ಗೆ 9.00 ರಿಂದ 12.00ರ ವರೆಗೆ : ಭಜನೆ ಮಧ್ಯಾಹ್ನ 12.00 ರಿಂದ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ .ಅಂದಿನ ಪೂಜಾ ವಿಧಿವಿಧಾನಗಳನ್ನು ಪುರೋಹಿತ ಹರೀಶ್ ಭಟ್ ರವರು ನೆರವೇರಿಸಲಿರುವರು.
ಈ ಕಾರ್ಯಕ್ರಮದಲ್ಲಿ ಗುರುಭಕ್ತರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಅಸೋಸಿಯೇಷನ್ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಗೌರವಕೋಶಧಿಕಾರಿ ರಾಜೇಶ್ ಜೆ. ಬಂಗೇರ . – ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ ಕೋಟ್ಯಾನ್. ಮತ್ತಿತರ ಪದಾಧಿಕಾರಿಗಳು ಹಾಗೂನಾಲಾಸೋಪಾರ – ವಿರಾರ್ ಸ್ಥಳೀಯ ಕಚೇರಿಯ ಪರವಾಗಿ, ಗೌರವ ಕಾರ್ಯ ಧ್ಯಕ್ಷ ಶ್ರೀಧರ್ ಪೂಜಾರಿ . ಕಾರ್ಯಾಧ್ಯಕ್ಷ ಗಣೇಶ್ ವಿ ಸುವರ್ಣ. ಗೌರವ ಕಾರ್ಯದರ್ಶಿ ಉಮೇಶ್ ಕೆ. ಕೊಟ್ಯಾನ್ .
ಗೌರವ ಕೋಶ ಧಿಕಾರಿ ನಳಿನಿ ಎಸ್, ಪೂಜಾರಿ. ಮತ್ತಿತರ ಪದಾಧಿಕಾರಿಗಳು ಸದಸ್ಯರು ವಿನಂತಿಸಿಕೊಂಡಿದ್ದಾರೆ.