
ಭಗವಂತನಿಗೆ ಪ್ರಿಯವಾಗಿರುವ ಸೇವೆಯನ್ನು ಮಾಡಿದಾಗ ಬದುಕು ಸಾರ್ಥಕ – ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್
ಚಿತ್ರ ವರದಿ : ದಿನೇಶ್ ಕುಲಾಲ್
ಮಹಾನಗರದ ಪ್ರತಿಷ್ಠಿತ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಮಹಿಳಾ ವಿಭಾಗದ ವತಿಯಿಂದ ಸಪ್ಟೆಂಬರ್ 1 ರಂದು,ಆದಿತ್ಯವಾರ, ಅಪರಾಹ್ನ ದಿಂದ ರಾತ್ರಿ ವರೆಗೆ ಸಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ವಿವಿಧ ಸಾಂಸ್ಕೃತಿಕ ವೈಭವ ಗಳೊಂದಿಗೆ ಹಳದಿ ಕುಂಕುಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರಾಗಿರುವ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರ ಮಾರ್ಗದರ್ಶನದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮೀ ಕೋಟ್ಯಾನ್ ಮತ್ತು ಮಹಿಳಾ ಸದಸ್ಯರು, ಸಂಸ್ಥೆಯ ಟ್ರಸ್ಟಿಗಳಾದ ಕಳತ್ತೂರು ವಿಶ್ವನಾಥ್ ಶೆಟ್ಟಿ, ಸುಮಾ ವಿಶ್ವನಾಥ್ ಭಟ್, ಕಾರ್ಯದರ್ಶಿಗಳಾದ ಶ್ಯಾಮಸುಂದರ್ ಸಾಲಿಯಾನ್, ನವೀನ್ ಪಡು ಇನ್ನ, ದಿನೇಶ್ ಕರ್ಕೇರ, ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿಗಳಾದ ಶ್ಯಾಮಲಾ ಎ. ಶಾಸ್ತ್ರಿ, ಸುಚಿತಾ ಶೆಟ್ಟಿ, ಹಿರಿಯರಾದ ಜಗನ್ನಾಥ ಪುತ್ರನ್ ಮತ್ತಿತರರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಚಾಲನೆಗೊಂಡಿತು. ಅಪರಾಹ್ನ ಭಜನೆ ,ವಿವಿಧ ನೃತ್ಯ, ವಿನೋದ,ಕಿರು ನಾಟಕ ,ಪ್ರಹಸನ,ಭಕ್ತಿ ಗೀತೆ, ಭಾವಗೀತೆ ನಡೆದು ನಂತರ ಪಾಲ್ಗೊಂಡಿದ್ದ ಮಹಿಳೆಯರು ಹಳದಿ ಕುಂಕುಮವನ್ನು ವಿನಿಯೋಗಿಸಿಕೊಂಡರು.

ಸಂಜೆ ಧಾರ್ಮಿಕ ಸಭೆ ವಿಶ್ವನಾಥ್ ಭಟ್ ಅವರ ಅಧ್ಯಕ್ಷತೆಯಲ್ಲಿ ಅತಿಥಿಗಳಾದ , ರತ್ನ ಪ್ರಭಾಕರ್ ಶೆಟ್ಟಿ, ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ವಿಶ್ವಸ್ಥೆಯು ಆದ ಸುಮಾ ವಿ ಭಟ್ , ಉಷಾ ಆರ್ ಕೋಟ್ಯಾನ್ , ಮೃದುಲ ಎ ಕೋಟ್ಯಾನ್., ಉಷಾ ಶ್ಯಾಮ್ ಸಾಲಿಯಾನ್, ಇವರ ಉಪಸ್ಥಿತಿಯಲ್ಲಿ ನಡೆಯಿತು.
ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ಸುಧಾ ಕುಂದರ್ ಅವರಿಗೆ ಗೌರವ ಸನ್ಮಾನ ಮತ್ತು ಸುಮಾ ವಿಶ್ವನಾಥ್ ಭಟ್ ದಂಪತಿಗೆ ವಿಶೇಷವಾದ ಗೌರವ ನಡೆಯಿತು.
ಅತಿಥಿಯಾಗಿ ಉಪಸ್ಥಿರಿದ್ದ ಸಾಹಿತಿ ಶೈಲಜಾ ಹೆಗಡೆ ಮಾತನಾಡುತ್ತಾ ಈ ಸಂಸ್ಥೆಯ ಸಂಸ್ಥಾಪಕರಾದ ವಿಶ್ವನಾಥ್ ಭಟ್ ಅವರು ಧಾರ್ಮಿಕ ಸೇವೆಯೊಂದಿಗೆ ಸಾಮಾಜಿಕ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ . ಅವರು ಹರಿಕಥೆ ಮಾಡುವಾಗ ನಮ್ಮನ್ನು ಕೂಡ ಭಗವಂತನ ನಾಮಸ್ಮರಣೆಯಲ್ಲಿ ತಲ್ಲೀನರಗಿಸುತ್ತಾರೆ , ಹಳದಿ ಕುಂಕುಮಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರತೆಯಿದೆ.
ಅಂತ ಪಾವಿತ್ರತೆ ತುಂಬಿದ ಈ ಕಾರ್ಯಕ್ರಮ ಬಹಳಷ್ಟು ಅರ್ಥಪೂರ್ಣವಾಗಿ ಆಯೋಜಿಸಿಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಪ್ರತಿಷ್ಠಾನದ ಮೂಲಕ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯಲಿ ಎಂದು ನುಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಮೃದುಲ ಎಂ ಕೋಟ್ಯಾನ್ ಜೋಗೇಶ್ವರಿ ಮಾತನಾಡುತ್ತಾ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಸಾಮಾಜಿಕ ಧಾರ್ಮಿಕ ಸೇವೆಗಳನ್ನು ಮಾಡುತ್ತಾ ಹಿಂದೂ ಧರ್ಮವನ್ನು ಬಲಿಷ್ಠಗೊಳಿಸುತ್ತಿದೆ. ವಿಶ್ವನಾಥ್ ಭಟ್ ಅವರ ಸಂಸ್ಥೆಯ ಮೂಲಕ ಹರಿಕಥೆ,ಭಜನೆ ಮುಂತಾದ ಧಾರ್ಮಿಕ ಸೇವೆಗಳನ್ನು ಮಾಡಿ ಧರ್ಮ ಜಾಗೃತಿಯ ಸೇವೆಯನ್ನು ಮಾಡುತ್ತಾರೆ ಭಗವಂತನ ಅಪ್ಪಣೆ ಇಲ್ಲದೆ ಯಾವ ಕೆಲಸವು ಅಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅಧ್ಯಕ್ಷತೆ ಮಾತುಗಳನ್ನಾಡುತ್ತಾ ನಮ್ಮ ಬದುಕಿನಲ್ಲಿ ಧರ್ಮ ಆಚರಣೆಗಳು ಮಾಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಭಗವಂತನ ನಾಮಸ್ಮರಣೆ ಮಾಡುವಂತಹ ಭಜನೆ ಮಾಡಿದಾಗ ಜೀವನ ಪಾವನವಾಗುತ್ತದೆ. ಭಜನೆಯಲ್ಲಿ ಜ್ಞಾನವಿದೆ. ಭಗವಂತನನ್ನು ಸ್ಮರಿಸುವ ಸೇವೆ ಮಾಡಿದಾಗ ಜೀವನದ ಮೌಲ್ಯ ತಿಳಿಯುತ್ತದೆ. ಮಹಿಳಾ ವಿಭಾಗ ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರನ್ನು ಒಗ್ಗೂಡಿಸಿದೆ. ಪ್ರತಿಷ್ಠಾನ ವರ್ಷಪರ್ತಿ ನಡೆಸುವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡಾಗ ಸಂಸ್ಥೆಯ ಸೇವಾ ಕಾರ್ಯಗಳು ಜನಸಾಮಾನ್ಯರಿಗೆ ತಲುಪಲು ಸಾಧ್ಯ ಎಂದು ನುಡಿದರು.
,ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಲಕ್ಷ್ಮೀ ಕೋಟ್ಯಾನ್ ಸ್ವಾಗತಿಸಿ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ಮಹಿಳಾ ಸದಸ್ಯರಿಗೆ ಮತ್ತು ನಮ್ಮ ಸಂಸ್ಥೆಯ ಪದಾಧಿಕಾರಿಗಳಿಗೆ ಕೃತಜ್ಞತೆಗಳು. ಮಹಿಳಾ ವಿಭಾಗ ಇನ್ನಷ್ಟು ಅರ್ಥಪೂರ್ಣ ಧಾರ್ಮಿಕ ಸಾಮಾಜಿಕ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡಲಿದೆ ಎಂದು ನುಡಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸುಶೀಲಾ ದೇವಾಡಿಗ ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ ಹಳದಿ ಕುಂಕುಮ ಕಾರ್ಯಕ್ರಮ ನಡೆಯಿತು.ಪಾಲ್ಗೊಂಡ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.