23.5 C
Karnataka
April 4, 2025
ಸುದ್ದಿ

ಯಕ್ಷ ಪ್ರೇಮಿಗಳ, ಕಲಾಭಿಮಾನಿಗಳ ಮನ ಗೆದ್ದ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರ ಯಕ್ಷಗಾನ.



ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಸದಸ್ಯರಿಂದ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ವಿಶ್ವ ಪ್ರಸಿದ್ದ ಗಂಡುಕಲೆ ಎಂದೆನಿಸಿದ್ದ ಯಕ್ಷಗಾನ ಕಲೆಯು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುವುದಕ್ಕೆ ಇತ್ತೀಚೆಗೆ ನಡೆದ ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 15ನೇ ವಾರ್ಷಿಕೋತ್ಸವದ ಸಲುವಾಗಿ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವೇ ಸಾಕ್ಷಿಯಾಗಿದೆ. ಈ ಕಾರ್ಯಕ್ರಮವು ಮಲಾಡ್ ಪೂರ್ವದ ಶ್ರೀ ಸ್ವಾಮಿ ನಾರಾಯಣ ಮಂದಿರದ ಹವಾನಿಯಂತ್ರಿತ ಸಭಾಂಗಣದಲ್ಲಿ ಜರಗಿತು. ಸುಮಾರು ಒಂದೂವರೆ ಸಾವಿರಕ್ಕೂ ಮಿಕ್ಕಿ ಕಿಕ್ಕಿರಿದ ಜನಸ್ತೋಮದೊಂದಿಗೆ ಭರ್ಜರಿ ಪ್ರದರ್ಶನವನ್ನು ನೀಡಿತು. ಸಮಿತಿಯ ಈ ಕಾರ್ಯಕ್ರಮದ ಮುಂದಾಳತ್ವವನ್ನು ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಶೆಟ್ಟಿಯವರ ಮುತುವರ್ಜಿಯಿಂದ ಯಶಸ್ವಿಯಾಗಿ ಜರಗಿತು. ಈ ಸಂಪೂರ್ಣ ಯಕ್ಷಗಾನದಲ್ಲಿ ಕೇವಲ 8 ವರ್ಷದ ಮಕ್ಕಳಿಂದ ಹಿಡಿದು 65ರ ಹಿರಿಯರ ತನಕ ಭಾಗವಹಿಸಿದರು.ಯಕ್ಷಗುರು ಶ್ರೀ ನಾಗೇಶ್ ಪೊಳಲಿಯವರು ಸುಮಾರು 50 ಜನ ಸದಸ್ಯರಿಗೆ ಒಂದೂವರೆ ತಿಂಗಳ ತರಬೇತಿ ನೀಡಿ ಯಶಸ್ವೀ ಯಕ್ಷಗಾನ ಪ್ರದರ್ಶಿಸುವಲ್ಲಿ ಸಹಕರಿಸಿದರು. ಕನ್ನಡ ಓದುಬಾರದ ತುಳು ಕನ್ನಡಿಗರ ಮಕ್ಕಳು ಯಕ್ಷಗಾನದ ಸಂಭಾಷಣೆಯನ್ನು ಇಂಗ್ಲೀಷಿನಲ್ಲಿ ಬರೆದಕೊಂಡು ಕಲಿತು ನಿರರ್ಗಳವಾಗಿ ಕನ್ನಡದಲ್ಲೇ ಮಾತನಾಡಿ ಯಕ್ಷಗಾನ ಪ್ರದರ್ಶನವನ್ನು ನೀಡಿ ಸಭಿಕರ ಮನ ಗೆದ್ದರು.

ಯಕ್ಷಗಾನದ ಮೊದಲಿಗೆ ಆದಿಮಾಯೆಯಾಗಿ ಸುನಂದ ಬಂಗೇರ ರವರು ಪ್ರತ್ಯಕ್ಷವಾಗಿ ವರ ನೀಡಿ ಯಕ್ಷಗಾನಕ್ಕೆ ಚಾಲನೆ ನೀಡಿದರು. ಬ್ರಹ್ಮ ವಿಷ್ಣು ಮಹೇಶ್ವರನೇ ಪ್ರತ್ಯಕ್ಷವಾಗಿ ರಂಗಕ್ಕೆ ಆಗಮಿಸಿದಂತೆ ಭಾಸವಾಯಿತು. ಬ್ರಹ್ಮನಾಗಿ ದಿಶಾ ಕರ್ಕೇರ, ವಿಷ್ಷುವಾಗಿ ಶ್ವೇತಾ ಪೂಜಾರಿ ಹಾಗೂ ಮಹೇಶ್ವರನಾಗಿ ಹರ್ಷಿತಾ ಪೂಜಾರಿ ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದರು. ಮಧು- ಕೈತಭರಾಗಿ ಶ್ರೀಮತಿ ಆಚಾರ್ಯ ಹಾಗೂ ಭಾರತಿ ಆಚಾರ್ಯರವರು ಉತ್ತಮವಾಗಿ ನಟಿಸಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಸುಪರ್ಷಕನಾಗಿ ಪ್ರಥಮ್ ಪೂಜಾರಿ,ಶಂಕಾಸುರನಾಗಿ ನಿಧಿ ನಾಯಕ್, ಕಾಳಿಯಾಗಿ ನವೀನ್ ಕಲ್ಯಾಣ್,ಶುಂಭನಾಗಿ ಪವನ್ ರಾವ್, ಧೂಮರಕ್ಷನಾಗಿ ವಿದ್ಯಾ ಆಚಾರ್ಯರವರು ಸಮಿತಿಯ ಯುವ ವಿಭಾಗದ ಪ್ರಭುದ್ದ ಯಕ್ಷಗಾನ ಕಲಾವಿದರಾಗಿ ಮಿಂಚಿದರು. ಮಹಿಷಾಸುರನಾಗಿ ಸನತ್ ಪೂಜಾರಿಯವರು ಅದ್ಭುತವಾಗಿ ಅಟ್ಟಹಾಸ ಭರಿತ ಪ್ರದರ್ಶನ ನೀಡಿ ಈ ಸಲವೂ ತಮ್ಮ ಪ್ರತಿಭೆಯನ್ನು ತೋರಿಸಿದರು. ಮಹಿಷ ವಧೆಯ ದೇವಿಯಾಗಿ ಶಿವಾನಿ ಪ್ರಭು ಹಾಗೂ ಕೌಷಿಕಾ ದೇವಿಯಾಗಿ ಪ್ರಣೀತ ಶೆಟ್ಟಿಯವರು ಪ್ರತ್ಯಕ್ಷರಾಗಿ ಭಕ್ತಿಯಿಂದ ಪ್ರೇಕ್ಷಕರು ಕೈ ಮುಗಿಯುವಂತೆ ಮಾಡಿದರು

. ಅವರ ಭಕ್ತಿಪೂರ್ವಕ ಅಭಿನಯ ಅಮೋಘ ವಾಗಿತ್ತು. ಸಭಾಂಗಣದಲ್ಲಿ ಕುಳಿತಿದ್ದ ಪ್ರೇಕ್ಷಕರು ಆಶ್ಚರ್ಯ ಚಕಿತರಾಗಿ ಮೈ ನವಿರೇಳಿಸುವ ಸಿಂಹವಾಗಿ ಸಭಿಕರ ಮಧ್ಯದಲ್ಲಿ ಪ್ರತ್ಯಕ್ಷರಾದ ಸುರೇಂದ್ರ ಆಚಾರ್ಯರ ಸಿಂಹ ನರ್ತನ/ಗರ್ಜನೆ ಗಮನ ಸೆಳೆಯಿತು. ಮಾಲಿನಿಯಾಗಿ ರತ್ನಾ ಹಾಗೂ ದಿನೇಶ್ ಕುಲಾಲ್ ರವರ ಮಗಳು ಲಾಸ್ಯಳ ಮನಮೋಹಕ ನೃತ್ಯ, ನಟನೆ, ಅಭಿನಯ ಹಾಗೂ ಹಾವಭಾವ ಅಮೋಘವಾಗಿತ್ತು. ಅವಳ ಕನ್ನಡ ವಾಕ್ ಚಾತುರ್ಯವು ಪ್ರೇಕ್ಷಕರ ಮನ ಮುಟ್ಟಿತು. ಮಾಲಿನಿಯ ಧೂತನಾಗಿ ಸೂರಪ್ಪ ಕುಂದರ್ ರವರು ಎಂದಿನಂತೆ ತಮ್ಮ ಹಾಸ್ಯ ವನ್ನು ಸೊಗಸಾಗಿ ಪ್ರಸ್ತುತ ಪಡಿಸಿ ಸಭಿಕರನ್ನು ರಂಜಿಸಿದರು. ದೇವೇಂದ್ರನಾಗಿ ವೀಣಾ ಆಚಾರ್ಯ ಹಾಗೂ ಶ್ರುತಿ ಪೂಜಾರಿ ನಾವು ಯಾವುದೇ ಕಲಾವಿದರಿಗಿಂತ ಕಡಿಮೆ ಇಲ್ಲ ಎಂಬುವುದನ್ನು ಸಾಬೀತು ಪಡಿಸಿದರು. ರಕ್ತ ಬೀಜಾಸುರನಾಗಿ ನಗರದ ಹೆಸರಾಂತ ಯಕ್ಷಪ್ರೇಮಿ, ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಸಿ.ಎ.ಸುರೇಂದ್ರ ಶೆಟ್ಟಿಯವರು ಎಂದಿನಂತೆ ಅದ್ಭುತವಾದ ಯಕ್ಷಕಲೆಯ ತಮ್ಮ ಕಲಾಕಾರಿಕೆಯನ್ನು ಪ್ರದರ್ಶಿಸಿದರು. ಚಂಡ- ಮುಂಡರಾಗಿ ರಶ್ಮಿ ಪೂಜಾರಿ ಹಾಗೂ ಸುದೀಪ್ ಪಕಾರ್ಯಕ್ರಮದ ತಮ್ಮ ಪಾತ್ರಕ್ಕೆ ತಕ್ಕಂತೆ ಶೌರ್ಯ ಭರಿತ ಕುಣಿತದಿಂದ ರಂಗಮಂಚವನ್ನೇ ಅಲುಗಾಡಿಸಿದ ಅನುಭವ ನೀಡಿ ಮೆಚ್ಚುಗೆಗೆ ಪಾತ್ರರಾದರು. ರಕ್ಕಸ ಬಲದಲ್ಲಿ ನವೀನ್ ಸಾಲ್ಯಾನ್,ವಿನೀತ್ ಪೂಜಾರಿ, ಅಕ್ಷರಿ ಆಚಾರ್ಯ,ಅಧಿತಿ ಆಚಾರ್ಯ, ರಚಿತ್ ಸುವರ್ಣ,ಅಸ್ಮಿತ್ ಪೂಜಾರಿ, ಶ್ರುತಿ ನಾಯಕ್, ಪ್ರಜ್ವಲ್ ನಾಯಕ್,ರತ್ನ ಪೂಜಾರಿ, ಮತ್ತು ದೇವೇಂದ್ರ ಬಲದಲ್ಲಿ ಯುಕ್ತಿ ಆಚಾರ್ಯ, ಸೃಷ್ಟಿ ಪೂಜಾರಿ,ನಿತಿಕಾ ಆಚಾರ್ಯ, ಯಜ್ಞಶ್ರೀ ಶೆಟ್ಟಿಗಾರ್,ರಾಶಿ ಸುವರ್ಣ, ಲಹರಿ ಸಾಲ್ಯಾನ್,ಆಶ್ಮಿಕಾ ಪೂಜಾರಿ ನಟಿಸಿದರು. ಸಪ್ತ ಮಾತ್ರಿಕೆಯರಾಗಿ ದುರ್ಗಾ ಲಕ್ಷ್ಮಿ,ವಿಜಯಶ್ರೀ ಆಚಾರ್ಯ,ವಿದ್ಯಾ ನಾಯಕ್, ನಳಿನಿ ಕರ್ಕೇರ,ಹರಿಣಾಕ್ಷಿ ಮೂಲ್ಯ, ಪ್ರಮೀಳ ಅಚಾರ್ಯ,ಶ್ರೀ ದೇವಿ ಆಚಾರ್ಯ ಅಭಿನಯಿಸಿದರು. ರಕ್ತೇಶ್ವರಿಯಾಗಿ ನವೀನ್ ಸಾಲಿಯಾನ್ ವರು ತನ್ನ ಕಲಾ ಕೌಶಲವನ್ನು ಪ್ರದರ್ಶಿಸಿದರು. ಕೊನೆಯಲ್ಲಿ ದರ್ಶನ ಪಾತ್ರಿಯಾಗಿ ಸುಂದರ ಪೂಜಾರಿಯವರು ಅಭಯದ ನುಡಿ ನೀಡಿ ಗುಡಿ ಸೇರಿದರು. ಈ ಕಾರ್ಯಕ್ರಮದ ಯಶಸ್ವಿಯು ತುಳು- ಕನ್ನಡಿಗರ ಸಹಕಾರ ಹಾಗೂ ಸಮಿತಿಯ ಸದಸ್ಯರ ಒಮ್ಮತದ ಕಾರ್ಯಾಚರಣೆಯಿಂದ ಸಾಧ್ಯವಾಯಿತು ಎಂದು ಸಮಿತಿಯ ಅಧ್ಯಕ್ಷರು ಅಭಾರ ವ್ಯಕ್ತ ಪಡಿಸಿದರು. ಯಕ್ಷಗಾನಂ- ಗೆಲ್ಗೆ….
ಸೂರಪ್ಪ ಕುಂದರ್

Related posts

ಹಿರಿಯ ಪತ್ರಕರ್ತ, ನಿರೂಪಕ, ಕವಿ ಮನೋಹರ್ ಪ್ರಸಾದ್ ವಿಧಿವಶ.

Mumbai News Desk

ಲೇಖಕ,ಪ್ರಸಿದ್ಧ ರಂಗ ನಟ   ಸುಂದರ ಮೂಡಬಿದ್ರಿ ಯವರಿಗೆಅಮೂಲ್ಯ   ಪತ್ರಿಕೆ ಯ  ಬೆಳ್ಳಿ ಹಬ್ಬದ ವಿಶೇಷ  ಸನ್ಮಾನ

Mumbai News Desk

ಮಜ್ ಗಾಂವ್ ನ ರಾಜ್ ಕಮಲ್ ಟೈಲರ್ಸ್ ನ ಮಾಲಕ ದೇವಪ್ಪ ಪೂಜಾರಿ ನಿಧನ

Mumbai News Desk

  ಬಿಲ್ಲವ ಸಮಾಜದ  ಜನನಾಯಕ  ಜಯ ಸಿ. ಸುವರ್ಣ ಸಂಸ್ಮರಣೆ

Mumbai News Desk

ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ವಿಯೋಗ

Mumbai News Desk

ಗೋರೆಗಾಂವ್ ; ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಆಧ್ಯಕ್ಷ, ಸಮಾಜಸೇವಕ ಪುರುಷೋತ್ತಮ ಕೆ. ಐಲ್ ನಿಧನ

Mumbai News Desk