ಮೀರಾ ರೋಡ್ ನ ಭಾರತಿ ಪಾರ್ಕ್ ಬಳಿ ಯುನಿಟ್ ಟವರ್ , ಶ್ರೀ ಲಕ್ಷ್ಮೀನಾರಾಯಣ ಭಜನ ಮಂದಿರದ ಸಮೀಪದಲ್ಲಿ ನಡೆಯುತ್ತಿದ್ದ ಮೀರಾ ರೋಡ್ ಯುವ ಮಿತ್ರ ಮಂಡಳಿ ಇದರ 28 ನೇ ವಾರ್ಷಿಕ ಸಾರ್ವಜನಿಕ ಗಣೇಶೋತ್ಸವವು ಸೆ. 7 ರಿಂದ 17 ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆಪ್ಟೆಂಬರ್ 7ರಂದು ಬೆಳಿಗ್ಗೆ ಗಣ ಹೋಮ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಜೆ ಭಜನೆ ಮಹಾಮಂಗಳಾರತಿ ನಡೆಯಲಿದೆ.
13ರಂದು ಸಂಜೆ 4:00 ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ, ಬಳಿಕ ಹಳದಿ ಕುಂಕುಮ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 14ರಂದು ರಾತ್ರಿ 9:00ಗೆ ಸಾಂಸ್ಕೃತಿಕ ಕಾರ್ಯಕ್ರಮ.
ಸೆಪ್ಟಂಬರ್ 15ರಂದು ಸಂಜೆ ಭಜನೆ ರಾತ್ರಿ 8 ಗಂಟೆಗೆ ರಂಗ ಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಪ್ಟಂಬರ್ 17ರಂದು ಶೋಭಾಯಾತ್ರೆಯಲ್ಲಿ ಜಲಸ್ತಂಭನಗೊಳಿಸುವ ಮೂಲಕ ಸಂಪನ್ನ ಗೊಳ್ಳಲಿದೆ.
ಭಗವದ್ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿ
ಅಧ್ಯಕ್ಷ ಜಿತೇಂದ್ರ ಸನಿಲ್, ಉಪಾಧ್ಯಕ್ಷ ಹರೀಶ್ ರೈ , ಗೌ.ಕಾರ್ಯದರ್ಶಿ ಪಂಜದ ಗುತ್ತು ಸಂಪತ್ ಶೆಟ್ಟಿ , ಕೋಶಾಧಿಕಾರಿ ವಿಜಯ ಸುವರ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಉಡುಪ, ಮಹಿಳಾ ಸದಸ್ಯೆಯರ ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.