September 6, 2026
Mumbai News Kannada
ಪ್ರಕಟಣೆ

ಸಾಂತಕ್ರೂಸ್   ಶ್ರೀ ಮಂತ್ರ ದೇವಿ   ದೇವಸ್ಥಾನ ವಾರ್ಷಿಕ ಮಹಾಪೂಜೆ.





ಧರ್ಮ ಕಾರ್ಯದಲ್ಲಿ ಪಾಲ್ಗೊಂಡಾಗ ಬದುಕು ಪಾವನ: ವಾಸುದೇವ ಬಂಜನ್

ಚಿತ್ರ ವರದಿ : ದಿನೇಶ್ ಕುಲಾಲ್

ಧಾರ್ಮಿಕ ಮುಖಂಡರಾಗಿ, ಸಾಮಾಜಿಕ ಸೇವೆಯ ಮೂಲಕ ಸಾಂತಕ್ರೂಸ್ ಪರಿಸರದಲ್ಲಿ ಜನಾನುರಾಗಿರುವ 
ವಾಸುದೇವ ಬಂಜನ್  ಅವರು  ಸಾಂತಕ್ರೂಸ್, ಆಶಾ ಚಾಲ್, ಮಿಲನ್ ಸಬ್ ವೇ ರೋಡ್, ಸಂತಾಕ್ರೂಸ್, (ಪ.) ಇಲ್ಲಿ ಸ್ಥಾಪಿಸಿರುವ ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್ ಆಡಳಿತದ ಶ್ರೀ ಮಂತ್ರದೇವಿ ದೇವಸ್ಥಾನದ ವಾರ್ಷಿಕ ಮಹಾಪೂಜೆಯು  ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ ನಡೆದು ಸ್ನಾನಿಧ್ಯ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವತೆಗಳಿಗೆ ಹೋಮಪರ್ವ ಹಾಗೂ ಅಮ್ಮನವರಿಗೆ ಗದ್ದಿಗೆ ಏರಿಸಿ ಶ್ರೀ ದೇವಿಯ ಆವೇಶದೊಂದಿಗೆ ಪ್ರಸಾದ ವಿತರಣೆ ಹಾಗೂ ಮಹಾ ಪ್ರಸಾದ ಅನ್ನಸಂತರ್ಪಣೆ   ನಡೆಯಿತು.

ಮಧ್ಯಾಹ್ನ ಮಹಾ ಮಂಗಳಾರತಿ ನಡೆದು ಬಳಿಕ ಸಂಜೆ ತನಕ ಮಹಾ ಅನ್ನದಾನ ಸೇವೆ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀದೇವರ ದರ್ಶನ ಪಡೆದರು.
ಕ್ಷೇತ್ರದ ಧಾನಿಗಳನ್ನು,ವಿಶೇಷ ಅತಿಥಿ ಮೊಕ್ತೇಸರಸರರಾದ ವಾಸುದೇವ ಬಂಜನ್ (ಅರ್ಚಕರು) ಅಧ್ಯಕ್ಷರು, ಟ್ರಸ್ಟಿ ಮಧ್ಯಸ್ಥರು, ಕಾರ್ಯಕಾರಿ ಸಮಿತಿಯವರು, ಮಹಿಳಾ ವಿಭಾಗದ ಸದಸ್ಯರು ಗೌರವಿಸಿದ

ಕ್ಷೇತ್ರದ  ಮೊತ್ತೇಸರರಾದ ವಾಸುದೇವ ಬಂಜನ್ ಅವರು ಭಕ್ತರಿಗೆ ಪ್ರಸಾದ ನೀಡಿದ ಬಳಿಕ ಆಶೀರ್ವಚನದ ನೀಡುತ್ತಾ “ಧರ್ಮ ಕಾರ್ಯದಲ್ಲಿ ನಡೆದಾಗ ಬದುಕು ಪಾವನ, ನಿರಂತರ ಭಗವಂತನ  ಸ್ಮರಣೆ ಮಾಡಿದಾಗ ನಮಗೆ ಸತ್ಕಾರ್ಯಗಳು   ಮಾಡಲು ಸಾಧ್ಯವಾಗುತ್ತದೆ” ಎಂದು ನುಡಿದರು.
  ದಿನೇಶ್ ಕೋಟ್ಯಾನ್ ಜೆರಿಮೆರಿ ಇವರಿಂದ  ಸ್ಯಾಕ್ರೋಫೋನ್, ಚಂಡೆ ಮದ್ದಳೆ ವಾದನದ ಸೇವೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.



Related posts

ಸೆ. 27, ಭಾಯಂದರ್ ಪೂರ್ವ: ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ಶರನ್ನವರಾತ್ರಿ ಮಹಾಪೂಜೆ

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ಮಾ.9ರಂದ 41 ನೇ ಮಹಾಸಭೆ, ಸಾಧಕರಿಗೆ ಸನ್ಮಾನ! ಮಾಜಿ ಅಧ್ಯಕ್ಷರುಗಳಿಗೆ ಗೌರವ!

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ. ಡಿ 7ರಂದು ಮುಂಬೈಯಲ್ಲಿ  ವಿಶ್ವಬಂಟರ ಸಮಾಗಮ  ಬಂಟರ  ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ: ಐಕಳ ಹರೀಶ್ ಶೆಟ್ಟಿ

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಮಾ. 8 ರಂದು : ಮಹಾ ಶಿವರಾತ್ರಿ ಆಚರಣೆ

Mumbai News Desk