ಡೊಂಬಿವಲಿಯ ಶ್ರೀ ಜಗದಂಬಾ ಮಂದಿರದ 10ನೇ ವರ್ಷದ ನವರಾತ್ರಿ ಮಹೋತ್ಸವವು ಅಕ್ಟೋಬರ್ 3 ರಿಂದ 12 ರವರೆಗೆ ನಡೆಯಲಿದೆ. ಈ 9 ದಿನಗಳ ಧಾರ್ಮಿಕ, ಸಾಂಸ್ಕೃತೀಕ ಆಚರಣೆಯ ಅಂಗವಾಗಿ ಸೆ15ನೇ ಭಾನುವಾರ, ಬೆಳಿಗ್ಗೆ 10.30 ಕ್ಕೆ ಶ್ರೀ ಜಗದಂಬಾ ಮಂದಿರದಲ್ಲಿ ವಿಶೇಷ ಮಹಾಸಭೆ ಆಯೋಜಿಸಲಾಗಿದೆ.
ಶ್ರೀ ಜಗದಂಬಾ ಮಂದಿರದ ಎಲ್ಲಾ ಸದಸ್ಯರು ತಪ್ಪದೇ ಸಭೆಗೆ ಹಾಜರಾಗಿ ಶ್ರೀ ಜಗದಂಬಾ ಮಂದಿರದಲ್ಲಿ 10 ನೇ ವರ್ಷದ ನವರಾತ್ರಿ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಲಹೆ – ಸೂಚನೆ ನೀಡುವಲ್ಲಿ, ಮಹಿಳಾ ಸದಸ್ಯರು ಮತ್ತು ಯುವ ಸದಸ್ಯರು, ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರುವಂತೆ ಮಂದಿರದ ಗೌರವ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.
.
.