ಮುಂಬೈಯ ರಾತ್ರಿ ಶಾಲೆಗಳಲ್ಲಿ ಒಂದಾದ ಮದರ್ ಇಂಡಿಯಾ ಸ್ಕೂಲ್ ನ 19ನೇ ಈಸ್ಟ್ ಬಾಂಬೆ ಸ್ಕೌಟ್ ಗ್ರೂಪ್ ವತಿಯಿಂದ ಸೆ. 14 ಮತ್ತು ಸೆ. 15ರಂದು ಗುರುವಂದನೆ ಮತ್ತು ತವರೂರು ಕಾಣಿಕೆ ಕಾರ್ಯಕ್ರಮವು ಕುಂದಾಪುರದ ಬಸ್ರೂರಿನ ಪ್ರಥಮ್ ರೆಸೋರ್ಟ್ ನಲ್ಲಿ ಜರಗಲಿದೆ.
ಸೆ. 14ಕ್ಕೆ ಸ್ಕೌಟ್ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮಧ್ಯಾಹ್ನ 3ಕ್ಕೆ ನಡೆಯಲಿದೆ.ಉಡುಪಿಯ ಉದ್ಯಮಿ, ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆ ಕರ್ನಾಟಕ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ, ಇಂದ್ರಾಳಿ ದಿವಾಕರ ಶೆಟ್ಟಿ ಶಿಬಿರದ ಉದ್ಘಾಟನೆಗೈಯಲಿರುವರು.
ಈ ಸಂಧರ್ಭ ಸಂಜೀವ ಎನ್ ದೇವಾಡಿಗ ಬಡಾಕೆರೆ ಕುಂದಾಪುರ, ಜಯಕರ್ ಬಿ ಶೆಟ್ಟಿ ಕಟಪಾಡಿ ಉಡುಪಿ, ಸುದೇಶ್ ಜಿ ಭಂಡಾರಿ ಬಲಾಯಿ ಪಾದೆ,ಉಡುಪಿ ಯೋಗೇಶ್ ಎಸ್ ಕೊಠಾರಿ ಮಂದರ್ತಿ ಬ್ರಹ್ಮಾವರ ಉಡುಪಿ ಇವರನ್ನು ಸನ್ಮಾನಿಸಲಾಗುವುದು.
ಸೆಪ್ಟಂಬರ್ 15ರಂದು ಸಮಾರೋಪ ಮತ್ತು ಗುರುವಂದನ ಪ್ರಸ್ತುತಿ ಸಮಾರಂಭ ಜರಗಲಿದೆ.
ರಾಜ್ಯ ಮುಖ್ಯ ಸ್ಕೌಟ್ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಮುಖ್ಯ ಅತಿಥಿಯಾಗಿರುವರು.
ಗೌರವ ಅತಿಥಿಗಳಾಗಿ :
ಕೋಟಾ ಶ್ರೀನಿವಾಸ ಪೂಜಾರಿ (ಸಂಸದರು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ )
ಮೋಹನ್ ಆಳ್ವ (ನಿರ್ದೇಶಕರು ಆಳ್ವಾಸ್ ಎಜುಕೇಶನ್ ಮೂಡಬಿದ್ರಿ )
ಜಯಪ್ರಕಾಶ್ ಹೆಗ್ಡೆ( ಮಾಜಿ ಸಚಿವರು, ಕರ್ನಾಟಕ ಸರಕಾರ )
ಕಿರಣ್ ಕೊಡ್ಗಿ( ಕುಂದಾಪುರ ಶಾಸಕರು )
ಪ್ರಸಾದ್ ರಾಜ್ ಕಾಂಚನ್ (ಕಾಂಗ್ರೇಸ್ ಮುಖಂಡ ಉಡುಪಿ )
ಎಂ ಪ್ರಭಾಕರ್ ಭಟ್ (ರಾಜ್ಯ ಸಂಘಟನಾ ಆಯುಕ್ತರು )
ಸುಮನ್ ಶೇಖರ್ (ಭಾರತ್ ಸ್ಕೌಟ್ ಮತ್ತು ಗೈಡ್ ಕರ್ನಾಟಕ ಉಡುಪಿ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ )
ಪ್ರಭಾಕರ್ ಪೂಜಾರಿ (ಹೋಟೆಲ್ ಉದ್ಯಮಿ, ಹೋಟೆಲ್ ಶಿವ ಸಾಗರ್ ಬಾಲಯಿ ಪಾದೆ )
ಹರೀಶ್ ಪೂಜಾರಿ (ಉದ್ಯಮಿ ಮಲ್ಪೆ ) ಉಪಸ್ಥಿತರಿರುವರು.
ಉಪಸ್ಥಿತಿ : ಜಿ.ಆರ್ ಕಾಂಚನ್ ಸ್ಕೌಟ್ ಶಿಕ್ಷಕ, ವಿದ್ಯಾದಾಯಿನಿ ರಾತ್ರಿ ಶಾಲೆ ಮುಂಬೈ, ಕೃಷ್ಣ ಸಿ ಸುವರ್ಣ ಸ್ಕೌಟ್ ಶಿಕ್ಷಕ ಬಾಂಬೆ ಫೋರ್ಟ್ ರಾತ್ರಿ ಶಾಲೆ ಮುಂಬೈ.
ಸ್ಕೌಟ್ ಅಧ್ಯಾಪಕರಾದ ರಾಮದಾಸ್ ನಾಯ್ಕ್, ಮಂದಾರ ಹೆಗ್ಡೆ, ಮುದ್ದು ಪೂಜಾರಿ ಮತ್ತು ಸ್ಕೌಟ್ ಮಿತ್ರರು ಮುಂಬೈ ಎಲ್ಲರಿಗೂ ಆದರದ ಸ್ವಾಗತವನ್ನು ಬಯಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ : 9 9 3 0 0 6 6 7 5 5,
9 8 2 1 5 9 5 9 7 8, 9 9 6 0 6 7 1 7 1 9 ಅಥವಾ 9 3 4 1 4 4 4 3 7 9 ಸಂಪರ್ಕಿಸಿ.
.
.