ಮುಂಬೈ ಮಹಾನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಪದ್ಮಶಾಲಿ ಸಮಾಜ ಸೇವಾ ಸಂಘದ 88ನೇ ವಾರ್ಷಿಕ ಮಹಾಸಭೆ, ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿಯ 49ನೇ ವಾರ್ಷಿಕ ಮಹಾಸಭೆ ಮತ್ತು ಮಹಿಳಾ ಬಳಗದ 36ನೇ ವಾರ್ಷಿಕ ಮಹಾಸಭೆಯು ಸೆ. 15ರಂದು ಬೆಳ್ಳಿಗೆ 9 ಗಂಟೆಗೆ ಮುಲುಂಡ್ ಪಶ್ಚಿಮ ಪಂಡಿತ್ ಜವಾಹರಲಾಲ್ ನೆಹರು ಮಾರ್ಗ, ಅಪ್ನಾ ಬಜಾರ್ ನ ಮೇಲ್ಗಡೆಯ ಮಹಾರಾಷ್ಟ್ರ ಹಾಲ್ ನಲ್ಲಿ ನಡೆಯಲಿದೆ.
ಅಂದು ದಿನವಿಡೀ ನಡೆಯಲಿರುವ ಕಾರ್ಯಕ್ರಮದ ವಿವರ :
ಬೆಳಿಗ್ಗೆ 9:30ಕ್ಕೆ ಹಳದಿ ಕುಂಕುಮ, 9:45 ಕ್ಕೆ ಗುರು ಸ್ತೋತ್ರ ಮತ್ತು ಪ್ರಾರ್ಥನೆ, 9.50 ಕ್ಕೆ ಮಹಾಸಭೆ ಆರಂಭ.
ಬೆಳಿಗ್ಗೆ ಗಂಟೆ 11ಕ್ಕೆ ಸಮಾಜದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ/ ವಿದ್ಯಾರ್ಥಿವೇತನ ವಿತರಣೆ.
ಮಧ್ಯಾಹ್ನ 2 ಗಂಟೆಗೆ ವಾರ್ಷಿಕ ದಿನಾಚರಣೆ.
ಯುವ ಪ್ರತಿಭೆಗಳಿಗೆ ಮತ್ತು ಸಾಧಕರಿಗೆ ಪ್ರತಿಭಾ ಪುರಸ್ಕಾರ.
ಇ ಬಾರಿಯ ಪದ್ಮ ಪ್ರತಿಭಾ ಪುರಸ್ಕಾರವನ್ನು ಸ್ಫೂರ್ತಿ ವಿಶೇಷ ಶಾಲೆ ಮೂಡಬಿದ್ರೆ, ಇದರ ಸಂಸ್ಥಾಪಕ ಪ್ರಕಾಶ್ ಜೆ ಶೆಟ್ಟಿಗಾರ್ ಅವರಿಗೂ ಪದ್ಮಾ ಕಲಾ ತಪಸ್ವಿ ಪುರಸ್ಕಾರವನ್ನು ರಂಗ ನಟ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ, ಇದರ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ ಅವರಿಗೆ ಪ್ರಧಾನಿಸಲಾಗುವುದು ಹಾಗೂ ಸಮಿತಿಯ ಸದಸ್ಯರಿಗೆ ಮನ್ನಣೆ ಪ್ರಶಸ್ತಿ ನೀಡಲಾಗುವುದು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ಲಘು ಉಪಹಾರ, ಮಧ್ಯಾಹ್ನ ಪ್ರೀತಿ ಭೋಜನ ಮತ್ತು ಸಂಜೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಗೌರವ ಕಾರ್ಯದರ್ಶಿ ಲೀಲಾಧರ ಬಿ ಶೆಟ್ಟಿಗಾರ್, ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿ ರಮೇಶ್ ಪಿ ಶೆಟ್ಟಿಗಾರ್, ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಎನ್ ಶೆಟ್ಟಿಗಾರ್ ವಿನಂತಿಸಿದ್ದಾರೆ.
.
.
.