
ಕಾಪು ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 2023 – 24ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 14ರಂದು ಕಾಪು ಭಾಸ್ಕರ ಸೌಧದಲ್ಲಿ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಲವ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಜರಗಿತು.




ನಿರ್ದೇಶಕ ಶಿವರಾಮ್ ಆಚಾರ್ಯ ಶೇರುದಾರರನ್ನು, ಠೇವಣಿದಾರರನ್ನು, ಗ್ರಾಹಕರನ್ನು ಸ್ವಾಗತಿಸಿದರು.
ಅಕ್ಷಯಧಾರದ ಕಾರ್ಯದರ್ಶಿ ಅಮಿತಾ ದೇವಾಡಿಗ ವಾರ್ಷಿಕ ವರದಿಯನ್ನು ಮಂಡಿಸಿದರು. ಸೊಸೈಟಿಯ ನಿರ್ದೇಶಕ ಜಗಧೀಶ್ ಮೆಂಡನ್ ಗತ ವರ್ಷದ ಆಯ ವ್ಯಯ ಪಟ್ಟಿಯನ್ನು ಸಭೆಯ ಮುಂದಿಟ್ಟರು.
ಸೊಸೈಟಿಯ ಷೇರುದಾರರಾದ ಉಮನಾಥ ಬಂಗೇರ, ಶೀಲ ರಾಜ್ ಪುತ್ರನ್ ಪೊಲಿಪು, ಸೀತಾರಾಮ್ ಸಾಲಿಯನ್, ಸುಂದರ್ ಸುವರ್ಣ ಪೊಲಿಪು ಹಾಗೂ ಸೀತಾಲಕ್ಷ್ಮಿ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆ – ಸೂಚನೆ ನೀಡಿದರು.
ಈ ಸಂಧರ್ಭ ಸೊಸೈಟಿಯ ಆರಂಭದ ದಿನದಿಂದಲೂ ಶೇರುದಾರರಾದ ಹಾಗೂ ಸಂಸ್ಥೆಯ ಮಾರ್ಗದರ್ಶನರಾಗಿದ್ದ, ಈ ಬಾರಿ ಕಾಪು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರಿಣಾಕ್ಷಿ ದೇವಾಡಿಗ ಅವರನ್ನು ಸೊಸೈಟಿಯ ಪರವಾಗಿ ಸನ್ಮಾನಿಸಲಾಯಿತು. ನಿರ್ದೇಶಕ ಪ್ರಧೀಪ್ ಕುಮಾರ್ ಉಳಿಯರಗೋಳಿ ಸನ್ಮಾನಿತರನ್ನು ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಲವ ಕರ್ಕೇರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ” ನಮ್ಮ ಆರ್ಥಿಕ ಸಂಸ್ಥೆ ಮಧ್ಯಮ ವರ್ಗದ, ಸಣ್ಣ ಉದ್ದಿಮೆದಾರರ ಅಗತ್ಯತೆಗಳಿಗೆ ಸ್ಪಂದಿಸಿ, ಅವರ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದೆ. ಸೊಸೈಟಿಯು ಗ್ರಾಹಕರಿಗೆ ಗುಣಮಟ್ಟದ ಸೇವೆ – ಸೌಲಭ್ಯ ನೀಡುತ್ತಿದ್ದು, ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ ಎನ್ನುತ್ತಾ, ಶೇರುದಾರರಿಗೆ ,ಠೇವಣೆಧಾರರಿಗೆ ಹಾಗೂ ವಿವಿಧ ಖಾತೆಗಳನ್ನು ತೆರೆದು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಅಭಿನಂದನೆ ಸಲ್ಲಿಸಿದರು.
ಅಮಿತಾ ದೇವದಾಸ್ ಸಭೆಯನ್ನು ಮುನ್ನಡೆಸಿ ಕೊನೆಗೆ ಧನ್ಯವಾದ ಸಮರ್ಪಿಸಿದರು.
ಸೊಸೈಟಿಯ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರು, ಸಿಬ್ಬಂದಿಗಳು,ಶೇರುದಾರರು, ಗ್ರಾಹಕರು, ಠೇವಣಿದಾರರು ಉಪಸ್ಥಿತರಿದ್ದರು.
.
.
.