September 6, 2026
Mumbai News Kannada
ಕ್ರೀಡೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 5ನೇ ಟಿ20 ಪಂದ್ಯ ರದ್ದು : ಭಾರತದ ಮುಡಿಗೆ ಟಿ20 ಸರಣಿ





ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮಳೆಗೆ ಆಹುತಿಯಾಗಿದೆ. ಬ್ರಿಸ್ಬೇನ್ ನ ಗಾಬಾ ಕ್ರೀಡಾಂಗಣದಲ್ಲಿ ಶನಿವಾರ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬ್ಯಾಟಿಂಗ್​ಗೆ ಆಹ್ವಾನ ನೀಡಿತ್ತು. ಭಾರತೀಯ ಇನ್ನಿಂಗ್ಸ್ ನಲ್ಲಿ 4.5 ಓವರ್ ಗಳ ಆಟದ ನಂತರ ಮಳೆ ಆರಂಭವಾಯಿತು. ಆಟ ನಿಲ್ಲುವ ಹೊತ್ತಿಗೆ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 23 ರನ್ ಗಳಿಸಿದರೆ, ಶುಭ್​ಮನ್ ಗಿಲ್ 16 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಸರಣಿಯ ಮೊದಲ ಪಂದ್ಯವೂ ಮಳೆಯಲ್ಲಿ ಕೊಚ್ಚಿ ಹೋಗಿತ್ತು. ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ಏಕದಿನ ಸರಣಿಯನ್ನ 2-1ರಲ್ಲಿ ಗೆದ್ದರೆ, ಭಾರತ ಟಿ20 ಸರಣಿಯನ್ನ ತನ್ನದಾಗಿಸಿಕೊಂಡಿತು
ಕ್ಯಾನ್ಬೆರಾದಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ನಂತರ 2ನೇ ಪಂದ್ಯದಲ್ಲಿ ಮೆಲ್ಬೋರ್ನ್​​ನಲ್ಲಿ ಭಾರತ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಆಸ್ಟ್ರೇಲಿಯಾ 40 ಎಸೆಗಳಿರುವಂತೆಯೇ ಭಾರತ ನೀಡಿದ್ದ 126 ರನ್​ಗಳ ಗುರಿಯನ್ನ ಬೆನ್ನಟ್ಟಿತ್ತು. ನಂತರ ಭಾರತ ತಂಡ ಹೋಬರ್ಟ್​​ನಲ್ಲಿ 3ನೇ ಪಂದ್ಯದಲ್ಲಿ ಆಸೀಸ್ ನೀಡಿದ್ದ 187 ರನ್​ಗಳ ಗುರಿಯನ್ನ 9 ಎಸೆತಗಳಿರುವಂತೆ ಗೆದ್ದು ಸರಣಿಯನ್ನ 1-1ರಲ್ಲಿ ಸಮಬಲ ಸಾಧಿಸಿತ್ತು. ಗೋಲ್ಡ್ ಕಾಸ್ಟ್​​ನಲ್ಲಿ ನಡೆದ 4ನೇ ಪಂದ್ಯದಲ್ಲಿ ಭಾರತ 168 ರನ್​ಗಳ ಗುರಿಯನ್ನ ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡು 2-1ರಲ್ಲಿ ಸರಣಿ ಮುನ್ನಡೆ ಸಾಧಿಸಿತ್ತು. ಇದೀಗ ಕೊನೆಯ ಪಂದ್ಯ ಮಳೆಯಿಂದ ರದ್ದಾದ ಕಾರಣ ಭಾರತ ಸರಣಿಯನ್ನ ತನ್ನದಾಗಿಸಿಕೊಂಡಿದೆ.



Related posts

ಬಿಲ್ಲವ ಸಮಾಜ ಸೇವಾ ಸಂಘ ಕೊಡೇರಿ: ವಿಜೃಂಭಣೆಯಿಂದ ಜರುಗಿದ 79ನೇ ವರ್ಷದ ಕಂಬಳೋತ್ಸವ

Mumbai News Desk

ಭಾಯಂದರ್, ರೈ ಸುಮತಿ ಎಜುಕೇಷನಲ್ ಟ್ರಸ್ಟ್ ನ ಸೇಂಟ್ ಆಗ್ನೆಸ್ ಆಂಗ್ಲ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ

Mumbai News Desk

ವಸಯಿ ಕಲಾ ಕ್ರಿಡೋತ್ಸವ ದಲ್ಲಿ  ಥ್ರೋ ಬಾಲ್ ಆಟದಲ್ಲಿ ಉಷಾ ಶ್ರೀಧರ ಶೆಟ್ಟಿ  ಕರ್ನಿರೆ ಇವರ ನಾಯಕತ್ವ ತಂಡಕ್ಕೆ  ಪ್ರಥಮ ಸ್ಥಾನ . 

Mumbai News Desk

ಉದಯ ಶೆಟ್ಟಿ ನೇತೃತ್ವದಲ್ಲಿ ಹರಿಯಾಣದಲ್ಲಿ 5ನೇ ಮಾಸ್ಟರ್ಸ್ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್

Mumbai News Desk

ಐತಿಹಾಸಿಕ ಜಯ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವನಿತೆಯರ ತಂಡಕ್ಕೆ ಭರ್ಜರಿ ಗೆಲುವು

Mumbai News Desk

Jai Hind Sports Club Hosts 59th R. N. Utchil Memorial Athletics Meet

Mumbai News Desk