ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಸರ್ಕಾರದ ಪ್ರಮುಖ ಆರೋಗ್ಯ ವಿಮಾ ಪಾಲಿಸಿಯಾಗಿದ್ದು ಇದನ್ನು ಸೆಪ್ಟಂಬರ್ 2018ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯು ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಆರ್ಥಿಕ ಭದ್ರತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅತಿಯಾದ ವೈದ್ಯಕೀಯ ವೆಚ್ಚಗಳಿಂದಾಗಿ ಯಾರು ಕಷ್ಟ ಬೀಳದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ, ಸೆಪ್ಟಂಬರ್ 11ರಂದು ನಡೆದ ಕೇಂದ್ರ ಸಚಿವ ಸಂಪುಟವು ಪ್ರಮುಖ ಯೋಜನೆಯದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಆದಾಯವನ್ನು ಲೆಕ್ಕಿಸದೆ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ಅನುಮೋದಿಸಿದೆ.ಇದರ ಪ್ರಯೋಜನ ಸರಿ ಸುಮಾರು ನಾಲ್ಕುವರೆ ಕೋಟಿ ಕುಟುಂಬಗಳು ಮತ್ತು ಆರು ಕೋಟಿ ಹಿರಿಯ ನಾಗರಿಕರಿಗೆ ಸಿಗಲಿದೆ. ಕುಟುಂಬದ ಆಧಾರದ ಮೇಲೆ ಸುಮಾರು 5 ಲಕ್ಷ ಉಚಿತ ಆರೋಗ್ಯ ವಿಮೆ ರಕ್ಷಣೆಯನ್ನು ನೀಡುತ್ತದೆ.
70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ತಮ್ಮ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಹಿರಿಯ ನಾಗರಿಕರಿಗೆ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿಯಲ್ಲಿ ಮೋದಿ ಆರೋಗ್ಯ ಕಾರ್ಡ್ ಎಂದು ಕರೆಯಲ್ಪಡುವ ಹೊಸ ವಿಭಿನ್ನ ಕಾರ್ಡನ್ನು ನೀಡಲಾಗುತ್ತದೆ.
ಮಾನ್ಯವಾದ ಆಧಾರ್ ಸಂಖ್ಯೆಯನ್ನು ಹೊಂದಿರುವ 70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ, ಮತ್ತು ಪ್ರಾರಂಭದಲ್ಲಿ ಉಂಟಾಗುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ . ಇದು ಅಪ್ಲಿಕೇಶನ್ ಆದರಿತ ಯೋಜನೆಯಾಗಿದೆ, ಜನರು ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು, ಮುಖದ ದೃಢೀಕರಣದ ಸೌಲಭ್ಯವು ಪೋರ್ಟಲ್ ನಲ್ಲಿ ಲಭ್ಯವಿದೆ. ಇದು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗೊತ್ತು ಪಡಿಸಿದ ಲಿಂಕ್ ಅನ್ನು ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ರೀತಿ :
- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಪ್ರಧಾನ ಮಂತ್ರಿ ಕಿಯೋಸ್ಕ್ ನಲ್ಲಿ ನಿಮ್ಮ ಆಧಾರ್ ಅಥವಾ ಪಡಿತರ ಚೀಟಿಯನ್ನು ಪರಿಶೀಲಿಸಿ.
- ಕುಟುಂಬದ ಗುರುತಿನ ಪುರಾವೆಗಳನ್ನು ಒದಗಿಸಿ
- ನಿಮ್ಮಇ -ಕಾರ್ಡನ್ನು ವಿಶಿಷ್ಟವಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಐಡಿಯೊಂದಿಗೆ ಮುದ್ರಿಸಿ.
ಈ ಯೋಜನೆ ಅಡಿ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಮತ್ತು ಸಮಲೋಚನೆ, ಮೂರು ದಿನಗಳವರೆಗೆ ಆಸ್ಪತ್ರೆ ಚಿಕಿತ್ಸೆ, ಔಷಧ ಮತ್ತು ವೈದ್ಯಕೀಯ ಉಪಭೋಗ್ಯ, ತೀವ್ರ ನಿಗಾ ಸೇವೆಗಳು, ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳು, ವೈದ್ಯಕೀಯ ಅಳವಡಿಕೆ ಸೇವೆಗಳು, ವಸತಿ ಪ್ರಯೋಜನ, ಆಹಾರ ಸೇವೆಗಳು, ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ತೊಡಕುಗಳು ಹಾಗೂ 15 ದಿನಗಳವರೆಗೆ ಆಸ್ಪತ್ರೆಗೆ ದಾಖಲಾದ ನಂತರದ ಆರೈಕೆಯನ್ನು ಮಾಡಲಾಗುವುದು.