September 6, 2026
Mumbai News Kannada
ಮಹಾರಾಷ್ಟ್ರ

ಬೊಯಿಸರ್ ಸಾರ್ವಜನಿಕ ಗಣೇಶೋತ್ಸವ ಮಂಡಲದ 100 ನೆಯ ವರ್ಷದ ಸಂಭ್ರಮಾಚರಣೆ.





ಚಿತ್ರ ಮತ್ತು ವರದಿ : ಪಿ.ಆರ್.ರವಿಶಂಕರ್

ಬೊಯಿಸರ್ : ಒಂದು ಕಾಲದಲ್ಲಿ ತೀರಾ ಕಾಡುಪ್ರದೇಶವಾಗಿದ್ದು ಒಂದು ಸಣ್ಣ ಹಳ್ಳಿ ಪ್ರದೇಶವಾಗಿದ್ದ ಪಾಲ್ಘರ್ ಜಿಲ್ಲೆಯ ಬೊಯಿಸರ್ ನಲ್ಲಿ  ಕೆಲವು ಆಸಕ್ತರು ಸ್ಥಾಪಿಸಿ ಪೂಜಿಸಿಕೊಂಡು ಬಂದಿದ್ದ   ರೈಲ್ವೇ ಸ್ಟೇಷನ್ ಬಳಿಯ” ಸಾರ್ವಜನಿಕ ಗಣೇಶೋತ್ಸವ ಮಂಡಳಿ”ಯು ಈಗ  ತನ್ನ 100 ನೆಯ ವರ್ಷದ ಆಚರಣೆಯ ಸಂಭ್ರಮದಲ್ಲಿದೆ. ಗಣೇಶೋತ್ಸವವನ್ನು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.

ವಿಘ್ನಹರ್ತಾ ಗಣಪತಿಯ ವಿಶೇಷ ಪೂಜೆಯು ನಿನ್ನೆ ಸಂಜೆ ಜರಗಿತು. 

     ಈ ಸಂದರ್ಭದಲ್ಲಿ ಭಾಗವಹಿಸಿದ  ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಷನ್  ಅಧ್ಯಕ್ಷರಾದ ರಘುರಾಮ್ ಎಮ್. ರೈ ,    ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ  ಕೆ . ಭುಜಂಗ ಶೆಟ್ಟಿ ,   ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರಾದ  ಶ್ರೀನಿವಾಸ್ ಕೋಟ್ಯಾನ್ ಮತ್ತು ಸತ್ಯಾ ಕೋಟ್ಯಾನ್ ,  ಉದ್ಯಮಿ ಬಿಕ್ರಿಗುತ್ತು ಧನೇಶ್ ಶೆಟ್ಟಿ ,     ಗಣೇಶೋತ್ಸವದ ಪದಾಧಿಕಾರಿಗಳಾದ ಶೇಕರ್ ಮಹಾಂತ್ ಹಾಗೂ ವಿಜಯ್ ಪಾಠಕ್ ಇನ್ನಿತರರನ್ನು ಚಿತ್ರದಲ್ಲಿ ಕಾಣಬಹುದು.

      ಛತ್ರಪತಿ ಶಿವಾಜಿ ಮಹಾರಾಜರ ಜೀವನದ ವೀರ ಕಥನವನ್ನು ದೃಶ್ಯಾವಳಿಯ ಮೂಲಕ ಹನ್ನೊಂದು ದಿನಗಳೂ ಭಕ್ತಾದಿಗಳ ವೀಕ್ಷಣೆಗೆ ಪ್ರದರ್ಶಿಸಲಾಗುತ್ತಿದೆ.

ವರದಿ : ಪಿ.ಆರ್.ರವಿಶಂಕರ್, ಡಹಾಣೂರೋಡ್

              8483980035



Related posts

ನಾಶಿಕ್ ಸಿಟಿ ವಲಯ ರೋಟರಿ ಕ್ಲಬ್ ಅಧ್ಯಕ್ಷರಾಗಿ ಬಾಲಚಂದ್ರ ಕೋಟ್ಯಾನ್ ಆಯ್ಕೆ.

Mumbai News Desk

ಮಹಾರಾಷ್ಟ್ರದಲ್ಲಿ ಎನ್‌ಸಿಎಂಸಿ (NCMC) ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿ: ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಸೌಲಭ್ಯ

Mumbai News Desk

ಸಾಮಾನ್ಯ ಮನುಷ್ಯನನ್ನು ಸೂಪರ್ ಮ್ಯಾನ್ ಆಗಿ ಪರಿವರ್ತಿಸುತ್ತೇವೆ; ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಪ್ರತಿಕ್ರಿಯೆ

Mumbai News Desk

ಮಹಾರಾಷ್ಟ್ರ : ವಿರಾರ್ ನಲ್ಲಿ ಕಟ್ಟಡ ಕುಸಿದು 5 ಸಾವು, 9 ಜನರಿಗೆ ಗಾಯ; ಬಿಲ್ಡರ್ ಬಂಧನ

Mumbai News Desk

ತುಕಾರಾಮ್ ಮುಂಢೆ ‘ಆ್ಯಕ್ಷನ್’ಗೆ ಮಹಾರಾಷ್ಟ್ರ FDA ವೇಗ: ಆಹಾರ ಮಾದರಿ ಸಂಗ್ರಹದಲ್ಲಿ ಶೇ.300ರಷ್ಟು ಏರಿಕೆ

Mumbai News Desk

ಮಹಾರಾಷ್ಟ್ರ ಎಸ್‌ಎಸ್‌ಸಿ ಫಲಿತಾಂಶ 2026: ಮೇ 8 ರಂದು 10ನೇ ತರಗತಿ ಫಲಿತಾಂಶ ಪ್ರಕಟ

Mumbai News Desk