
ಚಿತ್ರ ಮತ್ತು ವರದಿ : ಪಿ.ಆರ್.ರವಿಶಂಕರ್
ಬೊಯಿಸರ್ : ಒಂದು ಕಾಲದಲ್ಲಿ ತೀರಾ ಕಾಡುಪ್ರದೇಶವಾಗಿದ್ದು ಒಂದು ಸಣ್ಣ ಹಳ್ಳಿ ಪ್ರದೇಶವಾಗಿದ್ದ ಪಾಲ್ಘರ್ ಜಿಲ್ಲೆಯ ಬೊಯಿಸರ್ ನಲ್ಲಿ ಕೆಲವು ಆಸಕ್ತರು ಸ್ಥಾಪಿಸಿ ಪೂಜಿಸಿಕೊಂಡು ಬಂದಿದ್ದ ರೈಲ್ವೇ ಸ್ಟೇಷನ್ ಬಳಿಯ” ಸಾರ್ವಜನಿಕ ಗಣೇಶೋತ್ಸವ ಮಂಡಳಿ”ಯು ಈಗ ತನ್ನ 100 ನೆಯ ವರ್ಷದ ಆಚರಣೆಯ ಸಂಭ್ರಮದಲ್ಲಿದೆ. ಗಣೇಶೋತ್ಸವವನ್ನು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.

ವಿಘ್ನಹರ್ತಾ ಗಣಪತಿಯ ವಿಶೇಷ ಪೂಜೆಯು ನಿನ್ನೆ ಸಂಜೆ ಜರಗಿತು.
ಈ ಸಂದರ್ಭದಲ್ಲಿ ಭಾಗವಹಿಸಿದ ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರಘುರಾಮ್ ಎಮ್. ರೈ , ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ ಕೆ . ಭುಜಂಗ ಶೆಟ್ಟಿ , ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರಾದ ಶ್ರೀನಿವಾಸ್ ಕೋಟ್ಯಾನ್ ಮತ್ತು ಸತ್ಯಾ ಕೋಟ್ಯಾನ್ , ಉದ್ಯಮಿ ಬಿಕ್ರಿಗುತ್ತು ಧನೇಶ್ ಶೆಟ್ಟಿ , ಗಣೇಶೋತ್ಸವದ ಪದಾಧಿಕಾರಿಗಳಾದ ಶೇಕರ್ ಮಹಾಂತ್ ಹಾಗೂ ವಿಜಯ್ ಪಾಠಕ್ ಇನ್ನಿತರರನ್ನು ಚಿತ್ರದಲ್ಲಿ ಕಾಣಬಹುದು.
ಛತ್ರಪತಿ ಶಿವಾಜಿ ಮಹಾರಾಜರ ಜೀವನದ ವೀರ ಕಥನವನ್ನು ದೃಶ್ಯಾವಳಿಯ ಮೂಲಕ ಹನ್ನೊಂದು ದಿನಗಳೂ ಭಕ್ತಾದಿಗಳ ವೀಕ್ಷಣೆಗೆ ಪ್ರದರ್ಶಿಸಲಾಗುತ್ತಿದೆ.
ವರದಿ : ಪಿ.ಆರ್.ರವಿಶಂಕರ್, ಡಹಾಣೂರೋಡ್
8483980035