ಮಹಾರಾಷ್ಟ್ರ ಸರ್ಕಾರವು ಅಧಿಕೃತ ಈದ್ -ಎ -ಮಿಲಾದ್ ರಜೆಯನ್ನು ಸೆಪ್ಟಂಬರ್ 16ರ (ಸೋಮವಾರ )ಬದಲಿಗೆ ಸೆಪ್ಟೆಂಬರ್ 18ಕ್ಕೆ(ಬುಧವಾರ )ಮರು ನಿಗದಿಪಡಿಸಿದೆ. ಗಣೇಶ್ ಹಬ್ಬದ ಕೊನೆಯ ದಿನವಾದ ಅನಂತ ಚತುರ್ದಶಿ ಸೆಪ್ಟೆಂಬರ್ 17ರಂದು ಇರುವುದರಿಂದ ಸ್ಥಳೀಯ ಮುಸ್ಲಿಂ ಸಮುದಾಯವು ತನ್ನ ಈದ್ ಮೆರವಣಿಗೆಯನ್ನು ಸೆಪ್ಟಂಬರ್ 16ರ ಬದಲಿಗೆ ಸೆಪ್ಟೆಂಬರ್ 18ರಂದು ನಡೆಸಲು ನಿರ್ಧರಿಸಿದೆ.
ಗಣೇಶ ವಿಸರ್ಜನಾ ಸಮಾರಂಭಗಳೊಂದಿಗೆ ಘರ್ಷಣೆಯನ್ನು ತಪ್ಪಿಸಲು ಸೆಪ್ಟಂಬರ್ 18ರಂದು ಈದ್ ಮೆರವಣಿಗೆಯನ್ನು ನಡೆಸಲು ಯೋಜಿಸಿದ ಮುಸ್ಲಿಂ ಶಾಸಕರು ಮತ್ತು ಸಂಘಟನೆಗಳ ಮನವಿಯನ್ನು ಅನುಸರಿಸಿ ಸರಕಾರ ಈ ನಿರ್ದಾರ ತೆಗೆದುಗೊಂಡಿದೆ.
ಮಹಾರಾಷ್ಟ್ರ ಸರ್ಕಾರವು ಸೂಚಿಸಿದ 24 ಸಾರ್ವಜನಿಕ ರಜಾ ದಿನಗಳಲ್ಲಿ ಈದ್ ಮಿಲಾದ್ ರಜೆಯನ್ನು ಸೋಮವಾರ ಸೆಪ್ಟೆಂಬರ್ 16ರ 2024 ರಂದು ಸೂಚಿಸಲಾಗಿತ್ತು. 2024ರ ಸೆಪ್ಟೆಂಬರ್ 17ರಂದು ಹಿಂದುಗಳ ಹಬ್ಬವಾದ ಅನಂತ ಚತುರ್ದಶಿ ಇರುವುದರಿಂದ ಎರಡು ಸಮುದಾಯಗಳ ನಡುವೆ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆ ಕಾಪಾಡಲು ಮುಸ್ಲಿಂ ಸಮುದಾಯದ ವತಿಯಿಂದ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಆದ್ದರಿಂದ ಈದ್ ಮಿಲಾದ್ ಸಾರ್ವಜನಿಕ ರಜೆಯನ್ನು ಸೆಪ್ಟೆಂಬರ್ 16ರ ಬದಲಿಗೆ , ಸೆಪ್ಟೆಂಬರ್ 18ರ ಬುಧವಾರದಂದು ಘೋಷಿಸಲಾಗಿದೆ.
.
.