23.5 C
Karnataka
April 4, 2025
ಪ್ರಕಟಣೆ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ಸೆ. 29 ರಂದು 36ನೇ ವಾರ್ಷಿಕ ಮಹಾಸಭೆ



ಮುಂಬೈ.ಸೆ. 16: ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಸರ್ವ ಸದಸ್ಯರ 36 ನೇ ವರ್ಷದ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 29 ರವಿವಾರದಂದು ಪೂರ್ವಾಹ್ನ ಗಂಟೆ 10-30 ಕ್ಕೆ ಸರಿಯಾಗಿ ಉತ್ಕರ್ಷ ಮಂಡಲ್ ಸಭಾಗೃಹ ಪ್ರಥಮ ಮಹಡಿ ಸಹಯೋಗ ಮಂದಿರ, ಸಹಯೋಗ ಮಂದಿರ ಮಾರ್ಗ, ನೌಪಾಡಾ, ಥಾಣೆ (ಪಶ್ಚಿಮ) ಇಲ್ಲಿ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಅಂದು ಗತ ಮಹಾಸಭೆಯ ವರದಿ ವಾಚನ ಮತ್ತು ಅಂಗೀಕಾರ ಹಾಗೂ ಆಡಳಿತ ಮಂಡಳಿ ಒಪ್ಪಿಸುವ 2023 – 24ರ ಅವಧಿಯ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಲೆಕ್ಕ ಪತ್ರಗಳ ಅಂಗೀಕರಿಸುವುದಲ್ಲದೆ ನೂತನ ಲೆಕ್ಕ ಪರಿಶೋಧಕರುಗಳ ನೇಮಕ, 2024 – 26ನೇ ಸಾಲಿನ ಆಡಳಿತ ಮಂಡಳಿಗೆ 16 ಸದಸ್ಯರ ಆಯ್ಕೆ, ಫೋರ್ಟ್ ನಲ್ಲಿ ಇರುವ ಕಾರ್ಯಾಲಯವನ್ನು ದುರಸ್ಥಿ ಅಥವಾ ಮಾರಾಟ ಮಾಡುವ ಕುರಿತು ಹಾಗೂ ಸದಸ್ಯರ ಸಲಹೆ ಸೂಚನೆ ಸಭಾಧ್ಯಕ್ಷರ ಭಾಷಣ ಸೇರಿದಂತೆ ಮಹಾಸಭೆಯ ಕಾರ್ಯಕಲಾಪಗಳು ಜರಗಲಿವೆ ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ತಿಳಿಸಿದ್ದಾರೆ.
ಮುಂಬಯಿ ಮಹಾನಗರ ಮತ್ತು ಉಪನಗರಗಳ ಶಾಲಾ-ಕಾಲೇಜುಗಳಲ್ಲಿ ಅಥವಾ ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ 2023 – 24 ನೇ ಶೈಕ್ಷಣಿಕ ವರ್ಷಾಂತಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪರಸ್ಕಾರ ಮತ್ತು ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ನಿಟ್ಟಿನಲ್ಲಿ ಅರ್ಜಿ ಅಹ್ವಾನಿಸಲಾಗಿದ್ದು ಅದಕ್ಕಾಗಿ ಅರ್ಹ ವಿದ್ಯಾರ್ಥಿಗಳು ಪ್ರತಿಭಾ ಪರಸ್ಕಾರ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 29 ಅಂತಿಮ ದಿನವಾಗಿರುತ್ತದೆ. ಈ ಕುರಿತು ವಿವರವಾದ ಮಾಹಿತಿ ಒಳಗೊಂಡ ಸಂಘದ ವಾರ್ಷಿಕ ವರದಿಯನ್ನು ಸದಸ್ಯರಿಗೆ ಈಗಾಗಲೇ ಅಂಚೆಯ ಮುಖಾಂತರ ಕಳುಹಿಸಲಾಗಿದ್ದು ವರದಿಯ ಪ್ರತಿ ಸಿಗದೆ ಇರುವ ಸದಸ್ಯರು ಮತ್ತು ವಿಳಾಸ ಬದಲಾಯಿಸಿದ ಸದಸ್ಯರು ಸಂಘದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದೆಂದು ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಮತ್ತು ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್ ತಿಳಿಸಿದ್ದಾರೆ.
ಸದಸ್ಯರೆಲ್ಲರೂ ಸಕಾಲದಲ್ಲಿ ಆಗಮಿಸಿ ಮಹಾಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರೊಂದಿಗೆ ಮಹಾಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಗೌರವಾಧ್ಯಕ್ಷರಾದ ಸುರೇಶ ಎಸ್. ಪೂಜಾರಿ, ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಉಪಾಧ್ಯಕ್ಷರುಗಳಾದ ನರಸಿಂಹ ಎಂ. ಬಿಲ್ಲವ, ಆನಂದ ಕೆ. ಪೂಜಾರಿ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ಸುಶೀಲಾ ಆರ್. ಪೂಜಾರಿ, ಹರೀಶ ಎನ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ರತ್ನಾಕರ ಎಸ್. ಪೂಜಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಥವಾ ಸದಸ್ಯರನ್ನು (9869071413/9867811733/9820718785)ಸಂಪರ್ಕಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ.

.

.

.

Related posts

ಪೆ 4:   ಮಲಾಡ್ ಶ್ರೀ   ಮಹತೋಭಾರ ಶನೀಶ್ವರ ದೇವಸ್ಥಾನ  ದಸುವರ್ಣ ಸಂಭ್ರಮದ  ಕಾರ್ಯಕ್ರಮ ಸಮಾಲೋಚನಾ ಸಭೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮಲಾಡ್ ಸ್ಥಳೀಯ ಕಚೇರಿ ,ಜು 21 ರಂದು ಗುರುಪೂರ್ಣಿಮೆ, ಆಟಿಡೊಂಜಿ ದಿನ, ಕಾರ್ಯಕ್ರಮ.

Mumbai News Desk

ದಹಿಸರ್ ಪೂರ್ವ. ರಾವಲ್ಪಾಡ   ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನ, ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆ.

Mumbai News Desk

ಮಾ.16: ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ವತಿಯಿಂದ ವಿಶ್ವಮಹಿಳಾ ದಿನಾಚರಣೆ, ಸಂಸ್ಥಾಪಕ ದಿನಾಚರಣೆ ಹಾಗೂ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ೧೫ನೆಯ ವಾರ್ಷಿಕ ಸಮಾವೇಶ, “ಹೊರನಾಡಿನಲ್ಲಿ ತುಳುವರು” ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ನೃತ್ಯ ವೈಭವ ಹಾಗೂ ನಾಟಕ ಪ್ರದರ್ಶನ

Mumbai News Desk

ಡಿ.10 ರಂದು ಚಿತ್ರಪು ಬಿಲ್ಲವರ ಸಂಘ (ರಿ) ಮುಂಬಯಿ, 78ನೇ ವಾರ್ಷಿಕ ಮಹಾಸಭೆ

Mumbai News Desk