24.7 C
Karnataka
April 3, 2025
ಮುಂಬಯಿ

ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ, ಭಕ್ತಿ, ಸಡಗರದಿಂದ ಜರಗಿದ ವಿಶ್ವಕರ್ಮ ಮಹೋತ್ಸವ.



ಮುಂಬಯಿಯ ಹಿರಿಯ ಸಂಸ್ಥೆಗಳಲ್ಲೊಂದಾದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ನ ಅಶ್ರಯದಲ್ಲಿ ವಿಶ್ವಕರ್ಮ ಮಹೋತ್ಸವ ಸೆ. 16ರಂದು ಮಲಾಡ್ ಪೂರ್ವ ದತ್ತ ಮಂದಿರ ರೋಡ್ ಶ್ರೀ ಸ್ವಾಮಿನಾರಾಯಣ ಮಂದಿರದ ಸಭಾಗ್ರಹದಲ್ಲಿ ಭಕ್ತಿ,, ಸಂಭ್ರಮದೊಂದಿಗೆ ನಡೆಯಿತು.
ಮಹೋತ್ಸವದ ಅಂಗವಾಗಿ ಬೆಳ್ಳಿಗೆ 6 ಗಂಟೆಗೆ ಶಂಕರಾನಾಥ ಪುರೋಹಿತ, ಗೋಪಾಲಕ್ರಷ್ಣ ಪುರೋಹಿತರ, ಇವರ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮ ಹೋಮ ನಡೆಯಿತು.
ಭಾಸ್ಕರ್ ಆಚಾರ್ಯ, ರೀನಾ ಆಚಾರ್ಯ ದಂಪತಿ, ಥಾಣೆ
ಪೂಜಾ ಯಜಮಾನಿಕೆ ವಹಿಸಿದ್ದರು.
ಹೋಮ ಸಂಪನ್ನಗೊಂಡ ಬಳಿಕ ಕಲಶ ಪ್ರತಿಷ್ಠೆ ಮಾಡಿ ಪೂಜಿಸಿ, ಶ್ರೀ ವಿಶ್ವಕರ್ಮ ಪೂಜೆ ನಡೆಯುವ
4ನೇ ಮಹಡಿಯ ವೇದಿಕೆಯಲ್ಲಿ ಕಲಾವಿದ ಅಶೋಕ್ ಕೊಡ್ಯಾಡ್ಕ ಅವರು ಸುಂದರವಾಗಿ ನಿರ್ಮಿಸಿದ ಮಂಟಪದಲ್ಲಿ ಇರಿಸಿ, ಶ್ರೀ ವಿಶ್ವಕರ್ಮ ದೇವರಿಗೆ ಪೂಜೆ ಸಲ್ಲಿಸಲಾಯಿತು . ಬಳಿಕ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಸೇವಾ ರೂಪದಲ್ಲಿ ಪೂಜೆ ಸಲ್ಲಿಸಿದರು.
ಪೂಜೆ ನಡೆಯುತಿದ್ದಂತೆ ಭಜನಾ ಮಹೋತ್ಸವ ಆರಂಭವಾಯಿತು.
ಕರ್ನಾಟಕ ವಿಶ್ವಕರ್ಮ ಎಸೋಸಿಯೇಷನ್ ಕಾರ್ಯಕಾರಿ ಸಮಿತಿ, ಕರ್ನಾಟಕ ವಿಶ್ವಕರ್ಮ ಎಸೋಸಿಯೇಷನ್ ಯುವ ವಿಭಾಗ, ವಿಶ್ವಕರ್ಮ ಮಹಿಳಾ ಬಳಗ ಡೊಂಬಿವಲಿ,ಕರ್ನಾಟಕ ವಿಶ್ವಕರ್ಮ ಮಹಿಳಾ ವಿಭಾಗ, ಶ್ರೀ ಲಲಿತಾಂಬಾ ಭಜನಾ ಮಂಡಳಿ, ಬೊರಿವಲಿ, ಶ್ರೀ ವಿಶ್ವಕರ್ಮ ಕಾಳಿಕಾಂಬಾ ಭಜನಾ ವೃಂದ ಮಲಾಡ್, ಇದರ ಸದಸ್ಯರು ಭಜನಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನ 2.30 ಗಂಟೆಗೆ ಸಮಾಜದ ಮಕ್ಜಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಕಲಾ ಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಅವರ ತಂಡದವರು ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ತದ ನಂತರ ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ನ ಅಧ್ಯಕ್ಷರಾದ ರವೀಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ತಡ ಸಂಜೆ ಶ್ರೀ ವಿಶ್ವಕರ್ಮ ದೇವರಿಗೆ
ಮಹಾಮಂಗಳಾರತಿಯೊಂದಿಗೆ ಶ್ರೀ ವಿಶ್ವಕರ್ಮ ಮಹೋತ್ಸವ ಸಂಪನ್ನಗೊಡಿತು.
ಮಹೋತ್ಸವದಲ್ಲಿ ವಿವಿಧ ಸಂಘ – ಸಂಸ್ಥೆಯ ಪದಾಧಿಕಾರಿಗಳು, ಧಾರ್ಮಿಕ, ಸಾಮಾಜಿಕ ಮುಂದಾಳುಗಳು ಹಾಗೂ ವಿಶ್ವಕರ್ಮ ಭಾಂದವರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವಿಶ್ವಕರ್ಮ ದೇವರ ಪ್ರಸಾದ ಸ್ವೀಕರಿಸಿದರು.
ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ನ ಅಧ್ಯಕ್ಷ ರವೀಶ್ ಆಚಾರ್ಯ, ಉಪಾಧ್ಯಕ್ಷ ಗಣೇಶ್ ಕುಮಾರ್ ಕೆ, ಕಾರ್ಯದರ್ಶಿಗಳಾದ ಶರತ್ ಕುಮಾರ್ ಆಚಾರ್ಯ, ಪ್ರಸಾದ್ ಆಚಾರ್ಯ, ಕೋಶಾಧಿಕಾರಿ ಬಾಬುರಾಜ್ ಆಚಾರ್ಯ, ಜತೆ ಕೋಶಾಧಿಕಾರಿ ರವೀಂದ್ರ ಪಿ ಆಚಾರ್ಯ, ಅಂತರಿಕ ಲೆಕ್ಕ ಪರಿಶೋಧಕ ಹರೀಶ್ ಜಿ ಆಚಾರ್ಯ , ಸಮಿತಿ ಸದಸ್ಯರು, ವಿಶೇಷ ಆಮಂತ್ರಿತರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತ ಜಿ ಆಚಾರ್ಯ, ಉಪಕಾರ್ಯಾಧ್ಯಕ್ಷೆ ವೀಣಾ ಎಸ್ ಆಚಾರ್ಯ, ಸಂಚಾಲಕರುಗಳಾದ ಅಮಿತಾ ಡಿ ಆಚಾರ್ಯ, ರಾಜೇಶ್ವರಿ ಎಸ್ ಆಚಾರ್ಯ, ಸದಸ್ಯರು, ವಿಶೇಷ ಆಮಂತ್ರಿತರು, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಶ್ರೀ ವಿಶ್ವಕರ್ಮ ಮಹೋತ್ಸವ ಅಚ್ಚು ಕಟ್ಟಾಗಿ, ಸಾಂಗವಾಗಿ ಜರಗುವಲ್ಲಿ ಶ್ರಮಿಸಿದರು.

.

.

.

Related posts

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ಸ್ಥಳೀಯ ಕಚೇರಿಯ ನೂತನ ಸಮಿತಿಯ ರಚನೆ.

Mumbai News Desk

ಶ್ರೀ ಮಹಾವಿಷ್ಣು ಮಂದಿರ , ಡೊಂಬಿವಲಿ , ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ

Mumbai News Desk

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಪ್ರವೇಶ ದ್ವಾರದಲ್ಲಿ ವಾಲ್ ಅಫ್ ಹೇಪಿನೆಸ್ ಉದ್ಘಾಟನೆ.

Mumbai News Desk

ತುಳು ವೆಲ್ ಫೇರ್  ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ

Mumbai News Desk

ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ, ಬಹುಮಾನ ವಿತರಣೆ

Mumbai News Desk