24.7 C
Karnataka
April 3, 2025
ಪ್ರಕಟಣೆ

ಕುಲಾಲ ಸಂಘ ಮುಂಬಯಿ – ಸೆ. 22ರಂದು ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ,




ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ,  ಸಾಧಕರಿಗೆ ಸನ್ಮಾನ.  
ಕಿರು ಹಾಸ್ಯಮಯ  ನಾಟಕ” ಏರೆಗಾವು ಕಿರಿ ಕಿರಿ ” ಮಾಮಿ – ಮಾರ್ಮಲ್”.

ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಾಘು ಏ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ 22 ನೇ  ಸೆಪ್ಟೆಂಬರ್ 2024 ರಂದು ನವಿ ಮುಂಬಯಿ ಕನ್ನಡ ಸಂಘ ಪ್ಲಾಟ್ ನಂಬರ್ -2 ಸಿ, ಸೆಕ್ಟರ್ ನಂಬರ್ -9 ಏ, ವಾಶಿ ಬಸ್ ಡಿಪೋ ಸಮೀಪ ,ನವಿ ಮುಂಬಯಿ ಇಲ್ಲಿ ಜರಗಲಿರುವುದು.

   ದಿನ ಪೂರ್ತಿ ನಡೆಯುವ ಈ ಸಮಾರಂಭದಲ್ಲಿ ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ ಚೇರ್ ಮೆನ್ ಹಾಗೂ ಬಿಲ್ಡಿಂಗ್ ಕಮಿಟಿ ಚೇರ್ ಮೆನ್ ಗಿರೀಶ್ ಬಿ ಸಾಲಿಯಾನ್, ಸಂಘದ ಕಾರ್ಯದರ್ಶಿ ಕರುಣಾಕರ ಸಾಲಿಯಾನ್, ಮತ್ತು ನವಿ ಮುಂಬೈ ಸ್ಥಳೀಯ ಸಮಿತಿಯ ಜೊತೆ ಕೋಶಾಧಿಕಾರಿ ಆನಂದ್ ಆರ್ ಮೂಲ್ಯ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ದಾರಾ ಬಂಗೇರ ಅವರು ಈಗಿನ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಭಾಷಣ ಮಾಡಲಿದ್ದಾರೆ.

    ಸಂಘದ ಸ್ಥಳೀಯ ಸಮಿತಿಯ ಸದಸ್ಯರಿಂದ  ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆ 10 ಗಂಟೆಯಿಂದ ಜರಗಲಿದೆ, ಅಲ್ಲದೆ ನವಿ ಮುಂಬಯಿ ಸ್ಥಳೀಯ ಸಮಿತಿಯ ಸದಸ್ಯರು ಗಂಗಾಧರ ಬಂಟ್ವಾಳ ರಚಿಸಿ,,ಧನಂಜಯ ಮೂಳೂರು ನಿರ್ದೇಶನದ , “ಎರೆಗಾವು ಕಿರಿ ಕಿರಿ” ತುಳು ಕಿರು ಸಾಮಾಜಿಕ ಹಾಸ್ಯ ನಾಟಕ ಹಾಗೂ ಮಹಿಳಾ ವಿಭಾಗದ ವತಿಯಿಂದ ಅನಿಲ್ ಹೆಗ್ಡೆ ಪೆರ್ಡೂರು ಇವರು ಬರೆದ ಕಿರು ತುಳುನಾಟಕ ” ಮಾಮಿ ಮರ್ಮಲ್ “ಪ್ರದರ್ಶನವಿದೆ.

      ಈ ಸಮಾರಂಭಕ್ಕೆ ಎಲ್ಲ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಈ ನಮ್ಮ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕುಲಾಲಸಂಘದ ಪರವಾಗಿ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್,ಉಪಾಧ್ಯಕ್ಷರಾದ ಡಿ ಐ ಮೂಲ್ಯ , ಗೌರವ ಪ್ರದಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲಿಯಾನ್ ,ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್,ಹಾಗೂ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷ ವಾಸು ಏಸ್ ಬಂಗೇರ, ಉಪಕಾರ್ಯಧ್ಯಕ್ಷ ಸದಾನಂದ ಕುಲಾಲ್,ಕಾರ್ಯದರ್ಶಿ ಎಲ್ ಆರ್ ಮೂಲ್ಯ ಕೆಂಜಾರು,ಕೋಶಾಧಿಕಾರಿ ಸೂರಜ್ ಏಸ್ ಕುಲಾಲ್,ಜೊತೆ ಕಾರ್ಯದರ್ಶಿ ಕ್ರಪೇಶ್ ಕುಲಾಲ್ ,ಜೊತೆ ಕೋಶಾಧಿಕಾರಿ ಆನಂದ್ ಮೂಲ್ಯ ಕಾಮೋಟೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸಂಚಾಲಕ ಪ್ರಸಾದ್ ಎಸ್ ಮೂಲ್ಯ.ಹಾಗೂ ಸದಸ್ಯರು
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಏಸ್ ಕುಲಾಲ್ ,ಉಪಕಾರ್ಯಾಧ್ಯಕ್ಷೆ ದೇವಕಿ ಸುನಿಲ್ ಸಾಲಿಯಾನ್,  ಕಾರ್ಯದರ್ಶಿ ಬೇಬಿ ವಿ ಬಂಗೇರ .ಕೋಶಾಧಿಕಾರಿ ಉಷಾ ಆರ್ ಮೂಲ್ಯ, ಉಪ ಕಾರ್ಯದರ್ಶಿ ಶೋಭಾ ಏನ್ ಬಂಗೇರ, ಉಪ ಕೋಶಾಧಿಕಾರಿ ಸುಶೀಲಾ ಪಿ ಬಂಗೇರಾ,ಸಾಂಸ್ಕೃತಿಕ ಮತ್ತು ಕ್ರೀಡೆ ಪ್ರೇಮ ಎಲ್ ಮೂಲ್ಯ.ನವಿ ಮುಂಬಯಿ ಗುರುವಂದನಾ ಭಜನಾ ಮಂಡಳಿಯ ಸಂಚಾಲಕರು ಮಲ್ಲಿಕಾ ಡಿ ಕುಲಾಲ್ ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ.

Related posts

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ : ಮಾ. 8ರಿಂದ 10ನೇ ವಾರ್ಷಿಕೋತ್ಸವ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ :ನಾಳೆ (ನ. 30) ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ ಪಶ್ಚಿಮ – ಫೆ.10ರಂದು ಶ್ರೀ ಶನೀಶ್ವರ ದೇವರ ಮಹಾಪೂಜೆ.

Mumbai News Desk

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಜು21. ಕುಲಾಲ ಸಂಘದ ಗುರುವಂದನಾ ಭಜನ ಮಂಡಳಿಯಿಂದ ಗುರುಪೂರ್ಣಿಮೆ ಆಚರಣೆ,

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಮಹಿಳಾ ವಿಭಾಗ: ಜು 28ರಂದು ಆಶಾಡ ಹಬ್ಬ ಆಚರಣೆ,

Mumbai News Desk