
ಮುಂಬೈ: ವಡಲಾದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿಯ ಪ್ರೌಢಶಾಲೆಯಲ್ಲಿ ಕಳೆದ 20 ವರ್ಷಗಳ ಕಾಲ ಸುಧೀರ್ಘವಾಗಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿವಯೋಗಿ ಗು. ಸಣ್ಣಮನಿ ಅವರಿಗೆ ಬೀಳ್ಕೊಡುವ ಸಮಾರಂಭವನ್ನು ಆಗಸ್ಟ್ 30ರಂದು ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಮಾಮಹೇಶ್ವರೀ ಅವರು ಸೇವಾನಿವೃತ್ತರ ಕಿರುಪರಿಚಯ ಹಾಗೂ ಕಾರ್ಯ ತತ್ವರತೆ ಹಾಗೂ ಹಲವಾರು ಪ್ರಶಸ್ತಿ ಸಾಧನೆಗಳ ಗುಣಗಾನ ಗೈದರೆ, ಕಬೀರ್ ಅನ್ಸಾರಿ ಹಾಗೂ ವಿದ್ಯಾರ್ಥಿ ಯುವರು ಶಿವಯೋಗಿ ಸಣ್ಣಮನಿ ಅವರ ಕುರಿತಾಗಿ ಕಿರುಚಿತ್ರವನ್ನು ದೃಕ್ ಶ್ರವಣದ ಮುಖಾಂತರ ಪ್ರದರ್ಶಿಸಿ, ಗತಕಾಲದ ನೆನಪುಗಳು ಪುನಃ ಮರಕಳಿಸಲು ಕಾರಣರಾದರು.




ಶಾಲಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಪಾರ್ಥ ಸಾರಥಿ. ನಾಯಕ್ ಹಾಗೂ ಕಾರ್ಯದರ್ಶಿ ಶ್ರೀಮತಿ ಪದ್ಮಜಾ ಬನವಾಸಿ ಇವರು ಸೇವಾ ನಿವೃತ್ತ ಚಿತ್ರಕಲಾ ಶಿಕ್ಷಕ ಶಿವಯೋಗಿ ಸಣ್ಣಮನಿ ದಂಪತಿಗಳಿಗೆ ಶಾಲು, ಫಲ ಪುಷ್ಪ ಹಾಗೂ ಕಿರು ಕಾಣಿಕೆ ಮತ್ತು ಸ್ಮರಣಕೆ ಇತ್ತು ಸತ್ಕರಿಸಿದರು. ವಿಶ್ವಸ್ಥ ರಾದ ಶ್ರೀ ಅನಂತನ ಬನವಾಸಿ ಅವರು ನಿವೃತ್ತರ ಕಾರ್ಯವೈಖರಿಯನ್ನು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಡಾಕ್ಟರ್ ಅಮರೇಶ್ ಪಾಟೀಲ್ , ದಯಾನಂದ್ ಪೂಜಾರಿ ಮತ್ತು ಅನಂತ್ ಮೇಘರಾಜ್ ನಿವೃತ್ತರ ಬಗ್ಗೆ ಸ್ವರಚಿತ ಕವನ ವಾಚಿಸಿ, ಹೂಗುಚ್ಚವನ್ನಿತ್ತು ಶಾಲುಹೊದಿಸಿ , ಕಿರು ಕಾಣಿಕೆ ನೀಡಿದರು.
ಶಾಲಾ ಹಳೆಯ ವಿದ್ಯಾರ್ಥಿ ಹಾಗೂ “ಕರುನಾಡ ಸಿರಿ”ಯ ಅಧ್ಯಕ್ಷ ಬಾಲಚಂದ್ರ ದೇವಾಡಿಗ ಅವರು ಶಿವಯೋಗಿ ಸಣ್ಣಮನಿ ಯವರ ಗುಣಗಾನವನ್ನು ಮಾಡಿದರು.
ವಿದ್ಯಾರ್ಥಿಗಳಾದ ಮೋಕ್ಷ ಪೂಜಾರಿ., ಅನನ್ಯ ಪೂಜಾರಿ ಮೊದಲದ ವಿದ್ಯಾರ್ಥಿಗಳು ಶಿಕ್ಷಕರ ಕುರಿತು ಮಾತನಾಡಿದರು.
ಸಭಾ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಆಗಮಿಸಿದ ಶಿಕ್ಷಕ ಸಣ್ಣಮನಿ ಅವರ ಸಂಬಂಧಿಗಳನ್ನು ನಿವೃತ್ತ ಶಿಕ್ಷಕರುಗಳನ್ನು ಮುಖ್ಯೋಪಾಧ್ಯಾಯನಿ ಶ್ರೀಮತಿ ಉಮಾಮಹೇಶ್ವರಿ ಸ್ವಾಗತಿಸಿದರು. ಸೇವಾ ನಿವೃತ್ತರು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಮಹನೀಯರನ್ನು ಸ್ಮರಿಸಿದುದಲ್ಲದೆ, ಶಾಲೆಯಲ್ಲಿ ಜರುಗಿದ ಕೆಲವೊಂದು ರಂಜನೀಯ ಅನುಭವಗಳನ್ನು ಹಂಚಿಕೊಂಡರು. ಶಾಲಾ ಶಿಕ್ಷಕ ವರ್ಗದವರು ಅನುಭವಿಗಳಿದ್ದಾರೆ.
ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಉಜ್ವಲ ಭವಿಷ್ಯವನ್ನು ಹೊಂದಿ ಶಾಲೆ ಕೀರ್ತಿಯನ್ನು ಹೆಚ್ಚಿಸಿರಿ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕ ಸಣ್ಣಮನಿ ಯವರು ವಿದ್ಯಾರ್ಥಿಗೆ ಕಿವಿ ಮಾತನ್ನು ಹೇಳಿದರು.
ವೇದಿಕೆಯಲ್ಲಿದ್ದ ಗಣ್ಯರು ನಿವೃತ್ತರ ಕಾರ್ಯವೈಖರಿಗಳ ಕುರಿತು ಬೆಳಕು ಚೆಲ್ಲಿದರು.
ನಿವೃತ್ತ ಶಿಕ್ಷಕ ಶಿವಯೋಗಿ ಸಣ್ಣಮನಿ ಅವರ ಸ್ವಾಗತವನ್ನು ಎನ್. ಸಿ.ಸಿ ಕೆಡೆಟ್ ಗಳು ಹಾಗೂ ವಾದ್ಯ ಮೇಳಗಳಿಂದ ಸ್ವಾಗತಿಸಿದ್ದು, ತುಂಬಾ ರೋಚಕವಾಗಿತ್ತು.
ಇದೇ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಶಿಕ್ಷಕ ಸಿಬ್ಬಂದಿ ವರ್ಗ,
ನಿವೃತ್ತ ಶಿಕ್ಷಕರು ಶಾಲಾ ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕಿಯರಾದ
ಫ್ಲೋರಾ ಮೆಂಡನ್ಸಾ ಮತ್ತು ರತ್ನಾವತಿ ಸಾಲಿಯಾನ್ ಇವರು ನಿರ್ವಹಿಸಿದರೆ, ಆಗಮಿಸಿದಂತಹ ಸರ್ವರನ್ನು ಶಾಲಾ ಪರಿವೀಕ್ಷಕ ಪ್ರಕಾಶ್ಚಂದ್ರ ಎಂ ಆರ್ ಬಂಗೇರವರು ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕ ಶಿವಾಜಿ ಸಾಳುಂಖೆ ವಂದಿಸಿದರು.