
ಮೈಲ್ ಸ್ಟೋನ್ ಪೇಜೆಂಟ್ ಮಹಿಳೆಯರ ಸೌಂದರ್ಯ, ಆತ್ಮವಿಶ್ವಾಸ ಮತ್ತು ಸಬಲೀಕರಣವನ್ನು ಆಚರಿಸಲು ಮೀಸಲಾಗಿರುವ ಪ್ರಮುಖ ಜಾಗತಿಕ ವೇದಿಕೆಯಾಗಿದೆ. ಸಂಸ್ಥೆಯು ಪ್ರತಿ ವರ್ಷ ವಿವಿಧ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಜಾಗತಿಕ ಮಟ್ಟದಲ್ಲಿ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸುತ್ತ ಬರುತಿದೆ.
ಮೈಲ್ ಸ್ಟೋನ್ ಗ್ರೂಪ್, ಇಷ್ಟರ ತನಕ 19 ದೇಶದಲ್ಲಿ ಸ್ಪರ್ಧೆಯನ್ನು ಆಯೋಜಿಸಿದೆ.




ಮೈಲ್ ಸ್ಟೋನ್ ಪೆಜೇಂಟ್ ನ 19ನೇ ಅವ್ರತ್ತಿ ಸೆ. 11 ರಿಂದ ಸೆ. 14ರ ತನಕ ದುಬೈಯಲ್ಲಿ ನಡೆದಿದ್ದು, ಇದರಲ್ಲಿ 40 ದೇಶದ ಮಹಿಳೆಯರು ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಗ್ಲೋಬಲ್ ಇಂಟರ್ನ್ಯಾಷನಲ್ ಗೆ ಸ್ಪರ್ಧೆಸಿದ್ದರು.
ಮಿಸೆಸ್ ಗ್ಲೋಬಲ್ ಇಂಟರ್ನ್ಯಾಷನಲ್ ವಿಭಾಗದಲ್ಲಿ ಸ್ಪರ್ಧೆಸಿದ್ದ, ಮುಂಬಯಿಯ ಪ್ರಭಾ ನಾರಾಯಣ ಸುವರ್ಣ ಅವರು ತಮ್ಮ ಪ್ರತಿಭೆ ಮತ್ತು ಬುದ್ದಿವಂತಿಕೆ ಮೂಲಕ ತೀರ್ಪುಗಾರರ ಗಮನ ಸೆಳೆದು “ಟೂರಿಸಂ ಅಂಬ್ಯಾಸಿಡರ್” ಪ್ರಶಸ್ತಿಗೆ ಆಯ್ಕೆಯಾದರು.ಕೆನಡಾದ ಬೃಂದಾ ನಟರಾಜನ್, ಈಜಿಪ್ಟ್ ನ ಮಾಯಾ ಕರಿನ್, ಜಪಾನ್ ನ ಚಿಂಟಸು ಹಾರ್ಲಿ ಹಾಗೂ ಜಮೈಕಾ ದ ಜೂಡಿತ್ ಬರ್ನೆಸ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಪ್ರಭಾ ಸುವರ್ಣ ಅವರು 2024ರಲ್ಲಿ ಥಾಯ್ಲ್ಯಾಂಡ್ ನಲ್ಲಿ ನಡೆದ ಮೈಲ್ ಸ್ಟೋನ್ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಪೆಜೇಂಟ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ – ಮಂಗಳೂರು ಸೀಸನ್ – 3ರ ವಿಜೇತರಾಗಿರುವರು.
.
.