
ಮುಲ್ಕಿ. ಸೆ. 24: ಪ್ರಾಮಾಣಿಕ ಹಾಗೂ ಕಾರ್ಯದಕ್ಷತೆಯಿಂದ ಸಮಾಜ ಸೇವೆ ಮಾಡುತ್ತಿರುವ ಅದರಲ್ಲೂ ಬಡ ಮಕ್ಕಳ ವಿದ್ಯಾರ್ಚನೆಗೆ ಸಹಾಯಹಸ್ತ ನೀಡುತ್ತಿರುವ ಸಮಾಜ ಹಿತಚಿಂತಕನನ್ನು ಆರಿಸಿ ಸನ್ಮಾನಿಸಿರುವುದು ಅಭಿನಂದನೀಯ. ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ. ಹೊಸ ಆಂಗಣ ಪತ್ರಿಕೆಯು ನೂರ್ಕಾಲ ಬಾಳಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾದ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಅವರೆ ಸೆ. 24ರಂದು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಹೊಸ ಆಂಗಣ ಮಾಸಿಕ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಪತ್ರಿಕೆಯ 110ನೇ ಇಯತ್ತೆಯ ಬಿಡುಗಡೆ ಹಾಗೂ ಸಾಧಕರ ಗೌರವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅತಿಥಿಯಾಗಿ ಆಗಮಿಸಿದ್ದ ಮುಂಬಯಿ ಪತ್ರಕರ್ತ ಉಮೇಶ್. ಕೆ. ಅಂಚನ್ ಮಾತನಾಡಿ ಗ್ರಾಮೀಣ ವಲಯದಲ್ಲಿ ಸ್ವಾರ್ಥರಹಿತವಾಗಿ ಸಮಾಜ ಸೇವೆ ಮಾಡುವ ವ್ಯಕ್ತಿಗಳನ್ನು ಗುರುತಿಸಿ ತಿಂಗಳಿಗೊಬ್ಬರಂತೆ ಸನ್ಮಾನಿಸುವ ಕಾರ್ಯ ಅಭಿನಂದನೀಯ. ಇದೊಂದು ಉತ್ತಮ ಕಾರ್ಯಕ್ರಮದ ಮಾದರಿಯಾಗಿದೆ ಎಂದರು.
ಮುಲ್ಕಿ ನಗರ ಪಂಚಾಯತ್ ಅದ್ಯಕ್ಷ ಸತೀಶ್ ಎಸ್. ಅಂಚನ್ ರವರು ಹೊಸ ಆಂಗಣ ಪತ್ರಿಕೆಯ ಸರ್ವ ಕಾರ್ಯಕಲಾಪಗಳಿಗೆ ಶುಭ ಕೋರಿದರು.
ಈ ಸಂಧರ್ಭದಲ್ಲಿ ಸಮಾಜಸೇವಕ ಹಬೀಬುಲ್ಲ ದಂಪತಿಗಳನ್ನು ಸನ್ಮಾನಿಸಲಾಯಿತು ಹಾಗೂ ಅಮೇರಿಕಾ ಪ್ರವಾಸಗೖಯಲಿರುವ ಹೊಸ ಆಂಗಣ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ.ಸಾಲ್ಯಾನ್ ಅವರನ್ನು ಗೌರವಿಸಲಾಯಿತು.

ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ .ಫ್ರೊ. ಸ್ಯಾಮ್ ಮಾಬೆನ್ ಅಭಿನಂಧನಾ ಮಾತುಗಳನ್ನಾಡಿದರು. ದಿನೇಶ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮವನ್ನು ರವಿಚಂದ್ರರವರು ನಿರೂಪಿಸಿದರು.
ಮುಲ್ಕಿ ಬಿಲ್ಲವ ಸಂಘದ ಅದ್ಯಕ್ಷ ಪ್ರಕಾಶ್ ಸುವರ್ಣ, ಮುಲ್ಕಿ ಅತಿಕಾರಿಬೆಟ್ಟು ಗ್ರಾಮ ಪಂ. ಉಪಾದ್ಯಕ್ಷ ಮನೋಹರ್ ಕೋಟ್ಯಾನ್ , ಉದಯ ಕುಮಾರ್ ಕುಬೆವೂರು, ಜಾನ್ ಕ್ಟಾಡ್ರಸ್, ವಾಸು ಪೂಜಾರಿ ಚಿತ್ರಾಪು, ಬಂಕಿ ನಾಯಕ್, ರಮೇಶ್ ಅಮೀನ್ ಕೊಕ್ಕರಕಲ್, ರವಿಚಂದ್ರ ರಾವ್ ರವಿ ಅಂಚನ್, ಸೇಸಪ್ಪ ದೇವಾಡಿಗ ಮತ್ತಿತರರು ಉಪಸ್ತಿತರಿದ್ದರು.
.
.